ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಡ್ರಗ್ಸ್ ಪ್ರಕರಣ ದಿನದಿಂದ ದಿನಕ್ಕೆ ಹೊಸ ತಿರುವು ಪಡೆದುಕೊಳ್ಳುತ್ತಿದ್ದು, ಕನ್ನಡದ ಮತ್ತೋರ್ವ ಖ್ಯಾತ ಆಂಕರ್ ಕಂ ನಟಿ ಅನುಶ್ರೀ ಅವರಿಗೂ ಕೂಡ ಮಾದಕ ಲೋಕದ ನಂಟಿದೆ ಎನ್ನಲಾಗುತ್ತಿದೆ.
ಡ್ರಗ್ಸ್ ಪ್ರಕರಣದಲ್ಲಿ ಮಂಗಳೂರಿನಲ್ಲಿ ಇತ್ತೀಚೆಗೆ ಬಂಧಿಸಲ್ಪಟ್ಟಿದ್ದ ಬಾಲಿವುಡ್ ನಟ, ಡಾನ್ಸರ್ ಕಿಶೋರ್ ಶೆಟ್ಟಿ ಆಪ್ತ ಕೊರಿಯೋಗ್ರಾಫರ್ ತರುಣ್ ಸಿಸಿಬಿ ವಿಚಾರಣೆ ವೇಳೆ ಆಂಕರ್ ಅನುಶ್ರೀ ಬಗ್ಗೆ ಸ್ಫೋಟಕ ಮಾಹಿತಿ ಬಾಯ್ಬಿಟ್ಟಿದ್ದಾನೆ ಎನ್ನಲಾಗಿದೆ.
ಕಿಶೋರ್ ಶೆಟ್ಟಿ ಬಂಧನದ ಬೆನ್ನಲ್ಲೇ ಆತನ ಮಾಹಿತಿ ಆಧರಿಸಿ ಕೊರಿಯೋಗ್ರಾಫರ್ ತರುಣ್ ನನ್ನು ಬಂಧಿಸಲಾಗಿತ್ತು. ತರುಣ್ ತಾನು ಡ್ರಗ್ಸ್ ಸೇವಿಸುತ್ತಿರುವುದಾಗಿಯೂ ಬಾಯ್ಬಿಟ್ಟಿದ್ದು, ಆಂಕರ್ ಕಂ ನಟಿ ಅನುಶ್ರೀ ಜೊತೆ ತನಗೆ ಕ್ಲೋಸ್ ಕಾಂಟ್ಯಾಕ್ಟ್ ಇರುವುದಾಗಿ ತಿಳಿಸಿದ್ದಾನೆ. ಅಲ್ಲದೇ ಕನ್ನಡದ ಹಲವು ರಿಯಾಲಿಟಿ ಶೋಗಳಲ್ಲೂ ತಾನು ಭಾಗವಹಿಸಿದ್ದಾಗಿ ಹೇಳಿದ್ದಾನೆ ಎನ್ನಲಾಗಿದೆ. ವಿಚಾರಣೆ ವೇಳೆ ತರುಣ್, ಅನುಶ್ರೀ ಸೇರಿದಂತೆ ಹಲವರ ಹೆಸರು ಬಾಯ್ಬಿಟ್ಟಿದ್ದು ಹೆಚ್ಚಿನ ಮಾಹಿತಿ ಕಲೆ ಹಾಕಲು ಮಂಗಳೂರು ಸಿಸಿಬಿ ಪೊಲೀಸರ ತಂಡ ಬೆಂಗಳೂರಿಗೆ ಆಗಮಿಸಿದೆ ಎನ್ನಲಾಗಿದೆ.
ಈ ನಡುವೆ ಡ್ರಗ್ಸ್ ಪ್ರಕರಣ ಸಂಬಂಧ ಸಿಸಿಬಿ ಪೊಲೀಸರು ವಾಟ್ಸಪ್ ಮೂಲಕ ಆಂಕರ್ ಅನುಶ್ರೀ ಅವರಿಗೆ ನೋಟೀಸ್ ನೀಡಿದ್ದಾರೆ ಎಂದು ತಿಳಿದುಬಂದಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ