
ಪ್ರಗತಿವಾಹಿನಿ ಸುದ್ದಿ, ಶಿರಸಿ:
ಶಿರಸಿಯ ಪ್ರಸಿದ್ಧ ಆಯುರ್ವೇದ ವೈದ್ಯ, ಸಮೀಕ್ಷಾ ಆಸ್ಪತ್ರೆಯ ಸಂಸ್ಥಾಪಕ ಡಾ.ಸಾಂಬಮೂರ್ತಿ ನಿಧನರಾದರು. ಅವರಿಗೆ 58 ವರ್ಷ ವಯಸ್ಸಾಗಿತ್ತು.,
ಆಯುರ್ ವಿಜ್ಞಾನ ಮಾಸ ಪತ್ರಿಕೆಯ ಸಂಪಾದಕರಾಗಿದ್ದ ಅವರು, ಬೆಂಗಳೂರಿನ ಚಾಮರಾಜ ನಗರದ ಆಯುರ್ವೇದ ಅಕಾಡೆಮಿಯ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸುತ್ತಿದ್ದರು. ಸೋಂದಾ ಸ್ವರ್ಣವಲ್ಲೀ ಮಠದಿಂದ ಪ್ರಕಟವಾಗುವ ಸ್ವರ್ಣವಲ್ಲೀ ಪ್ರಭಾ ಪತ್ರಿಕೆಗೆ ಅಂಕಣಕಾರರಾಗಿದ್ದರು.
. ಡಾ.ಸಂಬಮೂರ್ತಿ ಸಾವಿಗೆ ಸ್ವರ್ಣವಲ್ಲಿ ಶ್ರೀಗಳು ಸೇರಿದಂತೆ ಹಲವು ಗಣ್ಯರು ಕಂಬನಿ ಮಿಡಿದಿದ್ದಾರೆ.