ಡಾ.ರಾಜ್ ಕುಮಾರ್ ಗೆ ಭಾರತ ರತ್ನಕ್ಕೆ ಶಿಫಾರಸ್ಸು ಮಾಡುವಂತೆ ಸಿಎಂಗೆ ಮನವಿ

ಪ್ರಗತಿವಾಹಿನಿ ಸುದ್ದಿ: ಬೆಂಗಳೂರು: ವರನಟ ಡಾ.ರಾಜ್‌ ಕುಮಾರ್‌ ಅವರಿಗೆ ಭಾರತ ರತ್ನ ನೀಡಲು ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡುವಂತೆ ಅಭಿಮಾನಿಗಳ ಸಂಘ ಇಂದು ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪನವರನ್ನು ಭೇಟಿಯಾಗಿ ಮನವಿ ಸಲ್ಲಿಸಿದರು.

ಅಖಿಲ ಕರ್ನಾಟಕ ಶಿವರಾಜ್ ಕುಮಾರ್ ಅಭಿಮಾನಿಗಳ ಸಂಘ ಮತ್ತು ಅಖಿಲ ಕರ್ನಾಟಕ ರಾಜರತ್ನ ಪುನೀತ್ ರಾಜ್‍ಕುಮಾರ್ ಅಭಿಮಾನಿಗಳ ಸಂಘದ ಸದಸ್ಯರು ಸಿಎಂ ಬಿ ಎಸ್ ಯಡಿಯೂರಪ್ಪ ಅವರನ್ನು ಭೇಟಿಯಾಗಿ ಡಾ.ರಾಜ್‌ ಕುಮಾರ್‌ ಅವರಿಗೆ ಭಾರತ ರತ್ನ ಹಾಗೂ ಶಿವರಾಜ್ ಕುಮಾರ್ ಅವರಿಗೆ ಪದ್ಮಶ್ರೀ ನೀಡುವಂತೆ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಬೇಕು ಎಂದು ಮನವಿ ಸಿಲ್ಲಿಸಿದ್ದಾಅರೆ.

ಈ ಕುರಿತು ಮಾತನಾಡಿದ ಅಭಿಮಾನಿ ಸಂಘದ ಸದಸ್ಯರು, ಡಾ.ರಾಜ್ ಕುಮಾರ್ ಅವರಿಗೆ ಭಾರತ ರತ್ನಕ್ಕೆ ಹಾಗೂ ಚಲನಚಿತ್ರ ರಂಗದಲ್ಲಿ 34 ವರ್ಷಗಳನ್ನು ಯಶಸ್ವಿಯಾಗಿ ಪೂರೈಸಿರುವ ಕರುನಾಡ ಚಕ್ರವರ್ತಿ ಶಿವರಾಜ್ ಕುಮಾರ್ ಅವರಿಗೆ ಪದ್ಮಶ್ರೀ ಪ್ರಶಸ್ತಿ ನೀಡುವಂತೆ ಶಿಫಾರಸು ಮಾಡಬೇಕೆಂದು ಮನವಿ ಮಾಡಿದ್ದೇವೆ. ಅಲ್ಲದೇ ಚಾಮರಾಜನಗರ ತಾಲೂಕಿಗೆ ಡಾ. ರಾಜ್ ಕುಮಾರ್ ತಾಲೂಕು ಎಂದು ಹಾಗೂ ಬೆಂಗಳೂರಿನ ಮಾಗಡಿ ರಸ್ತೆಯ ಮೆಟ್ರೋ ನಿಲ್ದಾಣಕ್ಕೆ ಡಾ. ರಾಜ್ ಕುಮಾರ್ ನಿಲ್ದಾಣ ಎಂದು ಹೆಸರಡಿಬೇಕು ಎಂದು ಮನವಿ ಸಲ್ಲಿಸಿದ್ದಾಗಿ ತಿಳಿಸಿದರು.

Home add -Advt

Related Articles

Back to top button