
ಪ್ರಗತಿವಾಹಿನಿ ಸುದ್ದಿ: ವರದಕ್ಷಿಣೆ ಕಿರುಕುಳ, ಹಿಂಸೆಗೆ ಬೇಸತ್ತ ಮಹಿಳೆ ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕೋಲಾರ ಜಿಲ್ಲೆಯ ಮಾಲೂರು ತಾಲೂಕಿನ ಕಾಡದೇವನಹಳ್ಳಿಯಲ್ಲಿ ನಡೆದಿದೆ.
ರಶ್ಮಿ (25) ಆತ್ಮಹತ್ಯೆ ಮಾಡಿಕೊಂಡ ಮಹಿಳೆ. ದಿನೇಶ್ ಹಾಗೂ ರಶ್ಮಿ ಖಾಸಗಿ ಫೈನಾನ್ಸ್ ಕಂಪನಿಯಲ್ಲಿ ಕೆಲಾ ಮಾಡುತ್ತಿದ್ದರು. ಇಬ್ಬರೂ ಪ್ರೀತಿಸಿ ವಿವಾಹವಾಗಿದ್ದರು. ವರ್ಷದ ಹಿಂದಷ್ಟೆ ವಿವಾಹವಾಗಿತ್ತು. ಮೂರು ತಿಂಗಳ ಹಿಂದಷ್ಟೇ ರಶ್ಮಿಗೆ ಗರ್ಭಪಾತವೂ ಆಗಿತ್ತು. ಆದರೂ ಮನೆಯವರ ಕಿರುಕುಳ ನಿಂತಿರಲಿಲ್ಲ. ಅತ್ತೆ, ಪತಿಯ ದೊಡ್ದಮ್ಮ ಮನೆಯವರೆಲ್ಲ ಸೇರಿ ವರದಕ್ಷಿಣೆಗಾಗಿ ಪೀಡಿಸುತ್ತಿದ್ದರಂತೆ. ವರದಕ್ಷಿಣೆನೂ ಇಲ್ಲ, ಮಗುನೂ ಇಲ್ಲ ಎಂದು ಹಿಯಾಳಿಸುತ್ತಿದ್ದರಂತೆ.
ಇದರಿಂದ ತೀವ್ರವಾಗಿ ನೊಂದ ರಶ್ಮಿ, ಡೆತ್ ನೋಟ್ ಬರೆದಿಟ್ಟು ಅತ್ತೆ, ಪತಿಯ ದೊಡ್ಡಮ್ಮ ಹೆಸರು ಬರೆದಿಟ್ಟು ಆತ್ಮಹತ್ಯೆಗೆ ಶರಣಾಗಿದ್ದಾಳೆ. ಮಾಲೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮೃತ ರಶ್ಮಿ ಪತಿ ದಿನೇಶ್, ಮಾವ ಅಪ್ಪಾಜಿ ಗೌಡ, ಅತ್ತೆ ಸರೋಜಮ್ಮ, ದೊಡ್ದತ್ತೆ ರತ್ನಮ್ಮರನ್ನು ಬಂಧಿಸಿದ್ದಾರೆ.