Kannada NewsLatest

ಸಿಎಂ ಕಾರ್ಯದರ್ಶಿಯಾಗಿ ಡಾ. ಗಿರಿಶ್ ಹೊಸೂರ್ ಅಧಿಕಾರ ಸ್ವೀಕಾರ

ಪ್ರಗತಿವಾಹಿನಿ ಸುದ್ದಿ, ಬೆಂಗಳೂರು -: ಮುಖ್ಯ ಮಂತ್ರಿಯವರ ಕಾರ್ಯದರ್ಶಿಯಾಗಿ ಭಾರತ ಸರ್ಕಾರದ ಮಾನವ ಸಂಪನ್ಮೂಲ ಇಲಾಖೆಯ ಜಂಟಿ ಕಾರ್ಯದರ್ಶಿಯಾಗಿದ್ದ ಡಾ. ಗಿರೀಶ್ ಸಿ ಹೊಸೂರ್ ಅವರು ಇಂದು ಅಧಿಕಾರ ಸ್ವೀಕರಿಸಿದ್ದಾರೆ.
ಕೇಂದ್ರ ಸರ್ಕಾರದ ‌ಮಾನವ ಸಂಪನ್ಮೂಲ ಇಲಾಖೆಯ ಜಂಟಿ ಕಾರ್ಯದರ್ಶಿಯಾಗಿ  ಕಾರ್ಯನಿರ್ವಹಿಸುತ್ತಿದ್ದ ಇವರನ್ನು ಕೇಂದ್ರ ಸರ್ಕಾರವು ಮುಖ್ಯಮಂತ್ರಿಯವರ ಕಾರ್ಯದರ್ಶಿಯಾಗಿ ನೇಮಕವಾಗಲು ಕರ್ತವ್ಯದಿಂದ ಬಿಡುಗಡೆ ಮಾಡಿದೆ.

ದೆಹಲಿಯ ಜೆಎನ್ ಯು , ಜಮಿಯಾ ಮಿಲಿಯಾ , ದೆಹಲಿ‌ ವಿಶ್ವವಿದ್ಯಾಲಯ, ಅಲಹಾಬಾದ್ , ಮಣಿಪುರ ವಿಶ್ವವಿದ್ಯಾಲಯ ಸೇರಿದಂತೆ ಇತರ ವಿಶ್ವವಿದ್ಯಾಲಯಗಳ ವಿದ್ಯಾರ್ಥಿಗಳ ‌ಹಾಗೂ‌ ಇತರ ಪ್ರತಿಭಟನೆಯನ್ನು‌ ಸಕ್ರೀಯವಾಗಿ ಶಮನಗೊಳಿಸಿ , ಗುಣಾತ್ಮಕ ಶಿಕ್ಷಣಕ್ಕಾಗಿ ಗಣನೀಯವಾಗಿ ಸೇವೆಸಲ್ಲಿಸಿದ್ದಾರೆ. ಹೊಸ ಶಿಕ್ಷಣ‌ನೀತಿ ರೂಪಿಸುವಲ್ಲಿ ಸಕ್ರಿಯ ಪಾತ್ರವಹಿಸಿದ್ದಾರೆ.

ರಾಷ್ಟ್ರಾದ್ಯಂತ 13 ನೂತನ ವಿಶ್ವವಿದ್ಯಾಲಯಗಳ ಸ್ಥಾಪನೆಗೆ ಹಾಗೂ ಮೂಲಭೂತ ಸೌಕರ್ಯಗಳ ಅಭಿವೃದ್ಧಿ ಹಾಗೂ ಗುಣಾತ್ಮಕ ಶಿಕ್ಷಣ ಒದಗಿಸಲು ಮಹತ್ತರ ಪಾತ್ರವಹಿಸಿದ್ದಾರೆ. ರಾಷ್ಟ್ರದ 42 ವಿಶ್ವವಿದ್ಯಾಲಯಗಳಿಗೆ ಮೂಭೂತ ಸೌಕರ್ಯ ಒದಗಿಸಲು ಅನುದಾನ ನೀಡಿ, ಸ್ಥಗಿತಗೊಂಡಿದ್ದ ಅಭಿವೃದ್ಧಿ ಕಾಮಗಾರಿಗಳನ್ನು ಅನುಷ್ಠಾನ ಗೊಳಿಸುವಲ್ಲಿ‌ ಗಣನೀಯ ಪಾತ್ರವಹಿಸಿದ್ದಾರೆ.

ಯುಜಿಸಿಯಲ್ಲಿ ಅನೇಕ‌ ಗುಣಾತ್ಮಕ ಬದಲಾವಣೆ ತರಲು ಕಾರಣೀಭೂತರಾಗಿದ್ದಾರೆ. ಕೇಂದ್ರ ಸರ್ಕಾರವು ಗುಣಾತ್ಮಕ ಶಿಕ್ಷಣಕ್ಕಾಗಿ ರಚಿಸಲಾಗಿದ್ದ ಶಿಕ್ಷಣ ಅಧ್ಯಯನ ಸಮಿತಿಯ ಸದಸ್ಯರಾಗಿ ಅತ್ಯಮೂಲ್ಯ ಕೊಡುಗೆ ನೀಡಿದ್ದಾರೆ.
ದೇಶದ ಎಲ್ಲಾ ಸರ್ಕಾರಿ ಶಾಲೆಗಳ ವಿದ್ಯಾರ್ಥಿಗಳಿಗೆ ಸ್ವಚ್ಚತೆಯ ಬಗ್ಗೆ ವಿಶಿಷ್ಟ ಕಾರ್ಯಕ್ರಮಗಳನ್ನು ರೂಪಿಸಿ,‌ ಅನುಷ್ಟಾನಗೊಳಿಸುವ ಮೂಲಕ‌ ಮಾನವ ಸಂಪನ್ಮೂಲ ಸಚಿವಾಲಯಕ್ಕೆ ರಾಷ್ಟ್ರ ಮಟ್ಟದ ಸ್ವಚ್ಚತಾನ್ ‌ಪ್ರಶಸ್ತಿಯನ್ನು‌ ದೊರಕಿಸಿಕೊಟ್ಟಿದ್ದಾರೆ. ಸ್ಚಚ್ವ ಭಾರತ ಅಭಿಯಾನದಲ್ಲಿ ವಿಶೇಷ ಕಾಳಜಿ ವಹಿಸಿದ್ದಾರೆ. ಮಾನವ ಸಂಪನ್ಮೂಲ ಸಚಿವಾಲಯದಲ್ಲಿ 4 ವರ್ಷಗಳ ಅವಧಿ ಗುರುತರವಾಗಿ ಕಾರ್ಯನಿರ್ವಹಿಸುವ ಮೂಲಕ ಮಾನವ ಸಂಪನ್ಮೂಲ ಸಚಿವರಾಗಿದ್ದ  ಪ್ರಕಾಶ್ ಜಾವಡೇಕರ್ ಹಾಗೂ ಇಂದಿನ ಮಾನವ‌ ಸಂಪನ್ಮೂಲ ಸಚಿವರಾದ  ರಮೇಶ್ ಕುಮಾರ ಪೋರ್ಕಿಯಾಲ್ ಅವರ ಮೆಚ್ವುಗೆಗೆ ಪಾತ್ರರಾಗಿದ್ದಾರೆ.

For English News Click –

Girish Hosur posted as Secretary to Chief Minister

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button