*ಬರಪೀಡಿತ ತಾಲೂಕುಗಳ ಪಟ್ಟಿಯಲ್ಲಿಲ್ಲ ಚಿಕ್ಕಮಗಳೂರು; ಮಾನದಂಡಗಳ ಮೌಲ್ಯಮಾಪನ: ಸಚಿವರ ಭರವಸೆ*
ಪ್ರಗತಿವಾಹಿನಿ ಸುದ್ದಿ; ಬೆಳಗಾವಿ ಸುವರ್ಣಸೌಧ: ಅರೆಮಲೆನಾಡು ಪ್ರದೇಶವಾಗಿರುವ ಚಿಕ್ಕಮಗಳೂರು ತಾಲೂಕು ಬರಪೀಡಿತ ತಾಲೂಕುಗಳ ಪಟ್ಟಿಯಿಲ್ಲ; ಮಲೆನಾಡು ಪ್ರದೇಶದಲ್ಲಿರುವ ಅನೇಕ ತಾಲೂಕುಗಳು ಬರಪೀಡಿತ ತಾಲೂಕುಗಳ ಪಟ್ಟಿಯಲ್ಲಿವೆ;ನಮ್ಮ ತಾಲೂಕಿನ ಜನರು,ರೈತ ಮುಖಂಡರು,ರೈತರು ನಮ್ಮನ್ನು ಪ್ರಶ್ನಿಸುತ್ತಿದ್ದಾರೆ ಎಂಬ ಸ್ಥಳೀಯ ಶಾಸಕ ತಮ್ಮಯ್ಯ ಎಚ್.ಡಿ ಅವರ ಪ್ರಶ್ನೆಗೆ ಉತ್ತರಿಸಿದ ಕಂದಾಯ ಸಚಿವ ಕೃಷ್ಣಭೈರೇಗೌಡ ಕೇಂದ್ರ ಸರಕಾರದ ನಿಗದಿಪಡಿಸಿದ ಮಾನದಂಡದಡಿ ಬರಪೀಡಿತ ತಾಲೂಕುಗಳನ್ನು ಘೋಷಿಸಲಾಗುತ್ತದೆ. ಅದರ ವ್ಯಾಪ್ತಿಯೊಳಗೆ ಈ ತಾಲೂಕು ಬರದಿರುವ ಕಾರಣ ಹೊರಗಿಡಲಾಗಿದೆ ಎಂದರು.
ಹಿಂಗಾರು ಬರ ತಾಲೂಕುಗಳ ಘೋಷಣೆ ಸಂದರ್ಭದಲ್ಲಿ ಪರಿಶೀಲಿಸಲಾಗುವುದು. ಸದಸ್ಯರ ಮನವಿಯನ್ನು ಪರಿಗಣಿಸಿ ಈಗಿರುವ ಮಾನದಂಡಗಳಡಿ ಮತ್ತೊಮ್ಮೆ ಪರಿಶೀಲನೆ ನಡೆಸಲಾಗುವುದು ಎಂದರು.
ಬರ ಘೋಷಣೆಗೆ ಸಂಬಂಧಿಸಿದಂತೆ ಈಗಿರುವ ಮಾನದಂಡಗಳು ಸರಿಯಾಗಿಲ್ಲ;ಅವುಗಳು ಪರಿಷ್ಕೃತವಾಗಬೇಕು ಎಂದು ಕೇಂದ್ರ ಸರಕಾರಕ್ಕೆ ಮುಖ್ಯಮಂತ್ರಿಗಳು ಜೂನ್ ತಿಂಗಳಲ್ಲಿಯೇ ಪತ್ರ ಬರೆದಿದ್ದಾರೆ ಇಂದಿಗೂ ಅಲ್ಲಿಂದ ಉತ್ತರ ಬಂದಿಲ್ಲ ಎಂದು ಅವರು ಸದನಕ್ಕೆ ಮಾಹಿತಿ ನೀಡಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ