
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಹಿರಿಯ ಸಾಹಿತಿ ಡಾ ಸರಜೂ ಕಾಟ್ಕರ್ ಅವರ ಹಿರಿಯ ಸಹೋದರಿ ಲಕ್ಷ್ಮೀಬಾಯಿ ತಾವರೆ ಶುಕ್ರವಾರ ಬೆಳಗಿನಜಾವ ಬೆಳಗಾವಿಯಲ್ಲಿ ವಿಧಿವಶ ಆಗಿದ್ದಾರೆ. ಕೆಲಕಾಲದಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಅವರಿಗೆ 84 ವರ್ಷ ವಯಸ್ಸಾಗಿತ್ತು.
ಮಹಾಂತೇಶ ನಗರದ ಮನೆಯಿಂದ ಮಧ್ಯಾಹ್ನ 12 ಗಂಟೆಗೆ ಅಂತಿಮ ಯಾತ್ರೆ ಹೊರಟು, ಸದಾಶಿವ ನಗರದ ಸ್ಮಶಾನ ಭೂಮಿಯಲ್ಲಿ ಅಂತಿಮ ಸಂಸ್ಕಾರ ನಡೆಯಲಿದೆ.
					
				
					
					
					
					
					
					
					
