ಡಾ.ರಾಧಾಕೃಷ್ಣನರ ತತ್ವಾದರ್ಶ ಅಳವಡಿಸಿಕೊಳ್ಳಬೇಕು : ಶಶಿಕಲಾ ಜೊಲ್ಲೆ
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ –
ಭಾರತೀಯ ಸಂಸ್ಕೃತಿಯಲ್ಲಿ ಗುರುವನ್ನು ದೇವರೆಂದು ಪೂಜಿಸುತ್ತಾರೆ. ಒಂದು ಮಗುವಿನ ಭವಿಷ್ಯವನ್ನು ರೂಪಿಸುವಲ್ಲಿ ಶಿಕ್ಷಕರು ಮಹತ್ವದ ಸ್ಥಾನ ಪಡೆದಿದ್ದಾರೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವರಾದ ಶಶಿಕಲಾ ಜೊಲ್ಲೆ ಹೇಳಿದರು.
ಉಪನಿರ್ದೇಶಕರ ಕಾರ್ಯಾಲಯ, ಸಾರ್ವಜನಿಕ ಶಿಕ್ಷಣ ಇಲಾಖೆ ಬೆಳಗಾವಿ ಹಾಗೂ ಕ್ಷೇತ್ರ ಶ್ರಿಕ್ಷಣಾಧಿಕಾರಿಗಳ ಕಚೇರಿ ನಗರ ವಲಯ ಬೆಳಗಾವಿ ಇವರ ಸಂಯುಕ್ತ ಆಶ್ರಯದಲ್ಲಿ (ಸೆ.೫) ರಂದು ನಗರದ ಗಾಂಧಿ ಭವನದಲ್ಲಿ ಏರ್ಪಡಿಸಲಾಗಿದ್ದ ಬೆಳಗಾವಿ ಶೈಕ್ಷಣಿಕ ಜಿಲ್ಲಾ ಮಟ್ಟದ ಶಿಕ್ಷಕರ ದಿನಾಚರಣೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಶಿಕ್ಷಕನಾಗಿ ಪ್ರಾಧ್ಯಾಕರಾಗಿ ಬರಹಗಾರಾಗಿ ಕವಿ ಗಾರನಾಗಿ ಅನೇಕ ವಿಶ್ವವಿದ್ಯಾಲಯಗಳಲ್ಲಿ ಕುಲಪತಿಗಳಾಗಿ ಅದ್ಬುತ ವಾದ ಸೇವೆ ಸಲ್ಲಿಸಿದವರು ಸಾಮಾನ್ಯ ಶಿಕ್ಷಕರು.
ಅದೇ ರೀತಿ ಡಾ.ರಾಧಾಕೃಷ್ಣನ್ ಅವರು ಕೂಡ ಶಿಕ್ಷಣ ಕ್ಷೇತ್ರಕ್ಕೆ ಅಗಾಧ ಕೊಡುಗೆ ನೀಡಿ ಉನ್ನತ ಸ್ಥಾನವನ್ನು ಅಲಂಕರಿಸಿದ್ದರು. ಆದ್ದರಿಂದ ತತ್ವ ಆದರ್ಶಗಳನ್ನು ಪ್ರತಿಯೊಬ್ಬರೂ ಅಳವಡಿಸಿ ಕೊಳ್ಳಬೇಕು ಎಂದು ಹೇಳಿದರು.
ಶಿಕ್ಷಕರೆಂದರೆ ಪವಿತ್ರ ಸ್ಥಾನದಲ್ಲಿ ರುವರು ದೇಶಕ್ಕಾಗಿ ಹಲವಾರು ಕೊಡುಗೆ ನೀಡಿದ್ದಾರೆ. ದೇಶದಲ್ಲಿ ಡಾಕ್ಟರ್ ಇಂಜಿನಿಯರ ವಿಜ್ಞಾನಿ ವಕೀಲ ಹೀಗೆ ಹಲವಾರು ವ್ಯಕ್ತಿ ಗಳು ಮಾಡಿರುವಂತಹ ಕೀರ್ತಿ ಶಿಕ್ಷಕರಿಗೆ ಮಾತ್ರ ಸಲ್ಲುತ್ತದೆ. ಶಿಕ್ಷಕರು ಪ್ರಮುಖ ವಾಹಿನಿಯಲ್ಲಿ ಕಾರ್ಯ ನಿರ್ವಹಿಸುತಿದ್ದಾರೆ.
ಗುರು ಎಂದರೆ ವಿದ್ಯೆಯನ್ನು ದಾನ ರೂಪದಲ್ಲಿ ಧಾರೆಯೆರೆಯುವ ಮನಸ್ಥಿತಿ ಹೊಂದಿರಬೇಕು ಪ್ರತಿಯೊಂದು ಮಕ್ಕಳನ್ನು ತಮ್ಮ ಮಕ್ಕಳೆಂದು ಅರಿತುಕೊಂಡು ಭೋದನೆ ಮಾಡಬೇಕು ಎಂದರು.
ಶಿಕ್ಷಕರಾದವರು ಸಕಾರಾತ್ಮಕ ವಿಚಾರವನ್ನು ಮಾಡಿ ತಮ್ಮ ಕಾರ್ಯದಲ್ಲಿ ತೊಡಗಿದರೆ ಸಮಾಜವು ಉತ್ತಮ ಗೌರವ ಸಲ್ಲಿಸುತ್ತದೆ ಹಾಗಾಗಿ ಶಿಕ್ಷಕರು ಸಮಯಕ್ಕೆ ಮಹತ್ವ ನೀಡಬೇಕು ಎಂದು ಸಚಿವೆ ಶಶಿಕಲಾ ಜೊಲ್ಲೆ ಕರೆ ನೀಡಿದರು.
ಜಿಲ್ಲಾ ಪಂಚಾಯತ ಅಧ್ಯಕ್ಷರಾದ ಆಶಾ ಐಹೊಳೆ ಅವರು ಮಾತನಾಡಿ, ಒಂದು ರಾಷ್ಟ್ರ ನಿರ್ಮಾಣವಾಗಬೇಕಾದರೆ ಶಿಕ್ಷಕರ ಪಾತ್ರ ಮಹತ್ವದ್ದಾಗಿರುತ್ತದೆ ಎಂದು ತಿಳಿಸಿದರು.
ಗುರುಕುಲದಲ್ಲಿ ರಾಜ ಮಹರಾಜ ಮಕ್ಕಳಿಗೆ ವಿದ್ಯಾಭ್ಯಾಸ ದೊರೆಯುತ್ತಿತ್ತು ಇವತ್ತಿನ ಸಮಾಜದಲ್ಲಿ ಪ್ರತಿಯೊಂದು ಮಗುವು ವಿದ್ಯಾಭ್ಯಾಸ ಪಡೆಯುವ ಅವಕಾಶ ದೊರೆತ್ತಿದ್ದು ಗುರುವಿನ ಮಹತ್ವ ಅಪಾರವಾಗಿದೆ
ಕಲಿಕೆ ಎಂಬುವದು ನಿರಂತರವಾಗಿದ್ದು ಸತತ ಪ್ರಯತ್ನದಿಂದ ಸಾಧನೆಯ ಮಾಡಬಹುದು ಅದೇ ರೀತಿ ಗುರುವಿನ ಮಾರ್ಗ ದರ್ಶನವಿಲ್ಲದೆ ಗುರಿ ಮುಟ್ಟಲು ಸಾಧ್ಯವಿಲ್ಲ ಎಂದು ತಿಳಿಸಿದರು.
ಶಿಕ್ಷಣ ಎಂಬ ಮೂರು ಪದ ಬಹಳ ದೊಡ್ಡದಾಗಿದ್ದು ರಾಷ್ಟ್ರ ನಿರ್ಮಾಣಕ್ಕೆ ಶಿಕ್ಷಕರ ಕೊಡಗೆ ಸದಾ ಇರಲಿ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ರೈಲ್ವೆ ಇಲಾಖೆಯ ರಾಜ್ಯ ಸಚಿವರಾದ ಸುರೇಶ ಅಂಗಡಿ ಅವರು ಮಾತನಾಡಿ, ಕಲಿಕೆ ಎಂಬುದು ನಿಂತ ನೀರಲ್ಲ ನಿರಂತರವಾಗಿ ಹರಿಯುವ ನದಿಯಂತೆ ಸದಾ ಪ್ರತಿಯೊಂದು ವಿದ್ಯಾರ್ಥಿಗಳ ಜೀವನದಲ್ಲಿ ಕಲಿಕೆಯನ್ನು ಅಳವಡಿಸಿಕೊಂಡು ತಮ್ಮ ಉಜ್ವಲ ಭವಿಷ್ಯವನ್ನು ನಿರ್ಮಾಣ ಮಾಡಿಕೋಳ್ಳಬೆಕು ಎಂದು ಹೇಳಿದರು.
ನಿವೃತ್ತಿ ಹೊಂದಿದ ಎಲ್ಲಾ ಶಿಕ್ಷಕರನ್ನು ಸನ್ಮಾನಿಸಲಾಯಿತು.
ಸಂಬಂಧಿಸಿದ ಸುದ್ದಿಗಳು –
ಸರ್ಕಾರದ ಸವಲತ್ತು, ಶಿಕ್ಷಕರ ಕರ್ತವ್ಯ
ಶಿಕ್ಷಕರ ದಿನಾಚರಣೆ ನಿಮಿತ್ತ ವಿಶೇಷ ಲೇಖನ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ