*ಡಾ. ಬಿ.ಆರ್.ಅಂಬೇಡ್ಕರ್ ನಿಪ್ಪಾಣಿಗೆ ಬಂದು 100 ವರ್ಷ ಹಿನ್ನೆಲೆ: ಎಪ್ರಿಲ್ 15ರಂದು ಬೃಹತ್ ಸಮಾವೇಶ*

ಮಾಜಿ ಸಚಿವ ಎನ್.ಮಹೇಶ ಮಾಹಿತಿ
ಪ್ರಗತಿವಾಹಿನಿ ಸುದ್ದಿ: ನಿಪ್ಪಾಣಿ ನಗರಕ್ಕೆ ಡಾ. ಬಿ.ಆರ್.ಅಂಬೇಡ್ಕರ್ ಹಾಗೂ ಅವರ ಧರ್ಮಪತ್ನಿ ರಮಾಬಾಯಿಯವರು ಎಪ್ರಿಲ್ ೧೧ ರಂದು ನಿಪ್ಪಾಣಿಗೆ ಬಂದು ೧೦೦ ವರ್ಷ ಪೂರೈಸಿದ ಸವಿನೆನಪಿಗಾಗಿ ನಿಪ್ಪಾಣಿಯಲ್ಲಿ ಎಪ್ರಿಲ್ ೧೫ ರಂದು ಬೃಹತ್ ಸಮಾವೇಶ ಹಮ್ಮಿಕೊಳ್ಳಲಾಗಿದೆ ಎಂದು ಮಾಜಿ ಸಚಿವ, ಎನ್.ಮಹೇಶ ಹೇಳಿದರು.
ಅವರು ನಿಪ್ಪಾಣಿ ಪಟ್ಟಣದ ಹಾಲಸಿಧ್ದನಾಥ ಸಕ್ಕರೆ ಕಾರ್ಖಾನೆಯ ಸಭಾಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಡಾ! ಅಂಬೇಡ್ಕರವರಿಗೆ ಆದ ಅನ್ಯಾಯ,ಮೋಸ, ಗೌರವ ಕೊಟ್ಟವರ ಬಗ್ಗೆ ತಿಳಿಹೇಳುವ ಉದ್ದೇಶದಿಂದ ಶಾಸಕಿ ಶಶಿಕಲಾ ಜೊಲ್ಲೆ ಹಾಗೂ ಮಾಜಿ ಸಂಸದ ಅಣ್ಣಾಸಾಹೇಬ ಜೊಲ್ಲೆಯವರು ಈ ಸಮಾವೇಶವನ್ನು ಆಯೋಜನೆ ಮಾಡಿದ್ದಾರೆ. ಎಪ್ರಿಲ್ ೧೧ ರಿಂದ ೧೫ ವರೆಗೆ ಬೆಂಗಳೂರಿನಿಂದ ನಿಪ್ಪಾಣಿವರೆಗೆ ಭೀಮಯಾತ್ರೆಯನ್ನು ಮಾಡಲಾಗುವುದು.ಈ ಭೀಮಯಾತ್ರೆಯ ಉದ್ದಕ್ಕೂ ಆಯ್ದ ಸ್ಥಳಗಳಲ್ಲಿ ಜಾಗೃತಿ ಸಭೆಗಳನ್ನು ಮಾಡಿಕೊಂಡು ಬರುತ್ತೇವೆ.ಬೃಹತ್ ಸಮಾವೇಶದಲ್ಲಿ ಕೇಂದ್ರ ಸಚಿವರು ಪಾಲ್ಗೋಳುವ ಬಗ್ಗೆ ಮುಂದಿನ ದಿನಗಳಲ್ಲಿ ತಿಳಿಸಲಾಗುವುದು ಎಂದರು.ಈ ಸಮಾವೇಶವು ದೇಶದ ಗಮನಸೇಳೆಯವ ಸಮಾವೇಶ ಆಗಲಿದೆ ಎಂದರು.
ಕಾಂಗ್ರೆಸ್ ಪಕ್ಷ ಅಂಬೇಡ್ಕರ್ ರವರ ವಿರೋಧಿ
ಅಂಬೇಡ್ಕರ್ ರವರು ನಿಧನರಾದ ಮೇಲೆ ಆಗಿನ ನೆಹರು ನೇತ್ರತ್ವದ ಕೇಂದ್ರ ಸರ್ಕಾರ ಸರ್ಕಾರಿ ಗೌರವದೊಂದಿಗೆ ಅಂತ್ಯಸಂಸ್ಕಾರ ಮಾಡದೇ ದೊಡ್ಡ ಅವಮಾನ ಮಾಡಿದೆ. ಬ್ರಿಟಿಷರ ಏಜೆಂಟು,ದೇಶದ್ರೋಹಿ ಎಂದು ಕಾಂಗ್ರೆಸ್ ಪಕ್ಷವು ಅಂಬೇಡ್ಕರವರಿಗೆ ಪಟ್ಟ ಕಟ್ಟಿದ್ದಾರೆ.ಆದರೆ ಬಿಜೆಪಿಯು ಅಂಬೇಡ್ಕರವರಿಗೆ ಎಲ್ಲಿ ಅವಮಾನವಾಗಿದೆ ಅದನ್ನು ಸರಿಪಡಿಸುವ ಕೆಲಸ ಮಾಡುತ್ತೇವೆ ಎಂದರು.
ಬಳಿಕ ಶಾಸಕಿ ಶಶಿಕಲಾ ಜೊಲ್ಲೆ ಮಾತನಾಡಿ ಎಪ್ರಿಲ್ ೧೧ ಕ್ಕೆ ನಿಪ್ಪಾಣಿ ನಗರಕ್ಕೆ ಡಾ! ಬಾಬಾಸಾಹೇಬ ಅಂಬೇಡ್ಕರ್ ಹಾಗೂ ಅವರ ಧರ್ಮಪತ್ನಿ ರಮಾಬಾಯಿಯವರು ಆಗಮಿಸಿ ೧೦೦ ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಎಪ್ರಿಲ್ ೧೫ ರಂದು ನಿಪ್ಪಾಣಿಯಲ್ಲಿ ಬೃಹತ್ ಸಮಾವೇಶಯನ್ನು ಮಾಡಲಾಗುವುದು ಎಂದರು.ಚಳಿಗಾಲದ ಅಧಿವೇಶನ ಸಂಧರ್ಭದಲ್ಲಿ ನಿಪ್ಪಾಣಿಗೆ ಬಾಬಾಸಾಹೇಬ ಅಂಬೇಡ್ಕರ್ ರವರು ಬಂದು ೧೦೦ ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಬೃಹತ್ ಸಮಾವೇಶ ಆಗಬೇಕೆಂದು ಸರ್ಕಾರಕ್ಕೆ ಮನವಿಮಾಡಿಕೊಂಡಿದ್ದೆ. ಆದ್ರೆ ಸರ್ಕಾರದಿಂದ ಯಾವ ರೀತಿಯ ಬೆಂಬಲ ಸಿಗಲಿಲ್ಲ.
ಗಾಂಧೀಜಿಯವರು ಬೆಳಗಾವಿ ಬಂದು ನೂರು ವರ್ಷವಾಯಿತು. ಅಲ್ಲಿ ಬೃಹತ್ ಸಮಾವೇಶವಾಯಿತು. ಆದ್ರೆ ಅಂಬೇಡ್ಕರರವರು ನಿಪ್ಪಾಣಿಗೆ ಬಂದು ನೂರು ವರ್ಷ ಪೂರೈಸಿದೆ. ಸರ್ಕಾರಕ್ಕೆ ಅಂಬೇಡ್ಕರ್ ರವರ ಸ್ಮರಣೆ ಯಾಕೆ ಆಗುತ್ತಿಲ್ಲ ಎಂದು ಪ್ರಶ್ನಿಸಿದರು. ಕೇಂದ್ರದ ಹಾಗೂ ರಾಜ್ಯದ ನಮ್ಮ ಪಕ್ಷದ ವರಿಷ್ಠರು ಇಲ್ಲಿ ಕಾರ್ಯಕ್ರಮ ಆಗಬೇಕೆಂದು ಬೆಂಬಲ ಸೂಚಿಸಿದ್ದಾರೆ. ಈ ಕಾರ್ಯಕ್ರಮವು ಇಡೀ ರಾಷ್ಟ್ರವೇ ಗಮನಸೇಳೆಯುವ ಕಾರ್ಯಕ್ರಮವಾಗಲಿದೆ ಎಂದರು.
ಈ ಸಂಧರ್ಭದಲ್ಲಿ ಮಾಜಿ ಸಂಸದರಾದ ಮುನಿಸ್ವಾಮಿ,ಅಣ್ಣಾಸಾಹೇಬ ಜೊಲ್ಲೆ,ಶಾಸಕರಾದ ದುರ್ಯೋಧನ ಐಹೊಳೆ, ಮಾಜಿ ಎಸ್.ಸಿ.ಮೋರ್ಚಾದ ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ಮಹೇಂದ್ರ ಕಾತ್ಯಾಲ,ಜಿಲ್ಲಾಧ್ಯಕ್ಷರಾದ ಶ್ರೀ ಸತೀಶ ಅಪ್ಪಾಜಿಗೋಳ, ನಗರಸಭೆ ಅಧ್ಯಕ್ಷರಾದ ಸೋನಾಲ್ ಕೊಠಡಿಯಾ,ಉಪಾಧ್ಯಕ್ಷರಾದ ಸಂತೋಷ ಸಾಂಗವಕರ ಸದಸ್ಯರು,ಸಮಾಜದ ಮುಖಂಡರು ಉಪಸ್ಥಿತರಿದ್ದರು.