ಪ್ರಗತಿವಾಹಿನಿ ಸುದ್ದಿ: ಬಿಗ್ ಬಾಸ್ ಸ್ಪರ್ಧಿ ಡ್ರೋಣ್ ಪ್ರತಾಪ್ ವಿರುದ್ಧ ಮತ್ತೊಂದು ಆರೋಪ ಕೇಳಿಬಂದಿದೆ. ಡ್ರೋಣ್ ಪ್ರತಾಪ್ ಕಳಪೆ ಗುಣಮಟ್ಟದ ಡ್ರೋಣ್ ಮಾರಾಟ ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
ಪುಣೆಯ ಕ್ಯಾಸ್ಪರ್ ಡ್ರೊನೊಟಿಕ್ಸ್ ಹೆಸರಿನ ಸಂಸ್ಥೆಯ ಸಿಇಓ ಸಾರಂಗ್ ಮಾನೆ ಎಂಬುವವರು ಡ್ರೋಣ್ ಪ್ರತಾಪ್ ಅವರಿಂದ ಕೆಲ ತಿಂಗಳ ಹಿಂದೆ 8 ಡ್ರೋಣ್ ಗಳನ್ನು ನೀಡುವಂತೆ ಒಪ್ಪಂದ ಮಾಡಿಕೊಂಡಿದ್ದರು. ಆದರೆ ನಾಲ್ಕು ಡ್ರೋಣ್ ಗಳನ್ನಷ್ಟೇ ನೀಡಿರುವ ಪ್ರತಾಪ್ ಉಳಿದ ಡ್ರೋಣ್ ಗಳನ್ನು ನೀಡಿಲ್ಲ. ಅಲ್ಲದೇ ಈಗಾಗಲೇ ನೀಡಿರುವ ಡ್ರೋಣ್ ಕಳಪೆ ಗುಣಮಟ್ಟದ್ದಾಗಿದೆ. ಹೀಗೆಂದು ಸಾರಂಗ್ ಮಾನೆ ಆರೋಪಿಸಿದ್ದಾರೆ.
ಕಳೆದ ವರ್ಷ ನಾಸಿಕ್ ಡ್ರೋನ್ ಎಕ್ಸಿಬಿಷನ್ ನಲ್ಲಿ ನಾನು ಡ್ರೋಣ್ ಪ್ರತಾಪ್ ಅವರ ಡ್ರೋಣ್ ಗಳನ್ನು ನೋಡಿದೆ. ಧುಲಿಯಾನಲ್ಲಿ ಅವರ ಪಿಎ ಸಾಗರ್ ಮುಖಾಂತರ ಅವರ ಕಚೇರಿಗೆ ಹೋಗಿ ಭೇಟಿಯಾಗಿ ಒಟ್ಟು 8 ಡ್ರೋಣ್ ಗೆ ಆರ್ಡರ್ ಮಾಡಿ ಒಪ್ಪಂದ ಮಾಡಿಕೊಂಡಿದ್ದೆವು. 35.75 ಲಕ್ಷ ಅಡ್ವಾನ್ಸ್ ಹಣವನ್ನೂ ನೀಡಿದ್ದೇನೆ. ಡ್ರೋಣ್ ನೀಡಲು ಪ್ರತಾಪ್ ಎರಡು ತಿಂಗಳು ತಡ ಮಾಡಿದ್ದಾರೆ. ಬಳಿಕ ನಾಲ್ಕು ಡ್ರೋಣ್ ಗಳನ್ನು ಮಾತ್ರ ಕೊಟ್ಟಿದ್ದಾರೆ. ಇನ್ನೂ ನಾಲ್ಕು ಡ್ರೋಣ್ ಗಳನ್ನು ಅವರು ಕೊಡುವುದಿದೆ. ಈಗಾಗಲೇ ಕೊಟ್ಟಿರುವ ಡ್ರೋಣ್ ಕಳಪೆ ಗುಣಮಟ್ಟ ಹೊಂದಿದೆ.
ಒಂದರಲ್ಲಿ ತಪ್ಪಾಗಿ ಜಿಪಿಎಸ್ ತೋರಿಸುತ್ತದೆ. ವಿದೇಶದಿಂದ ಡ್ರೋಣ್ ಬಿಡಿಬಾಗ ತಂದು. ತಾವು ಜೋಡಿಸಿ ಮಾರಾಟ ಮಾಡುತ್ತಾರೆ ಅವರಿಗೆ ಅಷ್ಟಾಗಿ ತಂತ್ರಜ್ಞಾನದ ಬಗ್ಗೆ ಅರಿವಿದೆ ಅನಿಸುತ್ತಿಲ್ಲ ಎಂದು ಆರೋಪಿಸಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ