ಪ್ರಗತಿವಾಹಿನಿ ಸುದ್ದಿ, ನವದೆಹಲಿ – ಮಾಜಿ ಪ್ರಧಾನಿ, ಶ್ರೇಷ್ಠ ಆರ್ಥಿಕ ತಜ್ಞ ಡಾ.ಮನಮೋಹನ ಸಿಂಗ್ ಅನಾರೋಗ್ಯದ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ತೀವ್ರ ಎದೆನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಅವರನ್ನು ನವದೆಹಲಿಯ ಏಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ಪಿ.ವಿ.ನರಸಿಂಹ ರಾವ್ ಸರಕಾರದ ಅವಧಿಯಲ್ಲಿ ವಿತ್ತ ಸಚಿವರಾಗಿ ಹೆಸರು ಮಾಡಿದ್ದ ಮನಮೋಹನ್ ಸಿಂಗ್ ಭಾರತ ಕಂಡ ಶ್ರೇಷ್ಟ ಆರ್ಥಿಕ ತಜ್ಞರೆನಿಸಿದ್ದಾರೆ.
2004ರ ಮೇ 4ರಿಂದ 2014ರ ಮೇ 26ರ ವರೆಗೆ ಭಾರತದ ಪ್ರಧಾನಿಯಾಗಿ ಮನಮೋಹನ ಸಿಂಗ್ ಕಾರ್ಯನಿರ್ವಹಿಸಿದ್ದಾರೆ. ಆದರೆ ಹಣಕಾಸು ಸಚಿವರಾಗಿ ಮಾಡಿದ್ದ ಹೆಸರು, ಕೀರ್ತಿ ಅವರಿಗೆ ಪ್ರಧಾನಿಯಾಗಿದ್ದಾಗ ಬರಲಿಲ್ಲ.
ಮನಮೋಹನ ಸಿಂಗ್ ಅವರನ್ನು ತೀವ್ರ ನಿಗಾ ಘಟಕದಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ