ಪ್ರಗತಿವಾಹಿನಿ ಸುದ್ದಿ, ಖಾನಾಪುರ – ಕುಗ್ರಾಮಗಳಲ್ಲಿ ಜೀವದ ಹಂಗು ತೊರೆದು ಸೇವೆ ಸಲ್ಲಿಸುವ 150ಕ್ಕೂ ಹೆಚ್ಚು ವಾರಿಯರ್ ಗಳಿಗೆ ನಿಯತಿ ಫೌಂಡೇಶನ್ ವತಿಯಿಂದ ಜೀವವಿಮೆ ಕಾರ್ಡ್ ಗಳನ್ನು ವಿತರಿಸುವ ಮೂಲಕ ಸನ್ಮಾನಿಸಲಾಯಿತು.
ಬಿಜೆಪಿ ಗ್ರಾಮಾಂತರ ಮಹಿಳಾ ಮೋರ್ಚಾ ಉಪಾಧ್ಯಕ್ಷೆ ಹಾಗೂ ಖಾನಾಪುರದ ಮಹಿಳಾ ಮೋರ್ಚಾ ಪ್ರಭಾರಿಯೂ ಆಗಿರುವ ನಿಯತಿ ಫೌಂಡೇಶನ್ ಚೇರಮನ್ ಡಾ.ಸೋನಾಲಿ ಸರ್ನೋಬತ್ ಅವರು ಶುಕ್ರವಾರ ಕಣಕುಂಬಿಯ ಮಾವುಲಿ ದೇವಸ್ಥಾನದಲ್ಲಿ ಆಶಾ ಕಾರ್ಯಕರ್ತೆಯರು, ಸಹಾಯಕಿಯರೊಂದಿಗೆ, ಅಂಗನವಾಡಿ ಶಿಕ್ಷಕರು, ಕೆಲವು ಸ್ವಸಹಾಯ ಮಹಿಳಾ ಗುಂಪುಗಳು ಮತ್ತು ಪ್ರಾಥಮಿಕ ಆರೋಗ್ಯ ಸಿಬ್ಬಂದಿಯನ್ನು ಸನ್ಮಾನಿಸಿದರು.
ಪ್ರಾಥಮಿಕ ಆರೋಗ್ಯ ಕೇಂದ್ರದ ಡಾ.ಚೇತನ್ ಅವರನ್ನೂ ಕೋವಿಡ್ ಸಮಯದಲ್ಲಿನ ಅವರ ಸೇವೆ ಗುರುತಿಸಿ ಗೌರವಿಸಲಾಯಿತು.
ಆಶಾ ಕಾರ್ಯಕರ್ತೆಯರು ಭಾರೀ ಮಳೆ, ಹವಾಮಾನ ವೈಪರೀತ್ಯಗಳನ್ನು ಲೆಕ್ಕಿಸದೆ ದಿನವಿಡೀ ಅರಣ್ಯ ಪ್ರದೇಶಗಳಲ್ಲಿ ಕೆಲಸ ಮಾಡುತ್ತಾರೆ. ಈ ಕೋವಿಡ್ ಯೋಧರನ್ನು ಡಾ ಸೋನಾಲಿ ಸರ್ನೋಬತ್ ಮತ್ತು ಅವರ ತಂಡದಿಂದ ಸನ್ಮಾನಿಸಲಾಯಿತು.
ವೇದಿಕೆಯಲ್ಲಿ ಸ್ಥಳೀಯ ಮುಖಂಡರು, ಬಿಜೆಪಿ ಕಾರ್ಯಕರ್ತರಾದ ಮಂಜುನಾಥ ಚಿಕಳಕರ, ಅರ್ಜುನ ಗಾವಡಾ, ಸಂಜಯ ಪಾಟೀಲ, ಬಸವರಾಜ ಕಡೇಮನಿ, ನಾರಾಯಣ ಕದಂ, ದಯಾನಂದ ಚೋಪಡೆ, ಅನಂತ ಗಾವಡ, ಈಶ್ವರ ಸಾಣಿಕೋಪ, ಗ್ರಾಮ ಪಂಚಾಯಿತಿ ಸದಾಶಯ ಹಾಗೂ ದೇವಸ್ಥಾನ ಸಮಿತಿ ಸದಸ್ಯರು ಉಪಸ್ಥಿತರಿದ್ದರು.
ಮೊಮೆಂಟೊ ಮತ್ತು ಜೀವ ವಿಮಾ ಕಾರ್ಡ್‌ಗಳನ್ನು ನೀಡಿ ಡಾ.ಸೋನಾಲಿ ಸರ್ನೋಬತ್ ಕೋವಿಡ್ ವಾರಿಯರ್ ಗಳನ್ನು ಗೌರವಿಸಿದರು.
ಈಗಾಗಲೆ ಕುಗ್ರಾಮಗಳಲ್ಲಿ ಮನೆ ಬಾಗಿಲಿಗೆ ಪಡಿತರ ವಿತರಣೆ, ರಸ್ತೆಗಳ ಅಭಿವೃದ್ಧಿಗೆ ಪ್ರಯತ್ನ ಮತ್ತು ಮೂಲಭೂತ ಸಮಸ್ಯೆಗಳ ಕುರಿತು ಸ್ಪಂದಿಸುತ್ತಿರುವ ಡಾ.ಸೋನಾಲಿ ಸರ್ನೋಬತ್, ಮುಂದಿನ ದಿನಗಳಲ್ಲಿ ಸ್ವಸಹಾಯ ಗುಂಪುಗಳಿಗೆ ಸಹಾಯ ಮಾಡುವ ಭರವಸೆ ನೀಡಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ