Kannada NewsKarnataka NewsLatest

*ಕುಡಿತದ ಚಟ ಬಿಡಲು ನಾಟಿ ಔಷಧಿ ಸೇವಿಸಿದ್ದ ನಾಲ್ವರು ಸಾವು*

ಪ್ರಗತಿವಾಹಿನಿ ಸುದ್ದಿ: ಕುಡಿತದ ಚಟ ಬಿಡಲು ನಾಟಿ ಔಷಧಿ ಸೇವಿಸಿದ್ದ ನಾಲ್ವರು ಮೃತಪಟ್ಟಿರುವ ಘಟನೆ ಕಲಬುರಗಿಯಲ್ಲಿ ನಡೆದಿದೆ.

ಕಲಬುರಗಿ ಜಿಲ್ಲೆಯ ಸೇಡಂ ತಾಲೂಕಿನ ಇಮಡಾಪುರದಲ್ಲಿ ಈ ಘಟನೆ ನಡೆದಿದ್ದು, ತಾಯಪ್ಪ ಅಲಿಯಾಸ್ ಫಕೀರಪ್ಪ ಮುತ್ಯಾನ ಬಳಿ ಕುಡುತದ ಚಟ ಬಿಡಲೆಂದು ನಾಟಿ ಔಷಧಿ ಸೇವಿಸಿದ್ದರು. ನಿನ್ನೆ ಮೂವರು ಮೃತಪಟ್ತಿದ್ದು, ಇಂದು ಮತ್ತೋರ್ವ ಸಾವನ್ನಪ್ಪಿದ್ದಾರೆ. ನಾಅಟಿ ಔಷಧಿ ಸೇವಿಸಿದ್ದ ನಾಲ್ವರು ಕೊನೆಯುಸಿರೆಳೆದಿದ್ದಾರೆ.

ಮೃತರನ್ನು ಬುರಗಪಲ್ಲಿ ಗ್ರಾಮದ ಲಕ್ಷ್ಮೀನರಸಿಂಹಲು (45), ಶಹಾಬಾದ ಪಟ್ಟಣದ ಗಣೇಶ್ ಬಾಬು ರಾಥೋಡ್ (24), ಮದಗಲ್ ಗ್ರಾಮದ ನಾಗೇಶ್ ಭೀಮಪ್ಪ ಗಡಗು (25) ಹಾಗೂ ಭೀಮನಹಳ್ಳಿ ತಾಂಡಾದ ಮನೋಹರ್ (30) ಎಂದು ಗುರುತಿಸಲಾಗಿದೆ.

Home add -Advt


Related Articles

Back to top button