https://youtu.be/jW9NkpoXXUM
ಪ್ರಗತಿವಾಹಿನಿ ಸುದ್ದಿ, ಶಿರಸಿ – ಇಲ್ಲಿಯ ಮಾರಿಕಾಂಬಾ ಜಾತ್ರೆಗಾಗಿ ಬಂದಿದ್ದ ನಾಟಕ ಕಂಪನಿಗಳು ಈಗ ಲಾಕ್ ಡೌನ್ ನಿಂದಾಗಿ ತೀವ್ರ ಸಂಕಷ್ಟಕ್ಕೊಳಗಾಗಿವೆ.
ಈ ಬಾರಿ ಶಿರಸಿಗೆ 5 ನಾಟಕ ಕಂಪನಿಗಳು ಬಂದಿದ್ದವು. ಸುಮಾರು ಒಂದು ತಿಂಗಳು ಗುತ್ತಿಗೆಗೆ ಜಾಗ ಪಡೆದು ಬಂದಿದ್ದ ಅವೆಲ್ಲ ಜಾತ್ರೆ ಮುಗಿಯುವ ವೇಳೆಗೇ ವಕ್ಕರಿಸಿದ ಕೊರೋನಾ ದಿಂದಾಗಿ ನಾಟಕ ಬಂದ್ ಮಾಡಿ ತೀವ್ರ ಸಂಕಷ್ಟ ಅನುಭವಿಸುವಂತಾಗಿದೆ.
ನಾಟಕ ಕಂಪನಿಯ ಕಲಾವಿದರು ಅಗತ್ಯ ವಸ್ತುಗಳು , ಊಟವಿಲ್ಲದೇ ತೀವ್ರ ತೊಂದರೆ ಅನುಭವಿಸುತ್ತಿವೆ.
ಸಾಲು ಸಾಲು ಬಂದ್ ನಿಂದ ನಷ್ಟವಾಗಿ ಊಟಕ್ಕೂ ಗತಿ ಇಲ್ಲದೆ ನಾಟಕ ಕಂಪನಿಗಳು ಸಂಕಷ್ಟ ಪಡುತ್ತಿವೆ.
ಈಗ ಶಿರಸಿ ಶಾಸಕ , ವಿಧಾನಸಭಾ ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ, ಸಚಿವ ಸಿ.ಟಿ ರವಿ, ಮುಖ್ಯಮಂತ್ರಿ ಯಡಿಯೂರಪ್ಪ ರವರಿಗೆ ಸೆಲ್ಫಿ ವೀಡಿಯೋ ಮಾಡಿ ತಮ್ಮನ್ನು ರಕ್ಷಿಸುವಂತೆ ಬೇಡಿಕೊಂಡಿದ್ದಾರೆ ವೃತ್ತಿ ರಂಗಭೂಮಿ ಮಾಲೀಕರ ಸಂಘದ ಅಧ್ಯಕ್ಷ ಚಿಂದೋಡಿ ಶ್ರೀಕಂಠೇಶ್.
ಹಣ ವಿಲ್ಲದೇ ಊಟಕ್ಕೂ ಸಂಕಷ್ಟ ಪಡುತಿದ್ದು ನಾಟಕದ ಟೆಂಟ್ ಕಿತ್ತು ಹೋಗಲೂ ಹಣವಿಲ್ಲವಾಗಿದೆ. ತಮಗೆ ಸಹಾಯ ಮಾಡುವಂತೆ ಸೆಲ್ಪಿ ವೀಡಿಯೋ ಮಾಡಿ ಮನವಿ ಮಾಡಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ