ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಮೊಮ್ಮಗಳು ಡಾ.ಸೌಂದರ್ಯ ಆತ್ಮಹತ್ಯೆ ಪ್ರಕರಣ ಇದೀಗ ಎಲ್ಲರಿಗೂ ಯಕ್ಷ ಪ್ರಶ್ನೆಯಾಗಿ ಕಾಡುತ್ತಿದೆ. ಆತ್ಮಹತ್ಯೆಯಂತಹ ದುಡುಕಿನ ನಿರ್ಧಾರವನ್ನು ಸೌಂದರ್ಯ ಕೈಗೊಳ್ಳಲು ಕಾರಣವಾದರೂ ಏನಿರಬಹುದು ಎನ್ನುವುದು ಇನ್ನೂ ನಿಗೂಢವಾಗಿದೆ.
9 ತಿಂಗಳ ಗಂಡು ಮಗುವನ್ನು ಹೊಂದಿದ್ದ ಸೌಂದರ್ಯ ಬಾಣಂತಿ ಸನ್ನಿಯಿಂದಾಗಿ ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದರೆ? ಎಂಬ ಪ್ರಶ್ನೆ ಕೂಡ ಆರಂಭವಾಗಿದೆ. ಶ್ರೀಮಂತ ಕುಟುಂಬದ ಹಿನ್ನೆಲೆ, ಮಾಜಿ ಸಿಎಂ ಮೊಮ್ಮಗಳು, ವೈದ್ಯರ ಕುಟುಂಬ, ಪತಿ ನೀರಜ್ ಮಾತ್ರವಲ್ಲ ಸ್ವತ: ತಾನೂ ಕೂಡ ಡಾಕ್ಟರ್, 9 ತಿಂಗಳ ಮುದ್ದಾದ ಗಂಡುಮಗು. ಯಾವುದಕ್ಕೂ ಕೊರತೆಯಿಲ್ಲದ ಮನೆ. ಸದಾ ಜತೆಯಾಗಿ ಬೆನ್ನಿಗೆ ನಿಂತಿದ್ದ ಕುಟುಂಬ ಸದಸ್ಯರು. ಇಷ್ಟೆಲ್ಲ ಇದ್ದರೂ ಪತಿ ನೀರಜ್ ಜತೆಯೂ ಹೇಳಿಕೊಳ್ಳಲು ಸಾಧ್ಯವಾಗದ ಅದಾವ ಸಮಸ್ಯೆ ಸೌಂದರ್ಯ ಅವರನ್ನು ಕಾಡುತ್ತಿತ್ತು ಎಂಬುದು ಇದೀಗ ಎಲ್ಲರಲ್ಲಿ ಎದ್ದಿರುವ ಪ್ರಶ್ನೆ.
ಹೊರಗಿನಿಂದ ನೋಡಲು ಎಲ್ಲರಂತೆ ಸಹಜವಾಗಿ ಇರುವಂತೆ ಕಾಣುವ ಮಾನಸಿಕ ಖಿನ್ನತೆ ಕ್ಷಣ ಕ್ಷಣಕ್ಕೂ ಜೀವವನ್ನೇ ಹಿಂಡುವಂತಹ ಮಾನಸಿಕ ತೊಳಲಾಟ. ಇದು ಹಲವು ಸಂದರ್ಭದಲ್ಲಿ ವ್ಯಕ್ತಿಯನ್ನೇ ಬಲಿಪಡೆಯುವ ಸಾಧ್ಯತೆ ಹೆಚ್ಚು. ಸೌಂದರ್ಯ ಅವರಿಗೂ ಇಂಥದ್ದೇ ಖಿನ್ನತೆಯ ಸಮಸ್ಯೆ ಇತ್ತೇ? ಅದರಲ್ಲಿಯೂ ಬಾಣಂತಿ ಸನ್ನಿ ಎಂಬ ಖಿನ್ನತೆಗೆ ಒಳಗಾಗಿದ್ದಿರಲೂಬಹುದು ಎಂಬ ಮಾತು ಕೇಳಿಬರುತ್ತಿದೆ.
ಕೆಲ ಬಾಣಂತಿಯರಲ್ಲಿ ಮಗು ಹುಟ್ಟಿದ ಎರಡು ವಾರಗಳವರೆಗೆ ಬಾಣಂತಿ ಸನ್ನಿ ಎಂಬ ಮಾನಸಿಕ ಖಿನ್ನತೆ ಕಾಡುತ್ತದೆ. ಇದು ಎರಡು ವಾರಕ್ಕಿಂತ ಹೆಚ್ಚು ಮುಂದುವರೆದರೆ ಸೂಕ್ತ ಚಿಕಿತ್ಸೆ ಪಡೆಯದೇ ನಿರ್ಲಕ್ಷ ಮಾಡಿದರೆ ಜೀವಕ್ಕೆ ಅಪಾಯ ತಂದುಕೊಳ್ಳುವ ಸಾಧ್ಯತೆ ಹೆಚ್ಚು ಎಂಬುದು ಹಲವು ವೈದ್ಯರ ಅಭಿಪ್ರಾಯ ಕೂಡ ಆಗಿದೆ.
ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಅವರ ಮೊಮ್ಮಗಳು ಸ್ವತ: ವೈದ್ಯೆಯಾಗಿದ್ದೂ ಇಂತಹ ಸಮಸ್ಯೆ ನಿರ್ಲಕ್ಷ ಮಾಡಿದ್ದರೆ? ಸೌಂದರ್ಯ ಖಿನ್ನತೆಗೆ ಒಳಗಾಗಿ ಆತ್ಮಹತ್ಯೆ ನಿರ್ಧಾರ ಮಾಡಿದರೆ? ಅಥವಾ ಬೇರಾವ ಸಮಸ್ಯೆಯಿಂದ ಬಳಲುತ್ತಿದ್ದರು? ಎಂಬುದೇ ಇದೀಗ ಎಲ್ಲರನ್ನೂ ಕಾಡುತ್ತಿರುವ ಪ್ರಶ್ನೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ