ಪ್ರಗತಿವಾಹಿನಿ ಸುದ್ದಿ, ಖಾನಾಪುರ – ನಿಯತಿ ಫೌಂಡೇಶನ್ ಚೇರಮನ್ ಡಾ.ಸೋನಾಲಿ ಸರ್ನೋಬತ್ ಅವರು ಖಾನಾಪುರ ಪ್ರಥಮದರ್ಜೆ ಸರ್ಕಾರಿ ವಿದ್ಯಾಲಯಕ್ಕೆ 40 ಬೆಂಚುಗಳನ್ನು ಕೊಡುಗೆಯಾಗಿ ನೀಡಿದ್ದಾರೆ.
ಖಾನಾಪುರದ ಈ ಕಾಲೇಜು BBA, BA ಮತ್ತು BCOM ನ ಒಂದು ಸಾವಿರ ವಿದ್ಯಾರ್ಥಿಗಳನ್ನು ಹೊಂದಿದೆ. ಅಗತ್ಯಕ್ಕಿಂತ ಕಡಿಮೆ ಬೆಂಚುಗಳಿದ್ದವು. ಹಾಗಾಗಿ ಕಾಲೇಜಿನ ಸಿಬ್ಬಂದಿ ಡಾ ಸರ್ನೋಬತ್ ಅವರ ಬಳಿ ನೆರವು ಕೇಳಿದ್ದರು.
ನಿಯತಿ ಫೌಂಡೇಶನ್ ಒಂದು ಲಕ್ಷ ರೂಪಾಯಿ ಮೌಲ್ಯದ ಬೆಂಚುಗಳನ್ನು ಕಾಲೇಜಿಗೆ ನೀಡಿದೆ.
ಈ ಸಂಬಂಧ ಗುರುವಾರ ನಡೆದ ಕಾರ್ಯಕ್ರಮದಲ್ಲಿ ಡಾ.ಸೋನಾಲಿ ಸರ್ನೋಬತ್ ಅವರನ್ನು ಸನ್ಮಾನಿಸಲಾಯಿತು.
ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡಿದ ಡಾ.ಸೋನಾಲಿ, ಸಮಾಜದಲ್ಲಿ ಅನೇಕ ಒಳ್ಳೆಯ ವ್ಯಕ್ತಿಗಳು ಮತ್ತು ಹಿತೈಷಿಗಳಿದ್ದಾರೆ, ಅವರು ಕಷ್ಟದ ಸಮಯದಲ್ಲಿ ಇತರರಿಗೆ ಸಹಾಯ ಮಾಡುತ್ತಾರೆ. ವಿದ್ಯಾರ್ಥಿಗಳು ತಮ್ಮ ಗುರಿಗಳನ್ನು ಸಾಧಿಸಲು ಕಠಿಣ ಪರಿಶ್ರಮ ಮತ್ತು ಪ್ರಾಮಾಣಿಕವಾಗಿ ಅಧ್ಯಯನ ಮಾಡಬೇಕು ಎಂದು ಕರೆ ನೀಡಿದರು.
ಕಳೆದ 20 ವರ್ಷಗಳಿಂದ ಡಾ ಸೋನಾಲಿ ಸರ್ನೋಬತ್ ಅವರ ಅಧ್ಯಕ್ಷತೆಯಲ್ಲಿ ನಿಯತಿ ಫೌಂಡೇಶನ್‌ನ ಪಯಣದ ಬಗ್ಗೆ ವಿವರಿಸಿದರು. ನಿಯತಿ ಫೌಂಡೇಶನ್ ಹಲವಾರು ಅರ್ಹ ಹಿಂದುಳಿದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ, ಮೊಬೈಲ್ ಫೋನ್ ಮತ್ತು ಲ್ಯಾಪ್‌ಟಾಪ್‌ಗಳ ಸಹಾಯ ಮಾಡಿದೆ. ಅನೇಕ ಕ್ರೀಡಾಪಟುಗಳು, ಕಲಾವಿದರು ಮತ್ತು ನಿರ್ಗತಿಕರಿಗೆ ಸಹಾಯ ಮಾಡಲಾಗಿದೆ ಎಂದು ಹೇಳಿದರು.
ಖಾನಾಪುರ ಮತ್ತು ಬೆಳಗಾವಿ ಸುತ್ತಮುತ್ತಲಿನ ಹಳ್ಳಿಗಳಲ್ಲಿ ಹಿಂದುಳಿದ ಜನರಿಗಾಗಿ ಸೇವೆ ಸಲ್ಲಿಸಲಾಗುತ್ತಿದೆ. ಶಾಲೆಗಳು, ಅನಾಥಾಶ್ರಮಗಳು, ವೃದ್ಧಾಶ್ರಮಗಳಿಗೆ ನಿಯತಿ ಫೌಂಡೇಶನ್ ನೆರವು ನೀಡುತ್ತಿದೆ.
ವಿಟ್ಲ ನಿಡಗಲ್ಕರ್ (ಬಿಜೆಪಿ ಶಕ್ತಿ ಕೇಂದ್ರ ಪ್ರಮುಖ್) ಗ್ರಾಮಪಂಚಾಯತ್ ಸದಸ್ಯ ಸುರೇಶ ಗಂದಿಗವಾಡ, ಈಶ್ವರ ಸಾಣಿಕೊಪ್ಪ (ಬಿಜೆಪಿ ಮುಖಂಡ) ಡಾ. ಡಿ.ಎಂ.ಜವಲ್ಕರ್ (ಪ್ರಾಚಾರ್ಯ ಸರ್ಕಾರಿ ಕಾಲೇಜು, ಖಾನಾಪುರ) . ಡಾ॥ ಸಿ ಬಿ ತಬೋಜಿ, ಎ ಬಿ ನಾಯ್ಕರ್, ರಿಜ್ವಾನಾ ಗಡ್ಡಿಕರ್, ಅರ್ಜುನ ಗುರವ -ವಿದ್ಯಾರ್ಥಿ ಪ್ರತಿನಿಧಿ , ಮಹೇಶ ಗುರವ, ಕುಶಾ ಅಂಬೋಜಿ, ನಾಗೇಶ ರಾಮಾಜಿ. ಬಸವರಾಜ ಕಡೇಮನಿ (ಬಿಜೆಪಿ ಮುಖಂಡ) ಉಪಸ್ಥಿತರಿದ್ದರು.
ಮನೆ ಬಾಗಿಲಿಗೆ ಪಡಿತರ ಯೋಜನೆ ಸಾಕಾರಗೊಳಿಸಿದ ಡಾ.ಸೋನಾಲಿ ಸರ್ನೋಬತ್
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ