
ಪ್ರಗತಿವಾಹಿನಿ ಸುದ್ದಿ, ಖಾನಾಪುರ – ಖಾನಾಪುರದ ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿ ವಿನಾಯಕ್ ದಳವಿ ಅವರಿಗೆ ಡಾ ಸಮೀರ್ ಮತ್ತು ಡಾ ಸೋನಾಲಿ ಸರ್ನೋಬತ್ ಅವರು ಮೆಡಿಕಲ್ ಪುಸ್ತಕಗಳಿಗೆ 10 ಸಾವಿರ ರೂ. ಸಹಾಯ ಮಾಡಿದರು.
ಈ ವಿದ್ಯಾರ್ಥಿಯು ಹಣದ ಸಹಾಯಕ್ಕಾಗಿ ಡಾ ಸಮೀರ್ ಮತ್ತು ಡಾ ಸೋನಾಲಿ ಅವರನ್ನು ಸಂಪರ್ಕಿಸಿದ್ದ. ತಕ್ಷಣ ಸ್ಪಂದಿಸಿದ ವೈದ್ಯ ದಂಪತಿ, ಹಣ ಸಹಾಯ ನೀಡಿ, ಶುಭ ಹಾರೈಸಿದರು.
ಉತ್ತಮ ವೈದ್ಯರಾಗಿ ಬಂದು ಖಾನಾಪುರದ ಜನರ ಸೇವೆ ಮಾಡುವಂತೆ ಡಾ.ಸೋನಾಲಿ ಸಲಹೆ ನೀಡಿದರು.
ವಿನಾಯಕ್ ಅವರು NEET ಉತ್ತೀರ್ಣರಾಗಿದ್ದಾರೆ ಮತ್ತು ಆಯುರ್ವೇದ ಕಾಲೇಜು ಪ್ರವೇಶ ಪಡೆದಿದ್ದಾರೆ. ಅವರು ಮೊದಲ ವರ್ಷದ ಬಿಎಎಂಎಸ್‌ಗೆ ಪ್ರವೇಶ ಪಡೆದಿದ್ದಾರೆ.
ಶ್ರಮಿಕ ಮಹಿಳೆಯರಲ್ಲಿ ಆತ್ಮ ವಿಶ್ವಾಸ ಅಗತ್ಯ: ಡಾ. ಸೋನಾಲಿ ಸರ್ನೋಬತ್
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ