Latest

ನನ್ನನ್ನು ಹಾಗೆ ಕರೆಯಬೇಡಿ; ಆ ಪದವೇ ಡೆಂಜರ್ ಎಂದ ಡಾ.ಜಿ. ಪರಮೇಶ್ವರ್

ಪ್ರಗತಿವಾಹಿನಿ ಸುದ್ದಿ; ಮೈಸೂರು: ಪರಮೇಶ್ವರ್ ಮುಂದಿನ ಸಿಎಂ ಎಂದು ಹಲವರು ಕರೆಯುತ್ತಿದ್ದಾರೆ. ನನ್ನನ್ನು ಹಾಗೇ ಕರೆಯಬೇಡಿ ಎಂದು ಹೇಳಿದ್ದೇನೆ. ಸಿಎಂ ವಿಚಾರದ ಚರ್ಚೆ ಸದ್ಯಕ್ಕೆ ಬೇಡ ಎಂದು ಮಾಜಿ ಡಿಸಿಎಂ, ಕಾಂಗ್ರೆಸ್ ನಾಯಕ ಡಾ.ಜಿ.ಪರಮೇಶ್ವರ್ ತಿಳಿಸಿದ್ದಾರೆ.

ಮೈಸೂರಿನಲ್ಲಿ ಮಾತನಾಡಿದ ಅವರು, ಮುಂದಿನ ವಿಧಾನಸಭಾ ಚುನಾವಣೆಗೆ ಇನ್ನೂ 2 ವರ್ಷವಿದೆ. ಅಲ್ಲಿಯವರೆಗೂ ಸಿಎಂ ವಿಚಾರದ ಚರ್ಚೆ ಬೇಡ. ನನ್ನ ಸ್ನೇಹಿತರಿಗೂ ಈ ವಿಚಾರದ ಬಗ್ಗೆ ಚರ್ಚಿಸದಂತೆ ಹೇಳಿದ್ದೇನೆ ಎಂದರು.

ಕಾಂಗ್ರೆಸ್ ನಲ್ಲಿ ಸಿಎಂ ಅಭ್ಯರ್ಥಿ ಕುರಿತಾಗಿ ಭಾರಿ ಚರ್ಚೆ ನಡೆದಿರುವ ಬೆನ್ನಲ್ಲೇ ಮಧುಗಿರಿಯಲ್ಲಿ ವಿವಿಧ ಕಾಮಗಾರಿಗೆ ಚಾಲನೆ ನಿಡಿದ ಪರಮೇಶ್ವರ ಅವರಿಗೆ ಮುಂದಿನ ಸಿಎಂ ಪರಮೇಶ್ವರ್ ಎಂದು ಘೋಷಣೆ ಕೂಗಿ ಬೆಂಬಲಿಸಿದ್ದಾರೆ. ಈ ವೇಳೆ ಮಾತನಾಡಿದ ಅವರು, ಭಾವಿ ಸಿಎಂ ಎಂದು ಹೇಳಬೇಡಿ ಆ ಪದವೇ ನನಗೆ ಅಪಾಯವೆನಿಸುತ್ತೆ ಎಂದು ಹೇಳುವ ಮೂಲಕ ಪರಮೇಶ್ವರ್ ಅಚ್ಚರಿ ಮೂಡಿಸಿದ್ದಾರೆ.

ಮಾಜಿ ಮಹಿಳಾ ಕಾರ್ಪೊರೇಟರ್ ಬರ್ಬರ ಹತ್ಯೆ
ಇದೊಂದು ರಾಜಕೀಯ ಪ್ರೇರಿತ ಹತ್ಯೆ; ಬಿಜೆಪಿ ಮುಖಂಡನ ಆರೋಪ

Home add -Advt

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button