Kannada NewsKarnataka NewsLatest
ಖಾನಾಪುರ ತಾಲೂಕಿನಲ್ಲಿ ಮಂಗಳವಾರ ವಿವಿಧ ಕಾರ್ಯಕ್ರಮಗಳಲ್ಲಿ ಭಾಗಿಯಾದ ಡಾ.ಸೋನಾಲಿ ಸರ್ನೋಬತ್




ಮಹಿಳೆಯರಿಗೆ ಸರಕಾರದ ಯೋಜನೆಗಳ ತಿಳಿವಳಿಕೆ ನೀಡಿದ ಸೋನಾಲಿ ಸರ್ನೋಬತ್
ಪ್ರಗತಿವಾಹಿನಿ ಸುದ್ದಿ, ಖಾನಾಪುರ –
ಖಾನಾಪುರ ತಾಲೂಕಿನ ಲಿಂಗನಮಠ ಗ್ರಾಮದಲ್ಲಿ ಶ್ರೀ ಮರೆಮ್ಮಾ ದೇವಿಯ ಜಾತ್ರಾ ಮಹೋತ್ಸವ ಮಂಗಳವಾರ ವಿಜ್ರಂಭಣೆಯಿಂದ ನಡೆಯಿತು.
ನಿಯತಿ ಫೌಂಡೇಶನ್ ಅಧ್ಯಕ್ಷರು, ಖಾನಾಪುರ ಮತಕ್ಷೇತ್ರದ ಬಿಜೆಪಿ ಮಹಿಳಾ ಮೋರ್ಚಾ ಪ್ರಭಾರಿ, ಬೆಳಗಾವಿ ಗ್ರಾಮೀಣ ಬಿಜೆಪಿ ಮಹಿಳಾ ಮೋರ್ಚಾ ಉಪಾಧ್ಯಕ್ಷೆ, ಖಾನಾಪುರ ಕ್ಷತ್ರಿಯ ಮರಾಠಾ ಮಹಿಳಾ ಘಟಕದ ಅಧ್ಯಕ್ಷೆ ಡ. ಸೋನಾಲಿ ಸರ್ನೋಬತ್ ಅವರು ಆಗಮಿಸಿ ಗ್ರಾಮ ದೇವತೆ ಆಶೀರ್ವಾದ ಪಡೆದುಕೊಂಡರು.
ಈ ವೇಳೆ ಮಾತನಾಡಿದ ಡಾ ಸೋನಾಲಿ ಸರ್ನೋಬತ್ ಅವರು, ಲಿಂಗಮಠ ಗ್ರಾಮವು ತಾಲೂಕಿನ ಗಡಿ ಭಾಗದಲ್ಲಿದ್ದು, ಮರೆಮ್ಮಾ ದೇವಿಯ ಗುಡಿ ಅಭಿವೃದ್ಧಿಗಾಗಿ ಎಂದಿಗೂ ಸದಾ ಸಿದ್ಧ ಎಂದು ಭರವಸೆ ನೀಡಿದರು.
ನಂತರ ಕಕ್ಕೇರಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಕರಿಕಟ್ಟಿ ಗ್ರಾಮ ದೇವತೆಯಾದ ಶ್ರೀ ಬಿಷ್ಟಾದೇವಿ ತಾಯಿಯ ದರ್ಶನ ಪಡೆದುಕೊಂಡರು. ಈ ವೇಳೆ ಮಾತನಾಡಿದ ಅವರು ಈ ಗ್ರಾಮದ ಕುಂದುಕೊರತೆಗಳ ಬಗ್ಗೆ ಚರ್ಚೆಸಿದರು. ಸರ್ಕಾರದಿಂದ ಬರುವ ಸೌಲಭ್ಯಗಳ ಬಗ್ಗೆ ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಗ್ರಾಮದ ಹಿರಿಯರು ಮಹಿಳಾ ಸಂಘಟನೆಯವರು ಉಪಸ್ಥಿತರಿದ್ದರು.
ಮತ್ತು ಖಾನಾಪೂರ ತಾಲೂಕಿನ ಕಾರಲಗಾ ಗ್ರಾಮದಲ್ಲಿ ಚವಾಟಾ ಮಂದಿರ ಜಾತ್ರಾ ಕಾರ್ಯಕ್ರಮ ನಿಮಿತ್ಯ ಹಳದಿ- ಕುಂಕುಮ ಕಾರ್ಯಕ್ರಮದಲ್ಲಿ ಡಾ ಸೋನಾಲಿ ಸರ್ನೋಬತ್ ಅವರು ಭಾಗವಹಿಸಿ ಗ್ರಾಮದ ಮಹಿಳೆಯರ ಜೊತೆಗೆ ಬೆರೆತು ಹಳದಿ- ಕುಂಕುಮ ಕಾರ್ಯಕ್ರಮವನ್ನು ಜ್ಯೋತಿ ಬೆಳಗುವ ಮುಖಾಂತರ ಉದ್ಘಾಟಿಸಿದರು.
ಈ ವೇಳೆ ಮಾತನಾಡಿದ ಅವರು ಗ್ರಾಮೀಣ ಜನರಿಗೆ ಉದ್ಯೋಗ ಖಾತರಿ ಯೋಜನೆಯಡಿ ಬರುವ ಸೌಲಭ್ಯಗಳು ಮತ್ತು ಸಮಾಜ ಸೇವೆಯಲ್ಲಿ ಮಹಿಳೆಯರ ಪಾತ್ರದ ಬಗ್ಗೆ ಉದ್ದೇಶಿಸಿ ಮಾತನಾಡಿದರು. ಈ ಸಂದರ್ಭದಲ್ಲಿ ನೂರಾರು ಮಹಿಳೆಯರು ಮತ್ತು ಯುವಕರು ಉಪಸ್ಥಿತರಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ