ಪ್ರಗತಿವಾಹಿನಿ ಸುದ್ದಿ, ಚೆನ್ನೈ – ಜನಸಂಘದ ಹಿರಿಯ ನಾಯಕ, ಆರ್ ಎಸ್ ಎಸ್ ನ ಕಟ್ಟಾಳು ಡಾ. ರಾಮಚಂದ್ರ ಅನಂತರಾವ್ ಜಾಲಿಹಾಳ(95) ಮಂಗಳವಾರ ಬೆಳಗ್ಗೆ 8 ಕ್ಕೆ ಚೆನ್ನೈನಲ್ಲಿ ನಿಧನರಾದರು.
ಮೂಲತಃ ಗದಗ ಜಿಲ್ಲೆಯ ಮೃತರು ಇಬ್ಬರು ಪುತ್ರರು, ಮೂವರು ಪುತ್ರಿಯರು ಸೇರಿದಂತೆ ಅಪಾರ ಬಂಧು ಬಳಗ ಅಗಲಿದ್ದಾರೆ. 4 ವರ್ಷ ಹಿಂದೆ ಇವರ ಪತ್ನಿ ಜಾನಕಿಬಾಯಿ ನಿಧನರಾಗಿದ್ದರು.
2ತಿಂಗಳ ಹಿಂದಷ್ಟೇ ಅಳಿಯ, ಧಾರವಾಡದ ಪಾಂಡುರಂಗಿ ಅವರ ಮನೆಯಿಂದ ಚೆನ್ನೈನ ಐಐಟಿಯಲ್ಲಿ ಎಲೆಕ್ಟ್ರಾನಿಕ್ಸ್ ಆ್ಯಂಡ್ ಕಮ್ಯುನಿಕೇಶನ್ ವಿಭಾಗದ ಮುಖ್ಯಸ್ಥ ದೇವೇಂದ್ರ ಜಾಲಿಹಾಳ ಅವರ ಮನೆಗೆ ತೆರಳಿದ್ದರು. ಇವರ ಸೊಸೆ ಪೂರ್ಣಿಮಾ ಜಾಲಿಹಾಳ ಚೆನ್ನೈನ ಓಶಿಯನ್ ಟೆಕ್ನಾಲಜಿ ಸ್ಟಡೀಸ್ನ ಮುಖ್ಯಸ್ಥೆ.
ಜನಸಂಘದ ಆರಂಭದಿಂದಲೂ ಸಕ್ರಿಯರಾಗಿದ್ದ ಅವರು ಮನೆ ಮನೆಗೆ ತೆರಳಿ ಪ್ರಚಾರದಲ್ಲಿ ತೊಡಗಿಸಿಕೊಂಡಿದ್ದರು. ಆರ್ ಎಸ್ ಎಸ್ ನ ಕಾರ್ಯಕರ್ತರು ಯಾರೇ ಗದಗಕ್ಕೆ ಬಂದರೂ ಅವರನ್ನು ಮನೆಗೆ ಕರೆದುಕೊಂಡು ಬಂದು ಆತಿಥ್ಯ ಕಲ್ಪಿಸುತ್ತಿದ್ದರು. ಹಿಂದುತ್ವದ ಉಗ್ರ ಪ್ರತಿಪಾದಕರಾಗಿದ್ದರು. ಆದರೆ ಯಾವುದೇ ಹುದ್ದೆ, ಅಧಿಕಾರದ ಆಕಾಂಕ್ಷೆ ಹೊಂದಿರಲಿಲ್ಲ.
ಡಾ. ರಾಮಚಂದ್ರ ಅವರದು ಶಿಸ್ತು ಹಾಗೂ ಸರಳ ಜೀವನ. ಸದಾ ಹಸನ್ಮುಖಿ. ಸಿಟ್ಟಿಗೇಳುವುದು ಅವರಿಗೆ ಗೊತ್ತೇ ಇರಲಿಲ್ಲ. ಹಿರಿಯರು, ಕಿರಿಯರ ಜತೆ ಸರಿಸಮನಾಗಿ ಬೆರೆಯುತ್ತಿದ್ದರು. ಗದಗ ಬಳಿಯ ಲಕ್ಕುಂಡಿಯಲ್ಲಿ ವೈದ್ಯಕೀಯ ಸೇವೆ ಸಲ್ಲಿಸುತ್ತಿದ್ದರು. ಸೈಕಲ್ ಮೇಲೆಯೇ ಲಕ್ಕುಂಡಿಗೆ ಪ್ರಯಾಣ ಬೆಳೆಸುತ್ತಿದ್ದರು ಎನ್ನುವುದು ವಿಶೇಷ.

ಎಂಬಿಬಿಎಸ್ ಓದುತ್ತಿರುವಾಗ ಭಾರತರತ್ನ ಪಂ. ಭೀಮಸೇನ ಜೋಶಿ ಅವರು ಇವರ ರೂಂನಲ್ಲೇ ಇವರ ಜತೆ ವಾಸವಾಗಿದ್ದರು.
ಇವರಿಗೆ ಈ ಹಿಂದೆ ಬಿಹಾರದ ರಾಜ್ಯಪಾಲರಾಗುವ ಅವಕಾಶ ಬಂದಾಗ ಅದನ್ನು ನಯವಾಗಿ ತಿರಸ್ಕರಿಸಿದ್ದರು. ಕಳೆದ ಬಾರಿ(2018)ಯ ಲೋಕಸಭಾ ಚುನಾವಣೆ ವೇಳೆ ಗದಗನ ವೀರ ನಾರಾಯಣ ದೇವಸ್ಥಾನಕ್ಕೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ ಶಾ ಬಂದಾಗ ಇವರನ್ನು ಧಾರವಾಡದಿಂದ ಕರೆಯಿಸಿಕೊಂಡು ಭೇಟಿಯಾಗಿದ್ದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ