ಪ್ರಗತಿವಾಹಿನಿ ಸುದ್ದಿ; ಮಂಗಳೂರು: ಮಾದಕ ವಸ್ತುಗಳ ಮಾಯಾಜಾಲಕ್ಕೆ ವೈದ್ಯಕೀಯ ಲೋಕವೇ ಸಿಲುಕಿಕೊಂಡಿರುವ ಸ್ಟೋರಿಯಿದು. ಡ್ರಗ್ಸ್ ಪ್ರಕರಣದಲ್ಲಿ ಕಡಲ ನಗರಿ ಮಂಗಳೂರಿನ ಪ್ರತಿಷ್ಠಿತ ಮೆಡಿಕಲ್ ಕಾಲೇಜಿನ ವೈದ್ಯರು ವೈದ್ಯಕೀಯ ವಿದ್ಯಾರ್ಥಿ, ವಿದ್ಯಾರ್ಥಿನಿಯರು ಸೇರಿದಂತೆ 10 ಜನರನ್ನು ಪೊಲಿಸರು ಬಂಧಿಸಿದ್ದಾರೆ.
ಬಂಧಿತ ಡ್ರಗ್ಸ್ ಪೆಡ್ಲರ್ ಇಂಗ್ಲೆಂಡ್ ಮೂಲದ ನೀಲ್ ಕಿಶೋರಿಲಾಲ್ ಎಂಬಾತ ನೀಡಿದ ಮಾಹಿತಿ ಮೇರೆಗೆ ನಡೆಸಿದ ದಾಳಿಯಲ್ಲಿ 10 ಜನರನ್ನು ಬಂಧಿಸಲಾಗಿದೆ.
24 ವರ್ಷದ ವಿದ್ಯಾರ್ಥಿನಿ ಡಾ.ನದಿಯಾ ಸಿರಾಜ್, 26 ವರ್ಷದ ವಿದ್ಯಾರ್ಥಿನಿ ಡಾ.ವರ್ಷಿಣಿ ಪ್ರತಿ, 22 ವರ್ಷದ ವಿದ್ಯಾರ್ಥಿನಿ ಡಾ.ರಿಯಾ ಚಡ್ಡಾ, 23 ವರ್ಷದ ವಿದ್ಯಾರ್ಥಿನಿ ಡಾ.ಹೀರಾ ಬಸಿನ್, 27 ವರ್ಷದ ವಿದ್ಯಾರ್ಥಿ ಡಾ.ಬಾನು ದಹಿಯಾ, 23 ವರ್ಷದ ವಿದ್ಯಾರ್ಥಿ ಡಾ.ಕ್ಷಿತಿಜ್ ಗುಪ್ತಾ, ವೈದ್ಯರಾದ ಡಾ.ಸಮೀರ್, ಡಾ.ಮಣಿಮಾರನ್ ಮುತ್ತು ಹಾಗೂ ಸ್ಥಳೀಯ ವ್ಯಕ್ತಿ ಮೊಹಮ್ಮದ್ ರೌಫ್ ಬಂಧಿತರು.
ಬಂಧಿತರೆಲ್ಲರೂ ಕೆಎಂಸಿ ಅತ್ತಾವರ, ಕೆಎಂಸಿ ಮಣಿಪಾಲ್ ಹಾಗೂ ಯೆನಪೋಯಾ ದೇರಳಕಟ್ಟೆ ಮೆಡಿಕಲ್ ಕಾಲೇಜಿನ ವೈದ್ಯರು ಹಾಗೂ ವೈದ್ಯಕೀಯ ವಿದ್ಯಾರ್ಥಿ, ವಿದ್ಯಾರ್ಥಿನಿಯರಾಗಿದ್ದಾರೆ ಎಂದು ಮಂಗಳೂರಿನ ಪೊಲೀಸ್ ಆಯುಕ್ತ ಶಶಿಕುಮಾರ್ ತಿಳಿಸಿದ್ದಾರೆ.
*ಪತ್ನಿಗೆ ಮೋಸ; ಫೇಸ್ ಬುಕ್ ಗೆಳತಿಯೊಂದಿಗೆ ಪತಿ ಸರಸ; ಹಿಂಸೆ ತಾಳಲಾರದೇ ಆತ್ಮಹತ್ಯೆಗೆ ಯತ್ನಿಸಿದ ಹೆಂಡತಿ*
https://pragati.taskdun.com/husbandcheatingwifesuicide-attempt/
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ