Kannada NewsKarnataka NewsLatest

ಕಬ್ಬು ನುರಿಸುವ ಹಂಗಾಮಿಗೆ ಚಾಲನೆ

 ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಸತೀಶ ಶುಗರ‍್ಸ ಲಿಮಿಟೆಡ್ ಸಕ್ಕರೆ ಕಾರ್ಖಾನೆಯ ೨೦೨೧-೨೨ನೇ ಸಾಲಿನ ಕಬ್ಬು ನುರಿಸುವ ಹಂಗಾಮಿಗೆ  ಜಿಲ್ಲೆಯ ರೈತ ಮುಖಂಡರು, ಕಾರ್ಖಾನೆಯ ಆಡಳಿತ ಮಂಡಳಿ ಮತ್ತು ಅಧಿಕಾರಿ ವರ್ಗದವರು ವಿದ್ಯುಕ್ತವಾಗಿ ಚಾಲನೆ ನೀಡಿದರು.

ಸಂಸ್ಥೆಯ ಚೇರಮನ್‌ರು ಮತ್ತು ಮುಖ್ಯ ಹಣಕಾಸಿನ ಅಧಿಕಾರಿ ಪ್ರದೀಪಕುಮಾರ ಇಂಡಿ ಮಾತನಾಡುತ್ತಾ ಜಿಲ್ಲೆಯ ಸತೀಶ ಶುಗರ‍್ಸ ಕಾರ್ಖಾನೆಯ ರೈತರು ಪ್ರಸಕ್ತ ಹಂಗಾಮಿನ ಮೊದಲ ದಿನವೇ ಸುಮಾರು ೧೨೫೩ ವಾಹನಗಳಲ್ಲಿ ಸುಮಾರು ೨೨೦೦೦ ಮೆ.ಟನ್ ಕಬ್ಬನ್ನು ಪೂರೈಸಿದ್ದಾರೆ. ಇದು ಸಕ್ಕರೆ ಕಾರ್ಖಾನೆಗಳ ಇತಿಹಾಸದಲ್ಲಿಯೇ ದಾಖಲೆ ಎಂದರು.

ಕಬ್ಬು ಪೂರೈಸಿದ ರೈತರಿಗೆ ವಿಳಂಬ ಮಾಡದೆ ಕಬ್ಬಿನ ಬಿಲ್ಲನ್ನು ಪಾವತಿ ಮಾಡುತ್ತಿದ್ದು, ಪ್ರಸಕ್ತ ಹಂಗಾಮಿನಲ್ಲಿಯೂ ಸಹ ಕಬ್ಬು ಪೂರೈಸಿದ ರೈತರ ಬ್ಯಾಂಕ್ ಖಾತೆಗಳಿಗೆ ಸಮಯಾನುಸಾರ ಕಬ್ಬಿನ ಬಿಲ್ಲನ್ನು ಜಮೆ ಮಾಡಲಾಗುವುದು ಎಂದು ತಿಳಿಸಿದರು.

. ಈ ಸಂದರ್ಭದಲ್ಲಿ ಜಿಲ್ಲೆಯ ಪ್ರಗತಿಪರ ರೈತರಾದ  ಬಿ.ಎಚ.ರೆಡ್ಡಿ, ಅನಂತರಾವ ನಾಯಿಕ, ಚಂದ್ರಪ್ಪಾ ಮೆಳವಂಕಿ, ವೆಂಕನಗೌಡ ಪಾಟಿಲ, ಪರಸಪ್ಪ ವಗ್ಗ, ಮಹಾದೇವಪ್ಪ ಪತ್ತಾರ, ಹಣಮಂತ ಬಾಬಣ್ಣವರ, ರಾಮಣ್ಣಾ ಕುರುಬಚನ್ನಾಳ, ಅಶೋಕ ಮಳಲಿ, ಕಲ್ಲಿನಾಥ ಪೂಜೇರಿ, ಮತ್ತು ಸಂಸ್ಥೆಯ ಆಡಳಿತ ಮಂಡಳಿಯ ಹಿರಿಯ ಉಪಾಧ್ಯಕ್ಷರುಗಳಾದ ಎಲ್. ಆರ್. ಕಾರಗಿ,  ಪಿ.ಡಿ. ಹಿರೇಮಠ ಹಾಗೂ ಉಪಾಧ್ಯಕ್ಷರುಗಳಾದ  ವಿ. ಎಮ್. ತಳವಾರ,  ಎ. ಎಸ್. ರಾಣಾ,  ಡಿ. ಆರ್. ಪವಾರ ಮತ್ತು ಕಾರ್ಖಾನೆಯ ಕಾರ್ಮಿಕರು ಹಾಗೂ ಅಧಿಕಾರಿಗಳು ಉಪಸ್ಥಿತರಿದ್ದರು.

Home add -Advt

ಹರ್ಷ ಶುಗರ್ಸ್ ಕಬ್ಬು ನುರಿಸುವ ಹಂಗಾಮಿಗೆ ಅದ್ಧೂರಿ ಚಾಲನೆ

Related Articles

Back to top button