ಭಯ್ಯು ಮಹಾರಾಜ್‌ ಆತ್ಮಹತ್ಯೆ: ಮೂವರು ಜೈಲುಪಾಲು

ಪ್ರಗತಿವಾಹಿನಿ ಸುದ್ದಿ, ಇಂಧೋರ್:  ಸ್ವಯಂ ಘೋಷಿತ ಸಂತ ಇಂದೋರ್‌ನ ಭಯ್ಯು ಮಹಾರಾಜ್‌ನ ಆತ್ಮಹತ್ಯೆಗೆ ಪ್ರಚೋದನೆ ನೀಡಿದ್ದ ಆರೋಪದಲ್ಲಿ ಇಂಧೋರ್ ನ್ಯಾಯಾಲಯ ಮೂವರಿಗೆ ತಲಾ ಆರು ವರ್ಷ ಜೈಲು ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.

ಖ್ಯಾತ ಸಂತ ಭಯ್ಯು ಮಹರಾಜ್ ಮೂರು ವರ್ಷಗಳ ಹಿಂದೆ ಪಿಸ್ತೂಲಿನಿಂದ ಶೂಟ್ ಮಾಡಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು. ಪ್ರಕರಣಕ್ಕೆ ಸಂಬಂಧಿಸಿ ಫಾಲಕ್ ಪುರಾಣಿಕ್, ವಿನಾಯಕ ದುಧಾಡೆ ಮತ್ತು ಶರದ್ ದೇಶಮುಖ್ ಎಂಬುವವರನ್ನು ಬಂಧಿಸಲಾಗಿತ್ತು.

Home add -Advt

ಈ ಮೂವರನ್ನು ಸಂತ ಭಯ್ಯು ಮಹಾರಾಜ್ ತಮ್ಮ ಆಶ್ರಮದಲ್ಲಿ ವಿವಿಧ ಕೆಲಸ ಕಾರ್ಯಗಳಿಗಾಗಿ ನೇಮಕ ಮಾಡಿಕೊಂಡಿದ್ದರು. ಈ ಮೂವರು ಸಂತ ಭಯ್ಯು ಮಹಾರಾಜ್‌ರನ್ನು ಬ್ಲ್ಯಾಕ್ ಮೇಲ್ ಮಾಡಿ ಮಾನಸಿಕ ಒತ್ತಡ ನೀಡಿದ್ದರು ಎಂದು ಭಯ್ಯು ಮಹಾರಾಜ್‌ರ ಎರಡನೇ ಪತ್ನಿ ಆರೋಪಿಸಿದ್ದರು.

ನ್ಯಾಯಾಲಯದಲ್ಲಿ ವಿಚಾರಣೆ ನಡೆದು ಆರೋಪ ಸಾಬೀತಾಗಿದ್ದು ಮೂವರಿಗೂ ತಲಾ 6 ವರ್ಷ ಜೈಲು ಶಿಕ್ಷೆ ವಿಧಿಸಿ ಇಂಧೋರ್ ಜಿಲ್ಲಾ ನ್ಯಾಯಾಲಯ ತೀರ್ಪು ನೀಡಿದೆ.

ಅಪರಿಚಿತ ವಾಹನ ಡಿಕ್ಕಿ; ಇಬ್ಬರು ದುರ್ಮರಣ

 

Related Articles

Back to top button