Belagavi NewsBelgaum NewsKannada NewsKarnataka NewsLatest

*ಡಾ. ಪ್ರಭಾಕರ ಕೋರೆ ಸೊಸೈಟಿಗೆ ರೂ 27.37 ಕೋಟಿ ಲಾಭ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ : ಡಾ. ಪ್ರಭಾಕರ ಕೋರೆ ಕೋ-ಆಫ್ ಕ್ರೇಡಿಟ್ ಸೊಸಾಯಿಟಿಗೆ ರೂ ೨೭.೩೭ ಕೋಟಿ ಲಾಭವಾಗಿದೆ ಎಂದು ಕೆ ಎಲ್ ಇ ಸಂಸ್ಥೆಯ ಕಾರ್ಯಧ್ಯಕ್ಷರು ಹಾಗೂ ಅಮಂತ್ರಿತ ದಿಗ್ಧರ್ಶಕರಾದ ಅಮೀತ ಪ್ರಭಾಕರ ಕೋರೆ ಮಾಹಿತಿ ನೀಡಿದ್ದಾರೆ.
ಅಂಕಲಿ ಪಟ್ಟಣದ ಡಾ.ಪ್ರಭಾಕರ್ ಕೋರೆ ಕೋ-ಆಪ್ ಕ್ರೇಡಿಟ್ ಸೊಸಯಿಟಿ ನಿ., (ಬಹು ರಾಜ್ಯ) ರಾಜ್ಯಾದ್ಯಂತ ೫೫ ಶಾಖೆಗಳನ್ನು ಹೊಂದಿದ್ದು ಸನ್ ೨೦೨೫-೨೬ ಸಾಲಿನಲ್ಲಿ ಶೇ ೯೦% ರಷ್ಟು ಸಾಲ ವಸುಲಾತಿ ಮಾಡಿ ರೂ ೨೭.೩೭ ಕೋಟಿ ನಿವ್ವಳ ಲಾಭ ಗಳಿಸಿದೆ ಎಂದು ಅಮೀತ ಪ್ರಭಾಕರ ಕೋರೆ ಇವರು ತಿಳಿಸಿದರು.
ಸಂಸ್ಥೆಯು ೧೯೮೯ ರಲ್ಲಿ ವಿಜಯಪುರದ ಜ್ಞಾನಯೋಗಾಶ್ರಮದ ಪರಮಪೂಜ್ಯ ಶ್ರೀ ಸಿದ್ದೇಶ್ವರ ಮಹಾಸ್ವಾಮಿಗಳ ಅಮೃತ ಹಸ್ತದಿಂದ ಪ್ರಾರಂಭವಾಗಿ ಸಂಸ್ಥಾಪಕರಾದ ಡಾ. ಪ್ರಭಾಕರ ಕೋರೆಯವರ ಮಾರ್ಗದರ್ಶನದಲ್ಲಿ ಮತ್ತು ಡಾ. ಪ್ರೀತಿ ಕೋರೆ/ದೊಡವಾಡ ಇವರ ನೇತ್ರತ್ವದಲ್ಲಿ ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ತಿಳಿಸಿದರು.

ಬುಧವಾರದಂದು ಸಂಸ್ಥೆಯ ಆಡಳಿತ ಕಛೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಸಂಸ್ಥೆಯ ಒಟ್ಟು ೫೫ ಶಾಖೆಗಳು ಕಾರ್ಯನಿರ್ವಹಿಸುತ್ತಿದ್ದು. ಸಂಸ್ಥೆಯು ಗ್ರಾಮೀಣ ಭಾಗದ ಶಾಖೆಗಳಿಂದ ರೈತಾಪಿ ವರ್ಗದವರಿಗೆ ತನ್ನ ಅಧುನಿಕ ತಂತ್ರಜ್ಞಾನದ ಮೂಲಕ ತ್ವರಿತ ಸೇವೆಗಳನ್ನು ನೀಡುತ್ತಿದ್ದು. ವರ್ಷಾಂತ್ಯಕ್ಕೆ ೧,೧೧,೩೩೧ ಸದಸ್ಯರನ್ನು ಹೊಂದಿದ್ದು, ರೂ ೪.೬ ಕೋಟಿಗೂ ಮಿಕ್ಕಿ ಶೇರು ಬಂಡವಾಳ ಹೊಂದಿ ೧೬೭ ಕೋಟಿಗೂ ಮಿಕ್ಕಿ ನಿಧಿಗಳನ್ನು ಸಂಗ್ರಹಿಸಿ ೧೬೩೮ ಕೋಟಿಗೂ ಮಿಕ್ಕಿ ಠೇವು ಸಂಗ್ರಹಿಸಿರುತ್ತದೆ. ೧೨೦೨ ಕೋಟಿಗೂ ಅಧಿಕ ಸಾಲ ವಿತರಿಸಿರುತ್ತದೆ. ೫೭೩ ಕೋಟಿಗೂ ಅಧಿಕ ವಿಧಾಯಕವಾಗಿ ಗುಂತಾವಣಿಗಳನ್ನು ಮಾಡಾಲಾಗಿರುತ್ತದೆ. ೧೮೦೯ ಕೋಟಿಗೂ ಅಧಿಕ ದುಡಿಯುವ ಬಂಡವಾಳ ಹೊಂದಿ ೨೩೨೪೭ ಕೋಟಿಗೂ ಮಿಕ್ಕಿ ವಾರ್ಷಿಕ ವಹಿವಾಟ ಮಾಡಿದೆ.ಸಂಸ್ಥೆಯು ರೂ ೨೫ ಕೋಟಿ ಮೌಲ್ಯದ ಆಡಳಿತ ಕಛೇರಿ, ಆಂಕಲಿ, ಚಂದೂರ,ಕೇರೂರ, ದಿಗ್ಗೆವಾಡಿ, ಕಾಲೇಜ ರಸ್ತೆ ಬೆಳಗಾವಿ, ನಿಪ್ಪಾಣಿ, ಚಿಕ್ಕೋಡಿ ಹಿಗೆ ೮ ಶಾಖೆಗಳಿಗೆ ಸ್ವಂತ ಕಟ್ಟಡಗಳನ್ನು ಹೊಂದಿರುತ್ತದೆ ಮತ್ತು ಭವಿಷ್ಯದಲ್ಲಿ ಇನ್ನುಳಿದ ಶಾಖೆಗಳಿಗೆ ಸ್ವಂತ ನಿವೇಶನ ಹಾಗೂ ಕಟ್ಟಡಗಳನ್ನು ಖರೀದಿಸುವ ಯೋಜನೆ ಹೊಂದಲಾಗಿದೆ ಎಂದರು.

ಸಾರ್ವಜನಿಕ ವಲಯದ ರಾಷ್ಟ್ರಿಕೃತ ಬ್ಯಾಂಕುಗಳ ಸಾಲ ಮತ್ತು ಠೇವಣಿಗಳ ಬಡ್ಡಿದರಗಳಿಗೆ ಸ್ಪರ್ದಾತ್ಮಕ ರೀತಿಯಲ್ಲಿ ಠೇವಣಿ ಮತ್ತು ಸಾಲದ ಬಡ್ಡಿದರಗಳನ್ನು ಸಂಸ್ಥೆಯು ಅಳವಡಿಸಿಕೊಂಡಿರುತ್ತದೆ, ವಿವಿಧ ಸಕ್ಕರೆ ಕಾರಖಾನೆಗಳಿಗೆ ಬೃಹತ ಕಬ್ಬು ಕಟಾವು ಯಂತ್ರಗಳಿಗೆ ಶಾಲಾ ಬಸ್ಸು ಮತ್ತು ನಾಲ್ಕು ಚಕ್ರ ವಾಹನ ಮೊಟಾರ ಬೈಕುಗಳಿಗೆ ಅತಿ ಕಡಿಮೆ ಬಡ್ಡಿ ದರದಲ್ಲಿ ವಾಹನ ಸಾಲ, ಸದಸ್ಯರ ಅನೂಕುಲಕ್ಕಾಗಿ ಗೃಹ ಸಾಲ, ಅತ್ಯಂತ ಕಡಿಮೆ ಬಡ್ಡಿದರದಲ್ಲಿ ಸುಮಾರು ೧೫೦೦ ಎಕರೆ ಕೃಷಿ ಭೂಮಿಗೆ ೧೦೦೦ ಕ್ಕೂ ಅಧಿಕ ಫಲಾನುಭವಿ ರೈತ ಸದಸ್ಯರಿಗೆ ಏತ ನೀರಾವರಿ ಸಾಲ ನೀಡಿದ್ದೇವೆ. ಅದೇ ರೀತಿ ಬಂಗಾರದ ಸಾಲವನ್ನು ತ್ವರಿತವಾಗಿ ಅತಿ ಕಡಿಮೆ ಬಡ್ಡಿದರದ್ದಲ್ಲಿ ವಿತರಿಸುತ್ತಿದ್ದೇವೆ. ಸಂಸ್ಥೆಯು ತನ್ನ ಸದಸ್ಯ ಬಾಂದವರಿಗೆ ಸೇಫ್ ಲಾಕರ ವ್ಯವಸ್ಥೆ, ಮೊಬೈಲ ರಿಚಾರ್ಜ, ಪ್ಯಾನ ಕಾರ್ಡ, ಇ-ಸ್ಟ್ಯಾಂಪ, ಆರ್ ಟಿ ಸಿ (ಉತಾರ) ಬಸ್, ರೈಲು, ಹಾಗೂ ವಿಮಾನ ಟಿಕೆಟ್ ಕಾಯ್ದಿರಿಸುವಿಕೆ. ಇತರೆ ಬ್ಯಾಂಕುಗಳ ಸಹಯೋಗದೊಂದಿಗೆ ಆರ್ ಟಿ ಜಿ ಎಸ್ ಮತ್ತು ಎನ್ ಇ ಎಫ್ ಟಿ ಸೌಲಭ್ಯ ನೀಡಲಾಗಿದೆ ಎಂದರು.
ಕಾರ್ಯನಿರ್ವಹಿಸುತ್ತಿರುವ ಎಲ್ಲಾ ಶಾಖೆಗಳು ಲಾಭದಲ್ಲಿದ್ದು ಸಂಸ್ಥೆಯ ಆಡಳಿತ ಮಂಡಳಿಯ, ಅಧ್ಯಕ್ಷರು, ಉಪಾಧ್ಯಕ್ಷರು, ನಿರ್ದೇಶಕರು, ಶಾಖೆಗಳ ಸಲಹಾ ಸಮಿತಿಯ ಅಧ್ಯಕ್ಷರು, ಉಪಾಧ್ಯಕ್ಷರ ಹಾಗೂ ಸಂಚಾಲಕರು ನಿಸ್ವಾರ್ಥ ಸೇವೆ ಸಿಬ್ಬಂದಿ ವರ್ಗದವರ ಸತತ ಪ್ರಯತ್ನ ಹಾಗೂ ಸಂಸ್ಥೆಯ ಸದಸ್ಯರ ಸಹಕಾರವೆ ಈ ಯಶಸ್ವಿಗೆ ಕಾರಣ. ಸಂಸ್ಥೆಯು ತನ್ನ ಸದಸ್ಯರಿಗೆ ರೂ ೧ ಲಕ್ಷದವರಗೆ ಅಫಘಾತ ವಿಮೆಗೆ ಒಳಪಡಿಸಿರುತ್ತದೆ. ಅದೆ ರೀತಿ ಸಂಸ್ಥೆಯ ರೈತ ಸಾಲಗಾರ ಸದಸ್ಯರಿಗೆ ವಿಮೆ ಸೌಲಭ್ಯ ಹಾಗೂ ಸಂಸ್ಥೆಯು ಸಾಮನ್ಯ ಮತ್ತು ಜೀವ ವಿಮೆ ಮಾರಾಟದಲ್ಲಿ ೪೭೪೫ ಜನರಿಗೆ ರೂ ೪.೪೬ ಕೋಟಿ ಮೊತ್ತದ ಪಾಲಿಸಿ ಮಾರಾಟ ಮಾಡಿರುತ್ತದೆ. ಆದ್ದರಿಂದ ಈ ಸೌಲಭ್ಯವನ್ನು ಸದಸ್ಯರು ಸದುಪಯೋಗ ಪಡಿಸಿಕೋಳಬೆಕು. ಸಂಸ್ಥೆಯು ತನ್ನ ಸಿಬ್ಬಂದಿ ವರ್ಗದವರಿಗೆ ಖಾಸಗಿ ಪಿಂಚಣಿ ಯೋಜನೆಯನ್ನು ಅಳವಡಿಸಿರುತ್ತದೆ. ಸಂಸ್ಥೆಯಲ್ಲಿ ವರ್ಷಾಂತ್ಯಕ್ಕೆ ೩೭೫ ಕ್ಕೂ ಅಧಿಕ ಸಿಬ್ಬಂದಿಗಳು ಕಾರ್ಯನಿರ್ವಹಿಸುತ್ತಿದ್ದು. ಇದರಲ್ಲಿ ಮಹಿಳಾ ೬೦ ಸಿಬ್ಬಂದಿ ಮತ್ತು ೩೧೫ ಪುರುಷ ಸಿಬ್ಬಂದಿ ಕಾರ್ಯನಿರ್ವಹಿಸುತ್ತಿದ್ದಾರೆ. ಇದರಲ್ಲಿ ೨೫೦ಕ್ಕೂ ಅಧಿಕ ಸಿಬ್ಬಂದಿಗಳ ವೇತನ ಶ್ರೆಣಿ ಖಾಯಂಗೊಳಿಸಲಾಗಿದೆ. ಸಂಸ್ಥೆಯ ಸಿಬ್ಬಂದಿಗಳಿಗೆ ಸಾಮಾನ್ಯ ಮತ್ತು ಆರೋಗ್ಯ ವಿಮೆ ಸೌಲಭ್ಯವನ್ನು ಒದಗಿಸಿರುತ್ತದೆ. ಅದೆ ರೀತಿ ಸಂಸ್ಥೆಯ ಸಿಬ್ಬಂದಿಗೆ ಭವಿಷ್ಯ ನಿಧಿಯ ವತಿಯಿಂದ ಗರಿಷ್ಟ ಪಿಂಚಣಿ ಯೋಜನೆ ಸೌಲಭ್ಯ ಒದಗಿಸಲಾಗಿದೆ ಹಾಗೂ ಸಂಸ್ಥೆಯಲ್ಲಿ ೭೫ ಜನ ಪಿಗ್ಮಿ ಸಂಗ್ರಹಕರು ಕಾರ್ಯನಿರ್ವಹಿಸುತ್ತಿದ್ದಾರೆ ಎಂದರು.

ಇದೆ ಮಾಸಂತ್ಯಕ್ಕೆ ಕರ್ನಾಟಕದ ಗೊಕಾಕ ತಾಲೂಕಿನ ಅಂಕಲಗಿ ಮಹಾರಾಷ್ಟ್ರದ ಸಾಂಗಲಿ, ಇಚಲಕರಂಜಿ, ಕೋಲ್ಹಾಪೂರ, ಅರಗ, ಗಡಹಿಂಗ್ಲಜ ಈ ನಗರಗಳಲ್ಲಿ ಶಾಖೆಗಳು ಕಾರ್ಯಾರಂಭಿಸಲಿವೆ. ಪ್ರಸ್ತಕ ವರ್ಷದಲ್ಲಿ ಕರ್ನಾಟಕ ಹಾಗೂ ಮಾಹಾರಾಷ್ಟ್ರ ರಾಜ್ಯಗಳಲ್ಲಿ ಒಟ್ಟು ೧೭ ಶಾಖೆಗಳನ್ನು ಪ್ರಾರಂಭಿಸಲು ಮಾನ್ಯ ಕೇಂದ್ರಿಯ ನಿಭಂದಕರು ಹೊಸದೆಹಲಿ ಇವರಿಗೆ ಪ್ರಸ್ತಾವನೆಯನ್ನು ಕಳುಹಿಸಲಾಗಿದ್ದು ಅನುಮತಿ ಪಡೆದ ತಕ್ಷಣ ಈ ಶಾಖೆಗಳನ್ನು ಪ್ರಾರಂಭಿಸಲಾಗುವುದು. ಅದೇ ರೀತಿ ಸಂಸ್ಥೆಯು ತನ್ನ ಕಾರ್ಯವ್ಯಾಪ್ತಿಯನ್ನು ಗೋವಾ ರಾಜ್ಯಕ್ಕೂ ವಿಸ್ತರಿಸಿಕೋಳ್ಳಲಿದೆ ಎಂದರು.

Home add -Advt

ಈ ಸಮಯದಲ್ಲಿ ಸಂಸ್ಥೆಯ ಅಧ್ಯಕ್ಷರಾದ ಮಹಾಂತೇಶ ಪಾಟೀಲ, ಉಪಾಧ್ಯಕ್ಷರಾದ ಸಿದ್ದಗೌಡಾ ಮಗದುಮ್ಮ, ನಿರ್ದೇಶಕಿಯಾದ ಡಾ. ಪ್ರೀತಿ ಕೋರೆ/ದೊಡವಾಡ, ನಿರ್ದೇಶಕರಾದ ಮಲ್ಲಿಕಾರ್ಜುನ ಕೋರೆ, ಅಣ್ಣಾಸಾಬ ಸಂಕೇಶ್ವರಿ, ಬಸನಗೌಡಾ ಆಸಂಗಿ, ಸುಕುಮಾರ ಚೌಗಲಾ, ಪಿಂಟು ಹಿರೇಕುರಬರ, ಅಮೀತ ಜಾಧವ, ಪ್ರಪುಲ ಶೆಟ್ಟಿ, ಅಶೋಕ ಚೌಗಲಾ, ಬಾಳಪ್ಪಾ ಉಮರಾಣೆ, ಅನೀಲ ಪಾಟೀಲ, ಶೋಭಾ ಜಕಾತೆ, ಶೈಲಾಜಾ ಪಾಟೀಲ, ಪಾರ್ವತಿ ಧರನಾಯಿಕ, ಜಯಶ್ರೀ ಮೇದಾರ, ಶ್ರೀಕಾಂತ ಉಮರಾಣೆ, ವಿವೇಕಾನಂದ ಕಮತೆ ಮತ್ತು ವ್ಯವಸ್ಥಾಪಕ ನಿರ್ದೇಶಕರಾದ ದೇವೆಂದ್ರ ಕರೋಶಿ, ಆಡಳಿತ ಕಛೇರಿಯ ಎಲ್ಲ ಅಧೀಕಾರಿಗಳು ಹಾಗೂ ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.

Related Articles

Back to top button