Kannada NewsKarnataka NewsLatest

ಬೀದಿ ನಾಯಿ ಸಮೀಕ್ಷೆಗೆ ಡ್ರೋನ್ ಬಳಕೆ; ಬಿಬಿಎಂಪಿ ಹೊಸ ಪ್ರಯೋಗ

ಪ್ರಗತಿವಾಹಿನಿ ಸುದ್ದಿ, ಬೆಂಗಳೂರು: ಮಹಾನಗರದಲ್ಲಿ ಎಷ್ಟು ಬೀದಿನಾಯಿಗಳಿವೆ ಎಂಬುದನ್ನು ಕಂಡುಕೊಳ್ಳಲು ಡ್ರೋನ್ ಗಳ ಮೂಲಕ ಸಮೀಕ್ಷೆಗೆ ಬಿಬಿಎಂಪಿ ಮುಂದಾಗಿದೆ.

ಈ ಪ್ರಯೋಗ ಇದೇ ಮೊದಲ ಬಾರಿಯಾಗಿದ್ದು ಜುಲೈ 1ರಿಂದ ಆರಂಭಗೊಳ್ಳಲಿದೆ. ಈ ಮೊದಲು ಬೈಕ್ ನಲ್ಲಿ ಸುತ್ತಿ ನಾಯಿಗಳನ್ನು ಲೆಕ್ಕ ಹಾಕಬೇಕಿತ್ತು. 2019ರಲ್ಲ ನಡೆಸಲಾಗಿದ್ದ ಸಮೀಕ್ಷೆಯಲ್ಲಿ ಸುಮಾರು 3 ಲಕ್ಷ ನಾಯಿಗಳನ್ನ ಗುರುತಿಸಲಾಗಿತ್ತು. ನಂತರ ಅವುಗಳಿಗೆ ಸಂತಾನಹರಣ ಚಿಕಿತ್ಸೆ ನೀಡಲಾಗಿತ್ತು. ಆ ನಂತರದಲ್ಲಿ ನಾಯಿಗಳ ಸಂಖ್ಯೆ ಎಷ್ಟಾಗಿದೆ ಎಂಬ ನಿಖರ ಲೆಕ್ಕವಿರಲಿಲ್ಲ.

ಇದೀಗ ಡ್ರೋನ್ ಮೂಲಕ ಬೀದಿ ನಾಯಿಗಳ ಲೆಕ್ಕ ಹಾಕಲು ಸ್ಕೆಚ್ ಸಿದ್ಧಪಡಿಸಲಾಗಿದೆ. ಇದಕ್ಕಾಗಿ 50 ತಂಡಗಳನ್ನು ರಚಿಸಲಾಗಿದ್ದು, ಪ್ರತಿ ತಂಡ ಇಬ್ಬರು ಸದಸ್ಯರನ್ನು ಒಳಗೊಂಡಿರುತ್ತದೆ. ಒಬ್ಬರು ವಾಹನ ಚಲಾಯಿಸಿದರೆ ಇನ್ನೊಬ್ಬರು ನಾಯಿಯ ಚಿತ್ರ ತೆಗೆದು ಡೇಟಾ ಅಪ್ಲೋಡ್ ಮಾಡ್ತಾರೆ.

ಪ್ರತಿ ತಂಡ ಬೆಳಗ್ಗೆ 6ರಿಂದ 10ರವರೆಗೆ ದಿನಕ್ಕೆ 5 ಕಿಮೀ ಕ್ರಮಿಸಿ ಸಮೀಕ್ಷೆ ನಡೆಸಲಿದೆ. ತಂಡಗಳಿಗೆ ಸಮೀಕ್ಷೆ ನಡೆಸಲು ಆಯಾ ಪ್ರದೇಶಗಳನ್ನು ಕೂಡ ನಿಗದಿಪಡಿಸಲಾಗಿದೆ. ಡೇಟಾ ಆಧಾರದ ಮೇಲೆ ಪಶುಸಂಗೋಪನ ಇಲಾಖೆ 100 ನಾಯಿಗಳಿಗೆ ಮೈಕ್ರೋ ಚಿಪ್ ಅಳವಡಿಕೆ ಮಾಡಲಿದೆ. 15 ದಿನಗಳಲ್ಲಿ ಸಮೀಕ್ಷೆ ಮುಗಿಸುವ ಗುರಿ ಹೊಂದಿದ್ದು ಡೇಟಾವನ್ನು ಇಂಡಿಯನ್ ಕೌನ್ಸಿಲ್ ಆಫ್ ಅಗ್ರಿಕಲ್ಚರ್ (ICAR)ಗೆ ಕಳುಹಿಸಲಾಗುತ್ತದೆ.

Home add -Advt

Related Articles

Back to top button