ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ಶಾಲಾ ಮಕ್ಕಳ ಸುರಕ್ಷತೆ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ ಇಟ್ಟಿರುವ ಬೆಳಗಾವಿ ಪೊಲೀಸರು, ಶಾಲಾ ಮಕ್ಕಳನ್ನು ಕರೆದೊಯ್ಯುವ ಓವರ್ ಲೋಡ್ ವಾಹನಗಳ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದ್ದಾರೆ.
ಶಾಲಾ ಬಸ್, ಆಟೋಗಳಲ್ಲಿ ಮಕ್ಕಳನ್ನು ಓವರ್ ಲೋಡ್ ಆಗಿ ತುಂಬಿಕೊಂಡು ತೆರಳುತ್ತಿದ್ದ ವಾಹನಗಳ ವಿರುದ್ಧ ದಂಡ ವಿಧಿಸಿ ಸಾರಿಗೆ ನಿಯಮ ಉಲ್ಲಂಘನೆ ನಿಟ್ಟಿನಲ್ಲಿ ಪ್ರಕರಣ ದಾಖಲಿಸಿಕೊಂಡು ಎಚ್ಚರಿಕೆ ಸಂದೇಶ ರವಾನಿಸಿದ್ದಾರೆ. ಈವರೆಗೆ ಒಟ್ಟು 129 ಪ್ರಕರಣಗಳನ್ನು ಬೆಳಗಾವಿ ಪೊಲೀಸರು ದಾಖಲಿಸಿದ್ದು, 45,800 ರೂಪಾಯಿ ದಂಡ ವಿಧಿಸಿದ್ದಾರೆ.
ಇಂದು ಒಂದೇ ದಿನ 86 ವಾಹನಗಳಿಗೆ ದಂಡ ವಿಧಿಸಲಾಗಿದೆ. ಈ ಮೂಲಕ ಸಾರಿಗೆ ಕಾನೂನು ಉಲ್ಲಂಘನೆ ಮಾಡುವ ವಾಹನಗಳ ಮೇಲೆ ನಿಗಾ ವಹಿಸಿರುವ ಪೊಲೀಸರು ಶಾಲಾ ಮಕ್ಕಳ ಸುರಕ್ಷತೆಗೆ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದ್ದಾರೆ.
ನಿಮ್ಮ ಮಕ್ಕಳನ್ನು ವಾಹನದಲ್ಲಿ ಶಾಲೆಗೆ ಕಳಿಸುತ್ತಿದ್ದೀರಾ? : ಬೆಳಗಾವಿ SP ನೀಡಿದ ಈ ಎಚ್ಚರಿಕೆ ಓದಿ
https://pragati.taskdun.com/latest/an-appeal-to-all-parents-of-school-going-children/
ಕೆಎಲ್‌ಇ ಆಯುರ್ ಔಷಧಾಲಯಕ್ಕೆ ಡಾ.ಪ್ರಭಾಕರ ಕೋರೆ ಚಾಲನೆ
https://pragati.taskdun.com/latest/kle-ayurprabhakar-korebelagavi/
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ