
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಕಳೆದ ಒಂದು ವರ್ಷದ ಈ ಕೋರೋನಾ ಸಂಕಷ್ಟದ ಕಾಲದಲ್ಲಿ ಭಾರತೀಯ ಜನತಾ ಪಕ್ಷದ ಮಹಿಳಾ ಪದಾಧಿಕಾರಿ ಮತ್ತು ಖಾನಾಪುರ ತಾಲೂಕು ಪ್ರಭಾರಿಯಾಗಿರುವ ಡಾ. ಸೋನಾಲಿ ಸರನೋಬತ್ ಬೆಳಗಾವಿ ಗ್ರಾಮೀಣ ಮತ್ತು ಖಾನಾಪುರ ತಾಲೂಕಿನಲ್ಲಿ ಸಾವಿರಾರು ಜನರಿಗೆ ಕೋರೋನಾ ಇಮ್ಯೂನೋಬೂಸ್ಟರ್ ಔಷಧವನ್ನು ಉಚಿತವಾಗಿ ವಿತರಿಸಿದ್ದಾರೆ.
ಮೂರನೇ ಅಲೆಯಲ್ಲಿ ಮಕ್ಕಳಿಗೆ ಹೆಚ್ಚು ತೊಂದರೆಯಾಗುವ ಸಾಧ್ಯತೆಯ ಹಿನ್ನೆಲೆಯಲ್ಲಿ ಇದೀಗ ನಿಯತಿ ಫೌಂಡೇಷನ್ ವತಿಯಿಂದ ಬೆಳಗಾವಿ ಮತ್ತು ಖಾನಾಪುರ ತಾಲೂಕಿನ ವ್ಯಾಪ್ತಿಯ ಹಳ್ಳಿಗಳಲ್ಲಿ ಕೋರೋನಾ ರೋಗ ಪ್ರತಿರೋಧಕ ಶಕ್ತಿ ಔಷಧವನ್ನು ಕಾರ್ಯಕರ್ತರ ಮುಖಾಂತರ ವಿತರಿಸುವ ಕಾರ್ಯಕ್ಕೆ ಕೈ ಹಾಕಿದ್ದಾರೆ.

ಕೋರೋನಾ ವಿರುದ್ಧ ಪ್ರತಿರೋಧಕ ಶಕ್ತಿ ಬೆಳೆಸುವ ಹೋಮಿಯೋಪಥಿ ಔಷಧವನ್ನು ಮೂರು ನಿತ್ಯ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ತಲಾ ಮೂರು ಮಾತ್ರೆಗಳಂತೆ ಸೇವಿಸಬೇಕು. ಒಂದು ವರ್ಷದ ಮಗುವಿನಿಂದ ಹಿಡಿದು 18 ವರ್ಷದ ಹದಿಹರೆಯದ ಮಕ್ಕಳಿಗೂ ಸಹ ಈ ಮಾತ್ರೆ ನೀಡಬಹುದು. ಒಂದು ವೇಳೆ ಬೇರೆ ಕಾಯಿಲೆಗಳಿಗೆ ಔಷಧ ತೆಗೆದುಕೊಳ್ಳುತ್ತಿದ್ದರೂ ಸಹ ಈ ಮಾತ್ರೆ ಸೇವಿಸಬಹುದು ಎನ್ನುತ್ತಾರೆ ಡಾಸೋನಾಲಿ ಸರ್ನೋಬತ್.
ಕೋರೋನಾ ಕಾಲದಲ್ಲಿ ಡಾ. ಸೋನಾಲಿ ಸರನೋಬತ್ ಸಾಮಾಜಿಕ ಸೇವೆ:
ಕಳೆದ ಒಂದು ವರ್ಷದಿಂದ ಬಿಟ್ಟು ಬಿಡದೆ ಕಾಡುತ್ತಿರುವ ಕೋರೋನಾದಿಂದ ಜನರ ಜೀವ ರಕ್ಷಣೆಗೆ ಡಾ. ಸೋನಾಲಿ ಸರನೋಬತ್ ಅವರು ಇಲ್ಲಿಯವರೆಗೆ ಹತ್ತು ಸಾವಿರ ಎನ್ 95 ಮಾಸ್ಕ್, ಒಂದು ಸಾವಿರ ಪಿಪಿಇ ಕಿಟ್, 5000 ಬಡ ಕುಟುಂಬಗಳಿಗೆ ದವಸ ಧಾನ್ಯದ ಕಿಟ್, ಗೋಸೇವೆ, ಅನ್ನದಾನ, ಕೋವಿಡ್ ಔಷಧ ಮತ್ತು ಕೋವಿಡ್ ರೋಗಿಗಳಿಗೆ ಆಸ್ಪತ್ರೆಯಲ್ಲಿ ಬೆಡ್ ಒದಗಿಸುವಂತಹ ಸಮಾಜ ಮುಖಿ ಕಾರ್ಯಗಳನ್ನು ಕಳೆದ ಒಂದು ವರ್ಷದಿಂದ ನಡೆಸಿಕೊಂಡು ಬಂದಿದ್ದಾರೆ.ಹೋಮಿಯೋಪಥಿ ಇಮ್ಯೂನೋಬೂಸ್ಟರ್ ಗೆ +91 72592 91554 ಸಂಪರ್ಕಿಸಿ.
ಮೊದಲನೇ ಅಲೆಯಲ್ಲಿ ತನ್ನ ಶಕ್ತಿ ಸಾಮರ್ಥ್ಯದ ಕಿರು ಪರಿಚಯ ಮಾಡಿಕೊಟ್ಟು ಹಿನ್ನೆಲೆಗೆ ಸರಿದಿದ್ದ ಕೋರೋನಾ, ಎರಡನೇ ಅಲೆಯಲ್ಲಿ ತಾನು ಏನು? ಎಚ್ಚರದಪ್ಪಿದರೆ ಏನೇನು ಮಾಡಬಲ್ಲೆ ಎನ್ನುವುದನ್ನು ತೋರಿಸಿಕೊಟ್ಟಿದೆ. ಇದೀಗ ಕೋರೋನಾ ಎರಡನೇ ಅಲೆ ತೆರೆಗೆ ಸರಿಯುತ್ತಿದೆ. ಇದೀಗ ಮೂರನೆಯ ಅಲೆಯ ಬಗ್ಗೆ ಸಾಕಷ್ಟು ಮಾತುಗಳು ಅದೂ ತಜ್ಞರು, ಪರಿಣಿತರಿಂದ ಬರುತ್ತಿವೆ. ಮೂರನೇ ಅಲೆ, ಎರಡನೇ ಅಲೆಯಷ್ಟು ಅಬ್ಬರ ಆಟಾಟೋಪ ಮಾಡಲಿಕ್ಕಿಲ್ಲ ಎನ್ನುವುದು ವೈರಾಲಾಜಿಸ್ಟ್ ಗಳ ಅಭಿಮತ.


ಮೂರನೇ ಅಲೆ ಅಪ್ಪಳಿಸುವ ಹೊತ್ತಿಗೆ ದೇಶದಲ್ಲಿ ಎಷ್ಟು ಜನರು ಲಸಿಕೆ ಪಡೆದಿದ್ದಾರೆ ಎನ್ನುವುದರ ಮೇಲೆ ಅದರ ತೀವ್ರತೆ ಅಂದಾಜಿಸುವುದಕ್ಕೆ ಸಾಧ್ಯ ಎನ್ನುವುದು ತಜ್ಞರ ಅಭಿಮತ. ಲಸಿಕೆ ಪಡೆದವರು ಕಾಯಿಲೆ ಬೀಳುವ ಮತ್ತು ಸಾವಿನ ಪ್ರಮಾಣದಲ್ಲಿ ಗಣನೀಯ ಪ್ರಮಾಣದಲ್ಲಿ ಕಡಿಮೆಯಾಗುತ್ತದೆ.
ಒಂದು ಅಂದಾಜಿನ ಪ್ರಕಾರ ಮೂರನೇ ಅಲೆ ಹೆಚ್ಚು ಕಡಿಮೆ ಆಗಸ್ಟ್ ತಿಂಗಳಿನಲ್ಲಿ ಎದ್ದೇಳುವ ಸಾಧ್ಯತೆ ಇದೆ ಎನ್ನಲಾಗುತ್ತದೆ. ಕೇಂದ್ರ ಸರ್ಕಾರದ ಪ್ರಕಾರದ ದೇಶದಲ್ಲಿ ಹೆಚ್ಚು ಕಡಿಮೆ ಐದು ತರಹದ ಕೋರೋನಾ ವೈರಸ್ ಹರಡಿದ್ದು ಇದರಲ್ಲಿನ ಡಬಲ್ ಮ್ಯೂಟೆಂಟ್ ಕೋರೋನಾ ವೈರಸ್ ದೇಹದ ರೋಗ ಪ್ರತಿರೋಧಕ ಶಕ್ತಿಯ ಮೇಲೆ ನೇರವಾಗಿ ದಾಳಿ ಮಾಡುವ ಗುಣಲಕ್ಷಣಗಳನ್ನು ಬೆಳೆಸಿಕೊಂಡಿರುವ ಕಾರಣ ಕೋರೋನಾ ಡಬಲ್ ಮ್ಯೂಟೇಂಟ್ ದೇಶಾದ್ಯಂತ ವೇಗವಾಗಿ ಹರಡುತ್ತಿದೆ.