Latest

*ಏಕಾಏಕಿ ಮನೆಗೆ ನುಗ್ಗಿ ವೈದ್ಯೆಯನ್ನೇ ಕಿಡ್ನ್ಯಾಪ್ ಮಾಡಿದ ದುಷ್ಕರ್ಮಿಗಳು; ಅಪಹರಣದ ವಿಡಿಯೋ ವೈರಲ್*

ಪ್ರಗತಿವಾಹಿನಿ ಸುದ್ದಿ; ತೆಲಂಗಾಣ: ಮನೆಗೆ ನುಗ್ಗಿದ ನೂರಾರು ದುಷ್ಕರ್ಮಿಗಳು ದಂತ ವೈದ್ಯೆಯೋರ್ವರನ್ನು ಕಿಡ್ನಾಪ್ ಮಾಡಿರುವ ಘಟನೆ ತೆಲಂಗಾಣದ ರಂಗಾರೆಡ್ಡಿ ಜಿಲ್ಲೆಯ ಆದಿಬಟ್ಲಾದಲ್ಲಿ ನಡೆದಿದೆ.

24 ವರ್ಷದ ಡಾ.ವೈಶಾಲಿ ಅಪಹರಣಕ್ಕೊಳಗಾದ ವೈದ್ಯೆ. ಮನೆಗೆ ನುಗ್ಗಿದ ದುಷ್ಕರ್ಮಿಗಳು ನಮಗೆಲ್ಲ ದೊಣ್ಣೆಯಿಂದ ಹೊಡೆದು, ಮಗಳನ್ನು ಕಿಡ್ನ್ಯಾಪ್ ಮಾಡಿದ್ದಾರೆ. ತೆಲಂಗಾಣದ ಮಿ.ಟೀ ಬ್ರ್ಯಾಂಡ್ ಮಾಲೀಕ ನವೀನ್ ಎಂಬಾತ ಈ ಕೃತ್ಯವೆಸಗಿರುವ ಶಂಕೆಯಿದೆ ಎಂದು ವೈದ್ಯೆಯ ಪೋಷಕರು ತೆಲಂಗಾಣ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.

ಮನೆಯವರಿಗೆ ಮನಬಂಧಂತೆ ದೊಣ್ಣೆಯಿಂದ ಥಳಿಸಿ, ವೈದ್ಯೆಯನ್ನು ಎಳೆದೊಯ್ಯುತ್ತಿರುವ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಇದೀಗ ದಂತ ವೈದ್ಯೆ ಕಿಡ್ನ್ಯಾಪ್ ಆದ 6 ಗಂಟೆಗಳಲ್ಲೇ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ. ವೈದ್ಯೆ ಕಿಡ್ನಾಪ್ ಪ್ರಕರಣ ಸಂಬಂಧ 16 ಆರೋಪಿಗಳನ್ನು ಬಂಧಿಸಲಾಗಿದ್ದು, ವೈದ್ಯೆ ವೈಶಾಲಿಯನ್ನು ರಕ್ಷಿಸಲಾಗಿದೆ ಎಂದು ತಿಳಿಸಿದ್ದಾರೆ.

Home add -Advt

ಆರೋಪಿ ನವೀನ್ ಹೇಳುವ ಪ್ರಕಾರ ವೈಶಾಲಿ ಹಾಗೂ ನನಗೂ ವಿವಾಹವಾಗಿತ್ತು. ಆದರೆ ವೈಶಾಲಿ ವೈದ್ಯೆಯಾದ ಬಳಿಕ ಆಕೆಯ ಮನೆಯವರು ಮನಸ್ಸು ಬದಲಿಸಿದ್ದರು. ಮನೆಗೆ ಕಳುಹಿಸಿರಲಿಲ್ಲ. ಹಾಗಾಗಿ ನಾನೇ ಆಕೆಯ ಮನೆಗೆ ಹೋಗಿ ಕರೆದುಕೊಂಡು ಬಂದಿದ್ದಾಗಿ ವಿಚಾರಣೆ ವೇಳೆ ತಿಳಿಸಿದ್ದಾಗಿ ಪೊಲೀಸರು ಮಾಹಿತಿ ನೀಡಿದ್ದಾರೆ. ವೈದ್ಯೆ ಕಿಡ್ನ್ಯಾಪ್ ಪ್ರಕರಣದ ಬಗ್ಗೆ ತನಿಖೆ ಮುಂದುವರೆದೆ ಎಂದು ತಿಳಿಸಿದ್ದಾರೆ.

ಸಲಾಂ ಮಂಗಳಾರತಿಗೆ ಧಾರ್ಮಿಕ ಪರಿಷತ್ ಬ್ರೇಕ್; ಮುಜರಾಯಿ ಇಲಾಖೆ ಹೆಸರೂ ಕೂಡ ಬದಲಾವಣೆ

https://pragati.taskdun.com/tippudeevatige-salam-arati-poojedharmika-parishathdeepa-namaskara-pooje/

Related Articles

Back to top button