Kannada NewsKarnataka NewsLatest

ಖಾನಾಪುರದ ಹಳ್ಳಿ ಹಳ್ಳಿ ಸಂಚರಿಸುತ್ತಿರುವ ಡಾ.ಸೋನಾಲಿ ಸರ್ನೋಬತ್

ಪ್ರಗತಿವಾಹಿನಿ ಸುದ್ದಿ, ಖಾನಾಪುರ – ಭಾರತೀಯ ಜನತಾ ಪಾರ್ಟಿ ಬೆಳಗಾವಿ ಗ್ರಾಮೀಣ ಜಿಲ್ಲಾ ಮಹಿಳಾ ಮೋರ್ಚಾ ಉಪಾಧ್ಯಕ್ಷರೂ, ಖಾನಾಪುರ ತಾಲೂಕು ಉಸ್ತುವಾರಿಯೂ ಆಗಿರುವ ಸಾಮಾಜಿಕ ಕಾರ್ಯಕರ್ತೆ ಡಾ.ಸೋನಾಲಿ ಸರ್ನೋಬತ್ ಕ್ಷೇತ್ರದ ಮೂಲೆ ಮೂಲೆಗಳಲ್ಲಿ ಸಂಚರಿಸುತ್ತಿದ್ದಾರೆ.

ಪ್ರತಿ ಕುಗ್ರಾಮಗಳಿಗೂ ತೆರಲಿ ಅಲ್ಲಿಗೆ ಸರಕಾರದ ಸೌಲಭ್ಯಗಳು ತಲುಪುತ್ತಿವೆಯೇ? ಅಲ್ಲಿನ ಜನರ ಜೀವನ ಪರಿಸ್ಥಿತಿ ಹೇಗಿದೆ ಎನ್ನುವ ಕುರಿತು ಅಧ್ಯಯನ ಮಾಡುತ್ತಿದ್ದಾರೆ. ಪಡಿತರ, ವಿದ್ಯುತ್, ರಸ್ತೆ, ನೀರು ಮೊದಲಾದ ಮೂಲಭೂತ ಸೌಲಭ್ಯಗಳು ತಲುಪದ ಹಳ್ಳಿಗಳಿಗೆ ಅವುಗಳನ್ನು ತಲುಪಿಸುವ ಪ್ರಯತ್ನ ಮಾಡುತ್ತಿದ್ದಾರೆ.

ಸ್ವಾತಂತ್ರ್ಯ ಬಂದು 75 ವರ್ಷಗಳಾದರೂ ತಾಲೂಕಿನ ಎಷ್ಟೋ ಹಳ್ಳಿಗಳ ಜನರು ಇನ್ನೂ ಕನಿಷ್ಠ ಸೌಲಭ್ಯಗಳೂ ಇಲ್ಲದೆ ಜೀವನ ಸಾಗಿಸುತ್ತಿದ್ದಾರೆ. ಇಲ್ಲಿನ ಅನೇಕ ಹಳ್ಳಿಗಳ ಜನರಿಗೆ ಪಡಿತರವನ್ನು ಮನೆ ಬಾಗಿಲಿಗೆ ತಲುಪಿಸುವ ಕೆಲಸವನ್ನು ಡಾ.ಸೋನಾಲಿ ಸರ್ನೋಬತ್ ಮಾಡಿದ್ದಾರೆ.

 ಮಂಗಳವಾರ  ಖಾನಾಪುರದ ಅಂಬ್ರಪಾಲಿ, ತಾವರಗಟ್ಟಿಯಂತಹ  ಕುಗ್ರಾಮಗಳಿಗೆ ಭೇಟಿ ನೀಡಿದ ಡಾ ಸೋನಾಲಿ ಅವರು,  ಆ ಬಾಗದ ಜನರ ಸಮಸ್ಯೆಗಳನ್ನು ಆಲಿಸಿದರು.
 ಅಂಬ್ರಪಾಲಿಯ ಜನರು ಜಾನುವಾರು ಸಾಕಣೆಯಲ್ಲಿ ನಿರತರಾಗಿದ್ದು, ಹಾಲಿನ ಉತ್ಪನ್ನಗಳೇ ಇವರ ಜೀವನಾಧಾರವಾಗಿದೆ. ಇಲ್ಲಿನ ಜನರು ಗುಣಮಟ್ಟದ ಖಾವಾವನ್ನು  ಉತ್ಪಾದಿಸುತ್ತಾರೆ, ಇದನ್ನು ಸಿಹಿ ಪದಾರ್ಥ ತಯಾರಿಸಲು ಬಳಸಲಾಗುತ್ತದೆ. ಆದರೆ ರಸ್ತೆ, ವಿದ್ಯುತ್‌ನಂತಹ ಮೂಲಭೂತ ಸೌಲಭ್ಯಗಳಿಂದ ಜನರು ವಂಚಿತರಾಗಿದ್ದಾರೆ.
ನಂತರ ಹಿಡಕಲ್ ಗ್ರಾಮಕ್ಕೆ ಭೇಟಿ ನೀಡಿದ ಅವರು,  ಅಲ್ಲಿ ಇತ್ತೀಚೆಗೆ  ಸಾಲಬಾಧೆಯಿಂದ ಆತ್ಮಹತ್ಯೆ ಮಾಡಿಕೊಂಡಿರುವ ರೈತ ತಿಪ್ಪಣ್ಣ ಕಬಾಡಗಿ ಮನೆಗೆ ತೆರಳಿ ಸಾಂತ್ವನ ಹೇಳಿದರು.  ಅವರ ಪತ್ನಿಗೆ ತಮ್ಮ ನಿಯತಿ ಫೌಂಡೇಶನ್‌ನಿಂದ  ಆರ್ಥಿಕ ಸಹಾಯದ ಚೆಕ್ ನೀಡಿದರು.
ಬಾಳೇಶ ಚವ್ವನ್ನಾರ, ಅರ್ಜುನ್ ಗಾವಡ, ರಾಹುಲ್ ಅಲವಾನಿ, ಪರಶುರಾಮ ಕೋಲ್ಕಾರ, ಬಸವರಾಜ ಕಡೇಮನಿ, ಸಿದ್ದು ಪಾಟೀಲ ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button