Kannada NewsKarnataka NewsNational

*ಸ್ಫೋಟ ಪ್ರಕರಣದಲ್ಲಿ ಅರೆಸ್ಟ್ ಆದ ಡ್ರೋನ್ ಪ್ರತಾಪ್*

ಪ್ರಗತಿವಾಹಿನಿ ಸುದ್ದಿ : ಸೋಡಿಯಂ ಮೆಟಲ್ ಬಳಸಿ ಕೃಷಿ ಹೊಂಡದಲ್ಲಿ ನಡೆಸಿದ್ದ ಸ್ಫೋಟ ಪ್ರಕರಣದ ಆರೋಪದಡಿ ಇದೀಗ ಬಿಗ್‌ಬಾಸ್ ಖ್ಯಾತಿಯ ಮಾಜಿ ಸ್ಪರ್ಧಿ ಡೋನ್ ಪ್ರತಾಪ್‌ ಅವರನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ.

ಮಧುಗಿರಿ ತಾಲೂಕಿನ ಜನಕಲೋಟಿ ಗ್ರಾಮ ಸಮೀಪದ ಕೃಷಿ ಹೊಂಡವೊಂದರಲ್ಲಿ ಪ್ರತಾಪ್ ಸೋಡಿಯಂ ಮೆಟಲ್ ಬಳಸಿಕೊಂಡು, ಅದು ನೀರಿಗೆ ಬೆರೆತಾಗ ಹೇಗೆ ಸ್ಪೋಟವಾಗುತ್ತೆ ನೋಡಿ ಎಂಬ ಎಕ್ಸಪೆರಿಮೆಂಟ್ ಮಾಡಿರುವ ಸೈನ್ಸ್ ವಿಡಿಯೋ ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿದ್ದರು. ಇದರ ವಿರುದ್ಧ ಸಾಕಷ್ಟು ಟೀಕೆಗಳು ವ್ಯಕ್ತವಾಗಿದ್ದು, ಘಟನೆ ಸಂಬಂಧ BNS ಸೆಕ್ಷನ್ 288, ಸ್ಫೋಟವಸ್ತು ನಿಯಂತ್ರಣ ಕಾಯ್ದೆ 3ರಡಿ ಮಿಡಿಗೇಶಿ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು.

ಈ ಹಿನ್ನೆಲೆಯಲ್ಲಿ ಮಿಡಿಗೇಶಿ ಪೊಲೀಸರು ಡೋನ್ ಪ್ರತಾಪ್ ರನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ. ಪ್ರತಾಪ್ ಸೈನ್ಸ್ ಹೆಸರಲ್ಲಿ ಇದೆಂಥಾ ಹುಚ್ಚಾಟ ಮಾಡುತ್ತಿದ್ದಾನೆ ಎಂತಲೂ ಕೆಲ ನೆಟ್ಟಿಗರು ತೀವ್ರ ತರಾಟೆಗೆ ತೆಗೆದುಕೊಂಡಿದ್ದಾರೆ.

ನೀರಿಗೆ ಸೋಡಿಯಂ ಮೆಟಲ್ ಹಾಕುತ್ತಿದ್ದಂತೆ ಅದು ತಕ್ಷಣ ದೊಡ್ಡ ಮಟ್ಟದಲ್ಲಿ ಸ್ಫೋಟವಾಗಿದ್ದಲ್ಲದೇ, ಶಬ್ದ ಕೂಡ ದೊಡ್ಡ ಪ್ರಮಾಣದಲ್ಲೇ ಕೇಳಿಸಿತ್ತು. ಇದರ ಲೈವ್ ವಿಡಿಯೋವನ್ನು ಪ್ರತಾಪ್ ಹಂಚಿಕೊಂಡಿದ್ದ. ಪ್ರತಾಪ್ ಇದೇನು ಕಿತಾಪತಿಗೆ ಅಂತಾ ಕೆಲ ಪರಿಸರ ಪ್ರೇಮಿಗಳು ವಿರೋಧ ವ್ಯಕ್ತಪಡಿಸಿದ್ದಾರೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button