Kannada NewsKarnataka News

ಖಾನಾಪುರ ತಾಲೂಕಿನ ಸಮಸ್ಯೆಗಳನ್ನು ತಹಸಿಲ್ದಾರ್ ಗಮನಕ್ಕೆ ತಂದ ಡಾ.ಸೋನಾಲಿ ಸರ್ನೋಬತ್

ಪ್ರಗತಿವಾಹಿನಿ ಸುದ್ದಿ, ಖಾನಾಪುರ – ಖಾನಾಪುರ ತಾಲೂಕಿನ ಪ್ರಮುಖ ಸಮಸ್ಯೆಗಳ ಕುರಿತು ನೂತನ ತಹಸಿಲ್ದಾರ ಪ್ರವೀಣ ಜೈನ್ ಅವರ ಗಮನಕ್ಕೆ ತಂದ ಬಿಜೆಪಿ ಗ್ರಾಮೀಣ ಘಟಕದ ಖಾನಾಪುರ ತಾಲೂಕು ಉಸ್ತುವಾರಿ, ಮಹಿಳಾ ಮೋರ್ಚಾ ಉಪಾಧ್ಯಕ್ಷೆ ಡಾ.ಸೋನಾಲಿ ಸರ್ನೋಬತ್, ಅವುಗಳನ್ನು ಆದಷ್ಟು ಶೀಘ್ರ ಪರಿಹರಿಸಿ ಜನರಿಗೆ ನೆಮ್ಮದಿ ಒದಗಿಸುವಂತೆ ಕೋರಿದರು.
ತಹಸಿಲ್ದಾರ್ ಕಚೇರಿಗೆ ತೆರಳಿ ನೂತನ ತಹಸಿಲ್ದಾರ್ ಜೊತೆ ಸುದೀರ್ಘ ಚರ್ಚಿಸಿದ ಅವರು, ಖಾನಾಪುರ ತಾಲೂಕಿನ ವಿವಿಧ ಭಾಗಗಳಲ್ಲಿನ ಸಮಸ್ಯೆಗಳನ್ನು ಗಮನಕ್ಕೆ ತಂದರು. ವಿಶೇಷವಾಗಿ ಕಾಡಂಚಿನ ಗ್ರಾಮಗಳ ಜನರ ಸಮಸ್ಯೆ, ವೈದ್ಯಕೀಯ, ಪಡಿತರ, ವಿದ್ಯುತ್, ಶಿಕ್ಷಣ, ಕುಡಿಯುವ ನೀರು ಮತ್ತಿತರ ಸಮಸ್ಯೆಗಳ ಕುರಿತು ಗಮನ ಸೆಳೆದರು.
ಕುಗ್ರಾಮಗಳ ಜನರು ಪಡುತ್ತಿರುವ ಪಾಡು, ತಾಲೂಕಿನಲ್ಲಿರುವ ಇತರ ಜನಸಾಮಾನ್ಯರ ಸಮಸ್ಯೆಗಳ ಕುರಿತೂ ಚರ್ಚಿಸಿದರು.
ಎಲ್ಲ ಸಮಸ್ಯೆಗಳ ಕುರಿತು ಮಾಹಿತಿ ಪಡೆದು, ಅವುಗಳನ್ನು ನಿವಾರಿಸಲು ಆದ್ಯತೆಯ ಮೇಲೆ ಕ್ರಮ ಕೈಗೊಳ್ಳುವುದಾಗಿ ಪ್ರವೀಣ ಜೈನ್ ಭರವಸೆ ನೀಡಿದರು.
ಪ್ರವೀಣ್ ಜೈನ್ ಅವರನ್ನು ಬಸವರಾಜ ಕಡೇಮನಿ, ಈಶ್ವರ ಸಾನಿಕೋಪ್ ಅವರೊಂದಿಗೆ ಡಾ ಸಮೀರ್ ಸರ್ನೋಬತ್ ಮತ್ತು ಡಾ ಸೋನಾಲಿ ಸರ್ನೋಬತ್ ಸನ್ಮಾನಿಸಿದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button