
ಪ್ರಗತಿವಾಹಿನಿ ಸುದ್ದಿ: ಹತ್ತು ವರ್ಷ ದೇಶವನ್ನಾಳಿದ ಪ್ರಧಾನಿ ಮೋದಿ ಮತ್ತು ಬಿಜೆಪಿ ಧುರೀಣರು ತಮ್ಮ ಸಾಧನೆಗಳ ಮೂಲಕ ದೇಶದ ಜನರೆದುರು ಮತ ಕೇಳಬೇಕೇ ಹೊರತು ಭಾವನಾತ್ಮಕ ವಿಷಯಗಳನ್ನಿಟ್ಟುಕೊಂಡು ದೇಶ ವಿಭಜನೆಯ ದ್ವೇಷದ ರಾಜಕಾರಣ ಮಾಡುತ್ತಿರುವುದು ದೇಶದ ಸಂವಿಧಾನಕ್ಕೆ ಮಾಡುತ್ತಿರುವ ದ್ರೋಹವಾಗಿದೆ. ಇಂತಹ ಜನವಿರೋಧಿ ಬಿಜೆಪಿಯನ್ನು 2024ರ ಲೋಕಸಭಾ ಚುನಾವಣೆಯಲ್ಲಿ ಸೋಲಿಸುವ ಮೂಲಕ ದ್ವೇಷವನ್ನು ಸಾಯಿಸಿ, ದೇಶವನ್ನು ಉಳಿಸಬೇಕು ಎಂದು ಬಂಡಾಯ ಸಾಹಿತಿ ಡಾ. ಯಲ್ಲಪ್ಪ ಹಿಮ್ಮಡಿ ಕರೆ ನೀಡಿದರು.,
ಅವರಿಂದು ಕಾಂಗ್ರೆಸ್ ಅಭ್ಯರ್ಥಿ ಪರ ಜಲಾಲಪೂರ ಗ್ರಾಮದ ಚೆನ್ನದಾಸರ ಸಮುದಾಯದ ಸಭೆಯಲ್ಲಿ ಮಾತನಾಡಿದರು. ಈ ಬಾರಿ ಸಂವಿಧಾನದ ರಕ್ಷಣೆಗಾಗಿ ಸಂವಿಧಾನದ ಉಳಿವಿಗಾಗಿ ನಮ್ಮೆಲ್ಲರ ಹಕ್ಕುಗಳ ರಕ್ಷಣೆಗಾಗಿ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಿ ಚಿಕ್ಕೋಡಿ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಅಧಿಕೃತ ಅಭ್ಯರ್ಥಿಯಾದ ಕುಮಾರಿ ಪ್ರಿಯಾಂಕಾ ಜಾರಕಿಹೊಳಿ ಅವರನ್ನು ಗೆಲ್ಲಿಸಬೇಕೆಂದು ಮನವಿ ಮಾಡಿದರು. ಈ ಸಂದರ್ಭದಲ್ಲಿ ಮುಖಂಡರಾದ ತಾನಾಜಿ ಗಾಣಿಗೇರ್, ಮುತ್ತಪ್ಪ ದಾಸರ, ಯಲ್ಲಪ್ಪ ದಾಸರ, ಪರಶುರಾಮ್ ದಾಸರ, ಶೇಶಪ್ಪ ದಾಸರ,ಮಹದೇವ ಜಾಗನೂರೆ, ಉದಯ ಗಾಣಿಗೇರ, ಹನುಮಂತ ಸಣ್ಣಕ್ಕಿನವರ, ಜಿಲ್ಲಾ ಕಾಂಗ್ರೆಸ್ ಎಸ್ ಸಿ ಘಟಕದ ಅಧ್ಯಕ್ಷರಾದ ನಾಮದೇವ್ ಕಾಂಬಳೆ, ಈರಪ್ಪ ಕಾಂಬಳೆ ಹಾಗೂ ಮುಂತಾದವರು ಉಪಸ್ಥಿತರಿದ್ದರು.