ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ಇತ್ತೀಚಿಗೆ ಕೆಎಲ್‌ಇ ಸಂಸ್ಥೆಯ ಮತ್ತಿಕೊಪ್ಪದ ಐಸಿಎಆರ್-ಕೃಷಿ ವಿಜ್ಞಾನ ಕೇಂದ್ರವು ಸೋಯಾ ಅವರೆ ಬೀಜೋತ್ಪಾದನೆಗೆ ರಾಷ್ಟ್ರಮಟ್ಟದ “ಅತ್ಯುತ್ತಮ ಬೀಜೋತ್ಪಾದಕ ಸಂಸ್ಥೆ” ಪ್ರಶಸ್ತಿಯನ್ನು ಪಡೆದುಕೊಂಡಿತ್ತು. ಭಾರತೀಯ ಕೃಷಿ ಅನುಸಂಧಾನ ಪರಿಷತ್‌ನ ಇಂದೋರ್‌ನಲ್ಲಿರುವ ಭಾರತೀಯ ಸೋಯಾ ಅವರೆ ಸಂಶೋಧನಾ ಸಂಸ್ಥೆಯು ಸೋಯಾ ಅವರೆ ತಳಿಗಳ ಬೀಜೋತ್ಪಾದನೆಯಲ್ಲಿ ವಿಶಿಷ್ಟ ಸಾಧನೆಗೆ ಇಂದೋರ್‌ನಲ್ಲಿ ನಡೆದ ಆ ಸಂಸ್ಥೆಯ ಸಂಸ್ಥಾಪನಾ ದಿನಾಚರಣೆಯ ಕಾರ್ಯಕ್ರಮದಲ್ಲಿ ಪ್ರಶಸ್ತಿಯನ್ನು ನೀಡಿ ಗೌರವಿಸಿತ್ತು.
ಪ್ರಶಸ್ತಿಯ ರೂವಾರಿಗಳಾದ ಕೃಷಿ ವಿಜ್ಞಾನ ಕೇಂದ್ರದ ಕಾರ್ಯಾಧ್ಯಕ್ಷ ಹಾಗೂ ಕೆಎಲ್‌ಇ ಸಂಸ್ಥೆಯ ನಿರ್ದೇಶಕ ಬಿ.ಆರ್.ಪಾಟೀಲ ಹಾಗೂ ಹಿರಿಯ ವಿಜ್ಞಾನಿಗಳು ಹಾಗೂ ಮುಖ್ಯಸ್ಥೆ ಶ್ರೀದೇವಿ ಬ.ಅಂಗಡಿ ಅವರನ್ನು ಕೆಎಲ್‌ಇ ಸಂಸ್ಥೆಯ ಕಾರ್ಯಾಧ್ಯಕ್ಷರಾದ ಡಾ.ಪ್ರಭಾಕರ ಕೋರೆಯವರು ಪುಷ್ಪ ನೀಡಿ ಅಭಿನಂದಿಸಿದ್ದಾರೆ.
ಈ ಸಂದರ್ಭದಲ್ಲಿ ಮಾತನಾಡಿದ ಡಾ.ಪ್ರಭಾಕರ ಕೋರೆಯವರು ಜಿಲ್ಲೆಯಲ್ಲಿ ಕೆಎಲ್‌ಇ ಕೃಷಿ ವಿಜ್ಞಾನ ಕೇಂದ್ರವು ರೈತರ ಜೀವನಾಡಿಯಾಗಿ ಕಾರ್ಯನಿರ್ವಹಿಸುತ್ತಿದೆ.
ಹತ್ತು ಹಲವಾರು ಸಂಶೋಧನೆಗಳನ್ನು ಕೈಗೊಂಡು ರೈತರಿಗೆ ಮಾರ್ಗದರ್ಶನ ನೀಡುತ್ತಿದೆ. ಪರಿಹಾರೋಪಾಯಗಳನ್ನು ಸೂಚಿಸಿದೆ. ಸೋಯಾ ಅವರೆ ಬೀಜೋತ್ಪಾದನೆಯಲ್ಲಿ ಕೈಗೊಂಡಿರುವ ಸಂಶೋಧನೆ ಹಾಗೂ ಅದಕ್ಕೆ ರಾಷ್ಟ್ರಮಟ್ಟದಲ್ಲಿ ಪ್ರಶಸ್ತಿಯನ್ನು ಪಡೆದಿರುವುದು ಅಭಿನಂದನೀಯ ಎಂದು ತಿಳಿಸಿದ್ದಾರೆ.
ಭಾರತೀಯ ವೈದೈಕೀಯ ಪದ್ಧತಿ ಅಳವಡಿಕೆಗೆ ಪ್ರಾಧಾನ್ಯತೆ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ