Kannada NewsLatest

ಗೋಜಗಾ ಗ್ರಾಮದಲ್ಲಿ ಜಲಜೀವನ್ ಮಿಷನ್ ಯೋಜನೆಯ 65 ಲಕ್ಷ ರೂ. ಕಾಮಗಾರಿಗೆ ಚಾಲನೆ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ತಾಲೂಕಿನ ಗೋಜಗಾ ಗ್ರಾಮದಲ್ಲಿ ಜಲಜೀವನ್ ಮಿಷನ್ ಯೋಜನೆಯಡಿ ಮನೆ ಮನೆಗಳಿಗೆ ಕುಡಿಯುವ ನೀರಿನ ಪೈಪ್ ಲೈನ್ ಅಳವಡಿಕೆ ಕಾಮಗಾರಿಗಳಿಗೆ ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ, ಯುವ ಕಾಂಗ್ರೆಸ್ ಮುಖಂಡ ಮೃಣಾಲ್ ಹೆಬ್ಬಾಳಕರ, ಯುವರಾಜ  ಕದಂ ಹಾಗೂ ಗ್ರಾಮಸ್ಥರು ಸೇರಿ ಭೂಮಿ ಪೂಜೆಯನ್ನು ಕೈಗೊಂಡು ಚಾಲನೆ ನೀಡಿದರು.

ಬೆಳಗಾವಿ ಗ್ರಾಮೀಣ ಕ್ಷೇತ್ರದ ಶಾಸಕಿ ಲಕ್ಷ್ಮೀ ಹೆಬ್ಬಾಳಕರ ಅವರು ಈ ಕಾಮಗಾರಿಗಾಗಿ  65 ಲಕ್ಷ ರೂ.  ಮಂಜೂರು ಮಾಡಿಸಿದ್ದಾರೆ.   

ಈ ಸಮಯದಲ್ಲಿ ಸ್ಥಳೀಯ ಜನಪ್ರತಿನಿಧಿಗಳು, ಗ್ರಾಮದ ಹಿರಿಯರು, ಪದ್ಮರಾಜ ಪಾಟೀಲ, ಜ್ಯೋತಿಬಾ ಬೆಳಗಾಂವ್ಕರ್, ಶಿವಾಜಿ ಯಳ್ಗೆ, ಮನೋಹರ ಪಾಟೀಲ, ಕೃಷ್ಣ ಕಣಬರಕರ್, ರಾಜು ಪಾಟೀಲ, ಪ್ರಭಾಕರ ನಾಯ್ಕ, ಬಸ್ಸು ನಾಯ್ಕ ಕಲ್ಲಪ್ಪ ಕಾಂಬಳೆ, ಸುಭಾಷ ನಾಯ್ಕ ಲಲಿತಾ ಪಾಟೀಲ, ವಿಷ್ಣು ಕಾಂಬಳೆ, ಶಿವಾ ಪೂಜೇರಿ, ಕೇತನ ಹಿರೇಮಠ, ರಾಜು ನಾಯ್ಕ ಹಾಗೂ ಮುಂತಾದವರು ಉಪಸ್ಥಿತರಿದ್ದರು.

Home add -Advt

ಮಾಜಿ ಸಂಸದ ಮುದ್ದ ಹನುಮೇಗೌಡ ಸೇರಿ ಹಲವರು ಬಿಜೆಪಿ ಸೇರ್ಪಡೆ

Related Articles

Back to top button