ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಡ್ರಗ್ಸ್ ಜಾಲದ ವಿರುದ್ಧ ಎನ್ ಸಿಬಿ ಅಧಿಕಾರಿಗಳ ಕಾರ್ಯಾಚಾರಣೆ ಮುಂದುವರೆದಿದ್ದು, ಪ್ರಸಾದದ ಹೆಸರಲ್ಲಿ ಕೊರಿಯರ್ ಮೂಲಕ ಡ್ರಗ್ಸ್ ಸಾಗಾಟ ದಂಧೆಯಲ್ಲಿ ತೊಡಗಿದ್ದ ಮಾಜಿ ಪೊಲೀಸ್ ಅಧಿಕಾರಿ ಸೇರಿದಂತೆ ಮೂವರನ್ನು ಬಂಧಿಸಿದ್ದಾರೆ.
ಬಹ್ರೇನ್ ಮಾಜಿ ಪೊಲೀಸ್ ಅಧಿಕಾರಿ ಸೇರಿದಂತೆ ಮೂವರು ಆರೋಪಿಗಳನ್ನು ಬೆಂಗಳೂರು ಎನ್ ಸಿಬಿ ಅಧಿಕಾರಿಗಳು ಬಂಧಿಸಿದ್ದು, ಬಂಧಿತರಿಂದ 1 ಕೋಟಿ ಮೌಲ್ಯದ ಹ್ಯಾಶಿಷ್ ಜಪ್ತಿ ಮಾಡಲಾಗಿದೆ.
ಕೇರಳದ ಆಯುರ್ವೆದ ಔಷಧಿ ಹೆಸರನ್ನು ಬಳಸಿ ಬ್ರಹ್ಮ ರಸಾಯನ, ನರಸಿಂಹ ರಸಾಯನ, ಅಶ್ವಗಂಧಿ ಲೇಹಂ ಎಂದು ಡ್ರಗ್ಸ್ ನ್ನು ಔಷಧಿ ರೀತಿಯಲ್ಲಿ ತಯಾರಿಸಿ, ದೇವರ ಪ್ರಸಾದ ಎಂದು ಹೇಳಿ ಕೊರಿಯರ್ ಮೂಲಕ ಬೆಂಗಳೂರಿನಿಂದ ಬಹ್ರೇನ್, ಚೆನ್ನೈ ಸೇರಿದಂತೆ ಹಲವೆಡೆ ಡ್ರಗ್ಸ್ ಮಾರಾಟ ಮಾಡುತ್ತಿದ್ದರು.
ಪ್ರಸಾದದ ನೆಪವೊಡ್ದಿ ಡ್ರಗ್ಸ್ ಸಾಗಾಟ ಮಾಡುತಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಈ ಹಿಂದೆ ಕೆಲ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದರು. ಇದೀಗ ಈ ಪ್ರಕರಣ ಪ್ರಮುಖ ಆರೋಪಿ ಮಾಜಿ ಪೊಲೀಸ್ ಅಧಿಕಾರಿ ಸೇರಿ ಮೂವರನ್ನು ಎನ್ ಸಿಬಿ ಅಧಿಕಾರಿಗಳು ಚೆನ್ನೈ ಹಾಗೂ ಕೇರಳ ಎರ್ನಾಕುಲಂ ನಲ್ಲಿ ಬಂಧಿಸಿದ್ದಾರೆ ಎಂದು ತಿಳಿದುಬಂದಿದೆ.
ಬೆಳಗಾವಿ: ಪಿಜಿಯಲ್ಲೇ ನೇಣಿಗೆ ಶರಣಾದ ವಿದ್ಯಾರ್ಥಿ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ