ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಬೆಳಗಾವಿಯ ಕ್ಯಾಂಪ್ ಪ್ರದೇಶದಲ್ಲಿ “ಅಲ್-ಇಮ್ದಾದಿ” ಶೈಕ್ಷಣಿಕ ಮತ್ತು ಸಾಮಾಜಿಕ ಕಲ್ಯಾಣ ಸಮಾಜ ಇವರ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ರಕ್ತದಾನ ಶಿಬಿರಕ್ಕೆ ಶಾಸಕಿ ಲಕ್ಷ್ಮಿ ಹೆಬ್ಬಾಳಕರ್ ಭಾನುವಾರ ಚಾಲನೆಯನ್ನು ನೀಡಿದರು.
ನಾವೆಲ್ಲರೂ ಭಾರತ ಮಾತೆಯ ಮಕ್ಕಳು. ಎಲ್ಲರೂ ಒಂದಾಗಿ ಮುನ್ನಡೆಯಬೇಕು. ರಕ್ತದಾನವು ಯಾವುದೇ ಜಾತಿ, ಪಂಗಡಗಳಿಗೆ ಸಿಮಿತವಲ್ಲ. ರಕ್ತದಾನದಿಂದ ಇತರರ ಪ್ರಾಣವನ್ನು ಉಳಿಸುವುದೇ ನಮ್ಮ ಮೂಲ ಧ್ಯೇಯವಾಗಿರಬೇಕು ಎಂದು ಅವರು ಕರೆನೀಡಿದರು.
ಕೊರೋನಾ ಸಂದರ್ಭದಲ್ಲಿ ರಕ್ತದ ಕೊರತೆ ತೀವ್ರವಾಗಿದೆ. ಹಾಗಾಗಿ ಯುವಕರು ರಕ್ತದಾನಕ್ಕೆ ಮುಂದೆ ಬರಬೇಕು. ಇದರಂತಹ ದಾನ ಮತ್ತೊಂದಿಲ್ಲ. ರಕ್ತದಾನದಿಂದ ಎಷ್ಟೋ ಜನರ ಜೀವ ಉಳಿಸಲು ಸಾಧ್ಯ ಎಂದು ಹೆಬ್ಬಾಳಕರ್ ಹೇಳಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ