ಡಾ. ವಿಕಾಸ್ ಹತ್ಯೆಗೆ ಹೊಸ ತಿರುವು; ನಗ್ನ ವಿಡಿಯೊ ಅಪ್ ಲೋಡ್ ಅಷ್ಟೇ ಕೊಲೆಗೆ ಕಾರಣವಲ್ಲ

ಪ್ರಗತಿವಾಹಿನಿ ಸುದ್ದಿ, ಬೆಂಗಳೂರು: ಇತ್ತೀಚೆಗೆ ನಡೆದಿದ್ದ ಚೆನ್ನೈ ಮೂಲದ ಡಾ. ವಿಕಾಸ್ ಕೊಲೆ ಪ್ರಕರಣ ಹೊಸ ತಿರುವು ಪಡೆದಿದೆ. ಪೊಲೀಸ್ ತನಿಖೆಯಿಂದ ಕೆಲ ಸ್ಫೋಟಕ ವಿಚಾರಗಳು ಬೆಳಕಿಗೆ ಬಂದಿವೆ.

ತಮ್ಮೊಂದಿಗೆ ಮದುವೆಯಾಗುವ ನಿರ್ಧಾರದಲ್ಲಿದ್ದ ಪ್ರೇಯಸಿ ಪರಪುರುಷನ ಸ್ನೇಹ ಹೊಂದಿರುವುದನ್ನು ಪ್ರಶ್ನಿಸಿದ್ದೇ ವೈದ್ಯನ ಜೀವಕ್ಕೆ ಮುಳುವಾಗಿದೆ ಎಂಬುದು ತನಿಖೆಯಿಂದ ತಿಳಿದುಬಂದಿದೆ.

ಬೇಗೂರಿನ ನ್ಯೂ ಮೈಕೋ ಲೇಔಟ್ ನಲ್ಲಿ ವೈದ್ಯರಾಗಿದ್ದ ವಿಕಾಸ ಕಳೆದ ಸೆ. 19ರಂದು ಬರ್ಬರವಾಗಿ ಕೊಲೆಯಾಗಿದ್ದರು. ಆರ್ಕಿಟೆಕ್ಟ್ ಆಗಿದ್ದ ಪ್ರತಿಭಾ ಜೊತೆ ಡೇಟಿಂಗ್ ನಲ್ಲಿದ್ದರು. ಇಬ್ಬರ ಮದುವೆ ಕೂಡ ನಿಶ್ಚಯವಾಗಿತ್ತು.

ಈ ನಡುವೆ ಡಾ. ವಿಕಾಸ್ ಸಾಮಾಜಿಕ ಜಾಲತಾಣವೊಂದರಲ್ಲಿ ಪ್ರತಿಭಾಳ ನಗ್ನ ವಿಡಿಯೋಗಳನ್ನು ಶೇರ್ ಮಾಡಿದ್ದರು. ಇದರಿಂದ ಕೆರಳಿದ ಪ್ರತಿಭಾ, ವಿಕಾಸ್ ಗೆ ಕಾಲ್ ಮಾಡಿ ತೀವ್ರ ತರಾಟೆಗೆ ತೆಗೆದುಕೊಂಡಿದ್ದಲ್ಲದೆ, ರಾಜಿ ಮಾಡಲು ಸುಶೀಲ್ ಎಂಬಾತನ ಫ್ಲ್ಯಾಟ್ ಗೆ ಕರೆದಿದ್ದಳು.

ಡಾ. ವಿಕಾಸ ಅಲ್ಲಿಗೆ ಹೋದಾಗ ಸುಶೀಲ್, ಆತನ ಸ್ನೇಹಿತರಾದ ಸೂರ್ಯ ಹಾಗೂ ಗೌತಮ್ ಸೇರಿ ಹಲ್ಲೆ ನಡೆಸಿದ್ದರಿಂದ ತೀವ್ರ ರಕ್ತಸ್ರಾವವಾಗಿ ಡಾ. ವಿಕಾಸ ಮೃತಪಟ್ಟಿದ್ದರು. ಅಶ್ಲೀಲ ವಿಡಿಯೊ ಅಪ್ ಲೋಡ್ ಮಾಡಿರುವುದೇ ಕೊಲೆಗೆ ಕಾರಣ ಎಂದು ಪೊಲೀಸರ ಪ್ರಾಥಮಿಕ ತನಿಖೆಯಲ್ಲಿ ಹೇಳಲ್ಪಟ್ಟಿತ್ತು.

ಆದರೆ ಸಂದೇಹಗೊಂಡ ಪೊಲೀಸರು ಹೆಚ್ಚುವರಿ ತನಿಖೆ ನಡೆಸಿದಾಗ ಅನೈತಿಕ ಸಂಬಂಧದ ಹೂರಣ ಹೊರಬಿದ್ದಿದೆ.  ಇತ್ತ ವೈದ್ಯನನ್ನು ಪ್ರೀತಿಸಿ ಮದುವೆಗೆ ಸಿದ್ಧತೆ ಮಾಡಿಕೊಂಡಿದ್ದ ಪ್ರತಿಭಾ ಇನ್ನೊಂದೆಡೆ ಸುಶೀಲ್ ಜತೆಗೂ ಅನೈತಿಕ ಸಂಬಂಧ ಹೊಂದಿದ್ದಳು ಎನ್ನಲಾಗಿದೆ. ಇದನ್ನು ಅರಿತುಕೊಂಡೇ ಡಾ. ವಿಕಾಸ  ಪ್ರತಿಭಾಳ ಜತೆ ವೈಮನಸ್ಯ ಹೊಂದಿದ್ದು ಚಿತ್ರಗಳನ್ನು ಸುಶೀಲ್ ಗೂ ಕಳಿಸಿದ್ದ ಎಂದು ಹೇಳಲಾಗಿದೆ. 

ಕೊಲೆಯ ಪ್ರಮುಖ ಕಾರಣ ಇದೇ ಆಗಿದ್ದಾಗಿ ಪೊಲೀಸರು ತಿಳಿಸಿದ್ದು ಎಲ್ಲ ಆರೋಪಿಗಳನ್ನು ಈಗಾಗಲೇ ಬಂಧಿಸಲಾಗಿದೆ.

ಎರಡು ಗುಂಡು ಬಿದ್ದ ನಂತರವೂ ಉಗ್ರರ ಸದ್ದಡಗಿಸಿದ ಶ್ವಾನ; ಹೆಮ್ಮೆ ವ್ಯಕ್ತಪಡಿಸಿದ ಭಾರತೀಯ ಸೇನಾಪಡೆ

 

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button