Belagavi NewsBelgaum NewsKannada NewsKarnataka NewsLatest

*ಡಾ ಪ್ರಭಾಕರ ಕೋರೆ ಅವರ 76 ನೇ ಜನ್ಮದಿನದ ನಿಮಿತ್ತ ಉಚಿತ ಆರೋಗ್ಯ ಸೇವೆ*

ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ಕೆ.ಎಲ್‌.ಇ. ಸಂಸ್ಥೆಯ ಅಧ್ಯಕ್ಷರಾದ ಡಾ. ಪ್ರಭಾಕರ ಬಿ. ಕೋರೆ ಇವರ 76ನೇ ಹುಟ್ಟುಹಬ್ಬದ ಅಂಗವಾಗಿ, K.L.E. ಆಸ್ಪತ್ರೆ, ನೆಹರು ನಗರ, ಬೆಳಗಾವಿಯಲ್ಲಿ ಎಲ್ಲರಿಗೂ ಉಚಿತ ಆರೋಗ್ಯ ತಪಾಸಣೆ ಸೇವೆಗಳನ್ನು ಆಯೋಜಿಸಲಾಗಿದೆ.

Home add -Advt

ಉಚಿತ ಸೇವೆಗಳಲ್ಲಿ ರಕ್ತದಲ್ಲಿನ ಸಕ್ಕರೆ(ಬ್ಲಡ್ ಶುಗರ್)
ಪರೀಕ್ಷೆ, ಹೆಪಟೈಟಿಸ್ ಬಿ ಸ್ಕ್ರೀನಿಂಗ್, ಲಿವರ್ ಫೈಬ್ರೊಸ್ಕ್ಯಾನ್ ಪರೀಕ್ಷೆ , ಇಸಿಜಿ , ಎಲ್ಲಾ ಸಾಮಾನ್ಯ ವೈದ್ಯಕೀಯ ಒಪಿಡಿ ಸಮಾಲೋಚನೆ / ವೈದ್ಯರೊಂದಿಗೆ ಸಮಾಲೋಚನೆ ಸೇರಿವೆ.

ಮೇಲ್ಕಂಡ ಎಲ್ಲಾ ವೈದ್ಯಕೀಯ ಸೇವೆಗಳು ಮತ್ತು ಪರೀಕ್ಷೆಗಳು 1 ಆಗಸ್ಟ್‌ನಿಂದ 5 ಆಗಸ್ಟ್ 2023 ರವರೆಗೆ ಉಚಿತವಾಗಿ ಲಭ್ಯವಿರುತ್ತವೆ.
ಜನರು ಇದರ ಸದುಪಯೋಗವನ್ನು ಪಡೆದುಕೊಳ್ಳಲು
ಕೋರಲಾಗಿದೆ.

ಹೆಚ್ಚಿನ ವಿವರಗಳಿಗಾಗಿ ದಯವಿಟ್ಟು ಸಂಪರ್ಕಿಸಿ : 9164008199, 8722851234

Related Articles

Back to top button