Latest

5 ಗಂಟೆ ವಿಚಾರಣೆ ಎದುರಿಸಿದ ಗೀತಾಭಾರತಿ ಭಟ್

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಡ್ರಗ್ಸ್ ಪ್ರಕರಣ ಸಂಬಂಧ ನೋಟೀಸ್ ಹಿನ್ನೆಲೆಯಲ್ಲಿ ಐಎಸ್ ಡಿ ವಿಚಾರಣೆಗೆ ಹಾಜರಾಗಿದ್ದ ಬ್ರಹ್ಮಗಂಟು ಧಾರಾವಾಹಿಯ ನಟಿ ಗೀತಾ ಭಾರತಿ ಭಟ್, ಅಧಿಕಾರಿಗಳು ಕೇಳಿದ ಎಲ್ಲಾ ಪ್ರಶ್ನೆಗಳಿಗೂ ಉತ್ತರ ಕೊಟ್ಟಿದ್ದೇನೆ. ನನಗೂ ಈ ಪ್ರಕರಣಕ್ಕೂ ಯಾವುದೇ ಸಂಬಂಧವಿಲ್ಲ ಎಂದಿದ್ದಾರೆ.

ಐಎಸ್ ಡಿ ಅಧಿಕಾರಿಗಳ ಸತತ 5 ಗಂಟೆಗಳ ವಿಚಾರಣೆ ಬಳಿಕ ಹೊರಬಂದ ನಟಿ ಗೀತಾ ಭಾರತಿ, ಐಎಸ್ ಡಿ ಅಧಿಕಾರಿಗಳು ಸಾಮಾನ್ಯ ಪ್ರಶ್ನೆ ಕೇಳಿದ್ದಾರೆ. ನನ್ನ ಮೊಬೈಲ್ ಪಡೆದು ಪರಿಶೀಲಿಸಿ ವಾಪಸ್ ನೀಡಿದ್ದಾರೆ. ಅಧಿಕಾರಿಗಳಿಗೆ ನಾನು ನೀಡಿದ ಉತ್ತರ ತೃಪ್ತಿ ತಂದಿದೆ. ಮತ್ತೆ ವಿಚಾರಣೆಗೆ ಕರೆದರೆ ಬರಲು ಸಿದ್ಧ ತನಿಖೆಗೆ ಎಲ್ಲಾ ರೀತಿಯ ಸಹಕಾರ ನೀಡುತ್ತೇನೆ ಎಂದರು.

Home add -Advt

ನನಗೂ ಈ ಡ್ರಗ್ಸ್ ಪ್ರಕರಣಕ್ಕು ಯಾವುದೇ ಸಂಬಂಧವಿಲ್ಲ. ನಾನು ಯಾವುದೇ ಪಾರ್ಟಿ, ಪಬ್ ಗಳಿಗೆ ಹೋಗುವುದೂ ಇಲ್ಲ. ಖಾಸಗಿ ಚಾನಲ್ ನ ಕಾರ್ಯಕ್ರಮ, ಮನೆಯ ಕಾರ್ಯಕ್ರಮ ಬಿಟ್ಟರೆ ನಾನು ಎಲ್ಲೂ ಭಾಗವಹಿಸಲ್ಲ. ಪ್ರಕರಣದಲ್ಲಿ ಬಂಧಿತರಾದವರು ಯಾರೂ ನನಗೆ ಪರಿಚಯವಿಲ್ಲ ಎಂದು ಹೇಳಿದರು.

Related Articles

Back to top button