Kannada NewsLatest

*ಶಕ್ತಿದೇವತೆಗಳಿಗೆ ಪೂಜೆ ಸಲ್ಲಿಸಿ ಪ್ರಚಾರ ಕಾರ್ಯಕ್ಕೆ ಚಾಲನೆ ನೀಡಿದ ಡಾ.ಅಂಜಲಿ ನಿಂಬಾಳಕರ್*

ಪ್ರಗತಿವಾಹಿನಿ ಸುದ್ದಿ; ಖಾನಾಪುರ: ಸ್ಥಳೀಯ ಶಾಸಕಿ ಡಾ.ಅಂಜಲಿ ನಿಂಬಾಳಕರ ಗುರುವಾರ ಪಟ್ಟಣದ ಚೌರಾಶಿದೇವಿ ಮತ್ತು ತಾಲೂಕಿನ ಕಕ್ಕೇರಿ ಗ್ರಾಮದ ಬಿಷ್ಠಾದೇವಿ ದೇವಾಲಯಗಳಲ್ಲಿ ಉಭಯ ಶಕ್ತಿದೇವಿಯರಿಗೆ ವಿಶೇಷ ಪೂಜೆ ಸಲ್ಲಿಸುವ ಮೂಲಕ ಮುಂಬರುವ ಚುನಾವಣೆಯ ಪ್ರಚಾರ ಕಾರ್ಯಕ್ಕೆ ವಿದ್ಯುಕ್ತ ಚಾಲನೆ ನೀಡಿದರು.

ಕಕ್ಕೇರಿ ಗ್ರಾಮದ ಬಿಷ್ಠಾದೇವಿ ಆಲಯದ ಮುಂಭಾಗದಲ್ಲಿ ತಮ್ಮ ಬೆಂಬಲಿಗರು ಮತ್ತು ಕಾಂಗ್ರೆಸ್ ಮುಖಂಡರೊಂದಿಗೆ ಪಕ್ಷದ ಪ್ರಚಾರ ವಾಹನಕ್ಕೆ ಪೂಜೆ ಸಲ್ಲಿಸಿ ಮಾತನಾಡಿದ ಅವರು, “ತಾಲೂಕಿನ ವಿವಿಧ ಭಾಗಗಳಲ್ಲಿ ಕಳೆದ 5 ವರ್ಷಗಳಿಂದ ಹಲವು ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಂಡು ಇಲ್ಲಿಯ ನಾಗರಿಕರಿಗೆ ಅನುಕೂಲ ಕಲ್ಪಿಸುವ ಪ್ರಾಮಾಣಿಕ ಪ್ರಯತ್ನವನ್ನು ಮಾಡಿದ್ದೇನೆ. ಕ್ಷೇತ್ರದಾದ್ಯಂತ ಸಂಚರಿಸಿ ಕ್ಷೇತ್ರದ ಜನರ ನಾಡಿಮಿಡಿತವನ್ನು ಅರಿತು ಅವರ ಸಮಸ್ಯೆ, ಸಂಕಷ್ಟಗಳನ್ನು ಆಲಿಸಿ ಅವುಗಳಿಗೆ ಪರಿಹಾರ ಒದಗಿಸುವ ಪ್ರಯತ್ನವನ್ನು ಮಾಡಿದ್ದೇನೆ. ಕ್ಷೇತ್ರದ ನಾಗರಿಕರಿಂದ ಕೇಳಿಬಂದ ಬೇಡಿಕೆಗಳನ್ನು ಸಕರ್ಾರಕ್ಕೆ ಗಮನಕ್ಕೆ ತಂದು ಸರ್ಕಾರದಿಂದ ಅನುದಾನ ಮಂಜೂರು ಮಾಡಿಸಿಕೊಂಡು ಬಂದು ಜನರು ಸೂಚಸಿದ ಕೆಲಸವನ್ನು ಮಾಡಿತೋರಿಸಿದ್ದೇನೆ. ನನ್ನ ಈ ಐದು ವರ್ಷಗಳ ಜನಪರ ಕಾಮಗಾರಿಗಳೇ ನನ್ನನ್ನು ಚುನಾವಣೆಯಲ್ಲಿ ಬಹುಮತದಿಂದ ಗೆಲ್ಲಿಸಲು ಸಹಾಯಮಾಡಲಿವೆ” ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ರಿಯಾಜಹ್ಮದ ಪಟೇಲ, ಭೀಮಪ್ಪ ಅಂಬೋಜಿ, ಕಾಸೀಂ ಹಟ್ಟಿಹೊಳಿ, ಮಹಾದೇವ ಕೋಳಿ, ಮಧು ಕವಳೇಕರ, ಮಹಾಂತೇಶ ಕಲ್ಯಾಣಿ, ಮಹಾಂತೇಶ ರಾಹೂತ, ಸಂತೋಷ ಹಂಜಿ, ಮಲ್ಲೇಶಿ ಪೋಳ, ಲಕ್ಷ್ಮಣ ಮಾದಾರ, ಅನಿತಾ ದಂಡಗಲ್, ಸುರೇಶ ಜಾಧವ, ವಿವೇಕ ತಡಕೋಡ, ಅಂಬೋಜಿ, ರಾಮಚಂದ್ರ ಪಾಟೀಲ, ಗೀತಾ ಅಂಬಡಗಟ್ಟಿ, ಸುರೇಶ ದಂಡಗಲ, ಸೂರ್ಯಕಾಂತ ಕುಲಕಣರ್ಣಿ ಹಾಗೂ ಇತರರು ಇದ್ದರು.

Home add -Advt
https://pragati.taskdun.com/sudden-transfer-of-4-ias-officers-including-mg-hiremath/

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button