Belagavi NewsBelgaum NewsKarnataka NewsPolitics

*ಅಭಿನಯದ ಅನನ್ಯ ಶಿಖರ ನಾನಾ ಪಾಟೇಕರ್: ಡಾ.ಪ್ರಭಾಕರ ಕೋರೆ*

ಪ್ರಗತಿವಾಹಿನಿ ಸುದ್ದಿ: ಮರಾಠಿ ರಂಗಭೂಮಿಯ ಮೂಲಕ ಕಲಾ ಪಯಣ ಆರಂಭಿಸಿದ ಅವರು ನಂತರ ಹಿಂದಿ ಚಿತ್ರರಂಗದಲ್ಲಿ ತಮ್ಮದೇ ಆದ ವಿಶಿಷ್ಟ ಸ್ಥಾನವನ್ನು ನಿರ್ಮಿಸಿಕೊಂಡರು. ವಿವಿಧ ಸಾಮಾಜಿಕ, ಮಾನಸಿಕ ಹಾಗೂ ರಾಷ್ಟ್ರಪ್ರಜ್ಞೆಯ ಹಿನ್ನೆಲೆಯ ಪಾತ್ರಗಳನ್ನು ನಿರ್ವಹಿಸುವ ಮೂಲಕ ಭಾರತೀಯ ಸಿನಿಮಾದಲ್ಲಿ ಅಭಿನಯದ ಸಾಧ್ಯತೆಗಳನ್ನು ವಿಸ್ತರಿಸಿದರು., ನಟಸಮ್ರಾಟ್ ಸೇರಿದಂತೆ ಹಲವು ಚಿತ್ರಗಳಲ್ಲಿನ ಅವರ ಪಾತ್ರಗಳು ಅವರ ಅಭಿನಯ ಸಾಮರ್ಥ್ಯದ ವೈವಿಧ್ಯವನ್ನು ಪರಿಚಯಿಸುತ್ತವೆ. ಪ್ರೇಕ್ಷಕರ ಮನಸ್ಸಿನಲ್ಲಿ ಅವರು ಮೂಡಿಸಿದ ಅಚ್ಚಳಿಯದ ಪ್ರಭಾವವೇ ಅವರ ನಿಜವಾದ ಕಲಾ ಪರಂಪರೆಯಾಗಿದೆ.

ನಾನಾ ಪಾಟೇಕರ್ ಅವರ ವ್ಯಕ್ತಿತ್ವದ ಮತ್ತೊಂದು ಮಹತ್ವದ ಆಯಾಮವೆಂದರೆ ಅವರ ಸಾಮಾಜಿಕ ಸಂವೇದನೆ. ಗ್ರಾಮೀಣ ಭಾರತ ಕುರಿತು ಹೊಂದಿದ ಕಾಳಜಿ, ಅವರ ಸಾರ್ವಜನಿಕ ವ್ಯಕ್ತಿತ್ವಕ್ಕೆ ವಿಭಿನ್ನ ಆಯಾಮವನ್ನು ನೀಡಿದೆ. ಕಲಾವಿದನ ಸಾಮಾಜಿಕ ಜವಾಬ್ದಾರಿ ಕೇವಲ ಪರದೆಯ ಮೇಲಿನ ಪಾತ್ರ ನಿರ್ವಹಣೆಯಲ್ಲಿ ಮುಗಿಯುವುದಿಲ್ಲ; ಸಮಾಜದ ನೋವಿಗೆ ಸ್ಪಂದಿಸುವ ನೈತಿಕ ಹೊಣೆಗಾರಿಕೆಯೂ ಕಲಾವಿದನಿಗಿದೆ ಎಂಬ ಸಂದೇಶವನ್ನು ಅವರ ಬದುಕು ಸಾರುತ್ತದೆ. ಕಲೆ ಮತ್ತು ಸಮಾಜದ ನಡುವಿನ ಸಂಬಂಧವನ್ನು ಅರ್ಥಮಾಡಿಕೊಳ್ಳಲು ನಾನಾ ಪಾಟೇಕರ್ ಅವರ ಬದುಕು ಒಂದು ಮಹತ್ವದ ಅಧ್ಯಯನ ವಿಷಯವಾಗಿದೆ. ಈ ಕಾರಣದಿಂದಲೇ ಅವರ ಅಭಿನಯವು ಒಂದು ನಿರ್ದಿಷ್ಟ ಕಾಲಘಟ್ಟಕ್ಕೆ ಸೀಮಿತವಾಗದೆ, ಹಲವು ತಲೆಮಾರುಗಳ ಪ್ರೇಕ್ಷಕರನ್ನು ತಲುಪಿದೆ.

ಒಬ್ಬ ಶ್ರೇಷ್ಠ ಕಲಾವಿದನ ಶಾಶ್ವತತೆ ಆತನ ದೈಹಿಕ ಅಸ್ತಿತ್ವದಲ್ಲಿಲ್ಲ. ಆ ದೃಷ್ಟಿಯಿಂದ ನಾನಾ ಪಾಟೇಕರ್ ಭಾರತೀಯ ಚಲನಚಿತ್ರರಂಗದ ಸ್ಮರಣೆಯಲ್ಲಿ ಸದಾ ಜೀವಂತವಾಗಿರುವ ಕಲಾವಿದರಾಗಿದ್ದಾರೆ. ಒಬ್ಬ ಶ್ರೇಷ್ಠ ಕಲಾವಿದನನ್ನು ಕಳೆದುಕೊಂಡು ಭಾರತೀಯ ಚಿತ್ರರಂಗ ಹಾಗೂ ರಂಗಭೂಮಿ ಎರಡೂ ಬಡವಾಗಿವೆ.

ಅವರ ನಿಧನದಿಂದ ಉಂಟಾಗಿರುವ ಶೂನ್ಯವನ್ನು ತುಂಬುವುದು ಸುಲಭವಲ್ಲ. ಭಾರತೀಯ ಕಲಾ ಲೋಕಕ್ಕೆ ಅವರ ಕೊಡುಗೆ ಚಿರಸ್ಮರಣೀಯ. ಅವರ ಆತ್ಮಕ್ಕೆ ಶಾಂತಿ ದೊರೆಯಲಿ. ಭಗವಂತನು ಅವರ ಕುಟುಂಬಕ್ಕೆ ದುಃಖವನ್ನು ಸಹಿಸಿಕೊಳ್ಳುವ ಶಕ್ತಿಯನ್ನು ನೀಡಲಿ ಎಂದು ಡಾ.ಕೋರೆಯವರು ಭಾವಪೂರ್ವ ‍ಶ್ರದ್ದಾಂಜಲಿಯನ್ನು ಸಲ್ಲಿಸಿದ್ದಾರೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button