Belagavi NewsBelgaum NewsKannada NewsKarnataka NewsPolitics

*ಅರ್ಶ್ ವಿದ್ಯಾಮಂದಿರದಲ್ಲಿ ಹುಟ್ಟುಹಬ್ಬ ಆಚರಿಸಿಕೊಂಡ ಡಾ. ಸೋನಾಲಿ ಸರ್ನೋಬತ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಬಿಜೆಪಿ ಮುಖಂಡೆ ಡಾ. ಸೋನಾಲಿ ಸರ್ನೋಬತ್ ಅವರು, ತಮ್ಮ ಹುಟ್ಟುಹಬ್ಬವನ್ನು ಅರ್ಶ್ ವಿದ್ಯಾ ಮಂದಿರದ ವಿದ್ಯಾರ್ಥಿ‌ನಿಯರೊಂದಿಗೆ ಆಚರಿಸಿಕೊಂಡಿದ್ದಾರೆ.

ಡಾ. ಸೋ‌ನಾಲಿ ಸರ್ನೋಬತ ಅವರು, ವಿದ್ಯಾರ್ಥಿನಿಯರೊಂದಿಗೆ ಮತ್ತು ರಾಜಮಾತಾ ಜಿಜೌ ಸಾಂಸ್ಕೃತಿಕ ಪ್ರತಿಷ್ಠಾನದ ಸದಸ್ಯರು ಈ ವೇಳೆ ಇದ್ದರು.  ಶ್ರೀ ಚಿತ್ಪ್ರಕಾಶಾನಂದ ಸ್ವಾಮೀಜಿ ಅವರು ಡಾ. ಸೋನಾಲಿ ಅವರನ್ನು ಸನ್ಮಾನಿಸಿದರು. ಡಾ.ಸೋನಾಲಿ ಮತ್ತು ಅವರ ಜಿಜೌ ಬ್ರಿಗೇಡ್ ಸದಸ್ಯರು ಸ್ವಾಮೀಜಿ ಅವರನ್ನು ಸನ್ಮಾನಿಸಿದರು. 

ಬಳಿಕ ಆಶ್ರಮದ ವಿದ್ಯಾರ್ಥಿನಿಯರು ಆರತಿ ಮಾಡಿ ಡಾ. ಸೋನಾಲಿಗೆ ಕುಂಕುಮ ತಿಲಕವನ್ನು ಹಚ್ಚಿದ್ದರು. ನಂತರ ಎಲ್ಲರೂ ಹಾರೈಸುತ್ತಾ ಕೇಕ್ ಕತ್ತಿರಿಸಿದರು.‌ ವಿದ್ಯಾರ್ಥಿನಿಯರು ಶ್ಲೋಕಗಳು ಮತ್ತು ಆಧ್ಯಾತ್ಮಿಕ ಗೀತೆಗಳನ್ನು ಹಾಡಿದರು. ವಿದ್ಯಾರ್ಥಿನಿಯರಿಗೆ ಪುಸ್ತಕಗಳು ಮತ್ತು ಲೇಖನ ಸಾಮಗ್ರಿಗಳನ್ನು ವಿತರಿಸಲಾಯಿತು.

ಬೆಳಗಾವಿ ನಗರ ಮತ್ತು ಖಾನಾಪುರದ ಸುತ್ತಮುತ್ತಲಿನ ವಿವಿಧ ಶಾಲೆಗಳು ಮತ್ತು ಅನಾಥಾಶ್ರಮಗಳಲ್ಲಿ ಡಾ ಸೋನಾಲಿ ಸರ್ನೋಬತ್ ಅವರ ಜನ್ಮದಿನದ ಅಂಗವಾಗಿ ಪುಸ್ತಕಗಳನ್ನು ವಿತರಿಸಲಾಯಿತು. 

Home add -Advt

ದೀಪಾಲಿ ಮಾಲಕಾರಿ, ಕಾಂಚನ್ ಚೌಗುಲೆ, ವಿದ್ಯಾ ಸರ್ನೋಬತ್, ಆಶಾರಾಣಿ ನಿಂಬಾಳ್ಕರ್, ನಮ್ರತಾ ಹುಂಡಾರೆ, ನೀನಾ ಕಾಕತ್ಕರ್, ಕಿಶೋರ ಕಾಕಡೆ ಹಾಗೂ ಯುವ ಬಳಗ ಉಪಸ್ಥಿತರಿದ್ದರು.

Related Articles

Back to top button