ಪಡಿತರ ಪಡೆಯುವುದು ಜನರ ಮೂಲಭೂತ ಹಕ್ಕಾಗಿದೆ. ತಮ್ಮ ಗ್ರಾಮಗಳಲ್ಲೇ ಪಡಿತರ ಲಭಿಸಲು ಸಾಧ್ಯವಾಗಿದ್ದು ಸಂತಸ ತಂದಿದೆ. ಜನರ ಕಷ್ಟ ಯಾವುದೇ ಇದ್ದರೂ ಸ್ಪಂದಿಸಲು ಸದಾ ಸಿದ್ಧಳಿದ್ದೇನೆ
-ಡಾ.ಸೋನಾಲಿ ಸರ್ನೋಬತ್
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಬಿಜೆಪಿ ಗ್ರಾಮೀಣ ಮಹಿಳಾ ಮೋರ್ಚಾ ಉಪಾಧ್ಯಕ್ಷೆ ಡಾ. ಸೋನಾಲಿ ಸರ್ನೋಬತ್ ಅವರು ಖಾನಾಪುರದ ಕುಗ್ರಾಮಗಳಿಗೆ ಪಡಿತರವನ್ನು ಸಮರ್ಪಕವಾಗಿ ಪೂರೈಸಲು ನಡೆಸಿದ ಹೋರಾಟ ಫಲ ನೀಡಿದೆ.
೧೦-೧೫ ಕಿಮೀ ನಡೆದು ಪಡಿತರ ಪಡೆಯಬೇಕಿದ್ದ ಜನರಿಗೆ ಈಗ ತಮ್ಮ ಗ್ರಾಮಗಳಲ್ಲೇ ಪಡಿತರ ದೊರೆಯುವಂತಾಗಿದ್ದು ಡಾ. ಸೋನಾಲಿ ಸರ್ನೋಬತ್ ಅವರನ್ನು ಇಲ್ಲಿನ ಜನ ಕೊಂಡಾಡಿದ್ದಾರೆ.
ಖಾನಾಪುರ ತಾಲೂಕಿನ ಅಕ್ರಲಿ, ಮೋಹಿಶೇತ್, ಗವೇಗಲಿ, ಕುರದ್ವಾಡ, ಲೋಹರವಾಡ, ಅಸ್ವೋಲಿ, ಗವಳಿವಾಡ, ರಾಜಗೋಳಿ ಮುಂತಾದ ಹಳ್ಳಿಗಳ ಜನ ಪಡಿತರ ಪಡೆಯಲು ೧೦-೧೫ ಕಿ.ಮೀ ನಡೆದುಕೊಂಡು ಹೋಗಬೇಕಿತ್ತು. ದೂರದ ಗ್ರಾಮಗಳಲ್ಲಿ ಪಡಿತರ ಚೀಟಿದಾರರು ಹೆಚ್ಚಿನ ಸಂಖ್ಯೆಯಲ್ಲಿದ್ದು, ಅವರಿಗೆ ಪಡಿತರ ನೀಡುವಂತೆ ಆಹಾರ ಮತ್ತು ಸರಬರಾಜು ಇಲಾಖೆಗೆ ಡಾ.ಸೋನಾಲಿ ಮನವಿ ಮಾಡಿದ್ದರು.
ಸಚಿವ ಉಮೇಶ ಕತ್ತಿ ಅವರನ್ನು ಭೇಟಿಯಾಗಿ ಖಾನಾಪುರದ ಕುಗ್ರಾಮಗಳ ಜನರಿಗೆ ಮನೆ ಬಾಗಿಲೆಗೆ ಸೌಲಭ್ಯ ಕಲ್ಪಿಸುವಂತೆ ಸೋನಾಲಿ ಸರ್ನೋಬತ್ ಪಟ್ಟುಹಿಡಿದಿದ್ದರು.
ಸ್ವಾತಂತ್ರ್ಯ ಬಂದು ೭೫ ವರ್ಷ ಕಳೆದರೂ ಸಿಗದ ಸೌಲಭ್ಯ ಡಾ. ಸೋನಾಲಿ ಅವರ ಪ್ರಯತ್ನದಿಂದ ಸಾಧ್ಯವಾಗಿದೆ. ಗ್ರಾಮಗಳಿಗೆ ಡಾ.ಸೋನಾಲಿ ಅವರ ಸತತ ಪ್ರಯತ್ನದಿಂದ ಪಡಿತರ ದೊರೆಯುವಂತಾಗಿದ್ದು ಆ ಭಾಗದ ಜನ ಅವರನ್ನು ಶ್ಲಾಘಿಸುತ್ತಿದ್ದಾರೆ. ಪಡಿತರ ವಿತರಣೆಯಲ್ಲಿ ಪಾಲ್ಗೊಂಡ ಡಾ. ಸೋನಾಲಿ, ಪಡಿತರ ಪಡೆಯುವುದು ಜನರ ಮೂಲಭೂತ ಹಕ್ಕಾಗಿದೆ. ಜನರಿಗೆ ತಮ್ಮ ಗ್ರಾಮಗಳಲ್ಲೇ ಪಡಿತರ ಲಭಿಸಲು ಸಾಧ್ಯವಾಗಿದ್ದು ಸಂತಸ ತಂದಿದೆ. ಜನರ ಕಷ್ಟ ಯಾವುದೇ ಇದ್ದರೂ ಸ್ಪಂದಿಸಲು ಸದಾ ಸಿದ್ಧಳಿದ್ದೇನೆ ಎಂದು ಹೇಳಿದರು.
ಸಾಧಕರನ್ನು ಸನ್ಮಾನಿಸಿದ ಡಾ. ಸೋನಾಲಿ ಸರ್ನೋಬತ್
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ