Latest

ಡ್ರಗ್ಸ್ ಮಾಫಿಯಾ ನಂಟು; ನಟಿ ರಾಗಿಣಿಗೆ ಸಿಸಿಬಿ ನೋಟೀಸ್

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಡ್ರಗ್ ಮಾಫಿಯಾ ಜತೆ ಸ್ಯಾಂಡಲ್‍ವುಡ್‍ನ ನಟಿ ರಾಗಿಣಿ ದ್ವಿವೇದಿಗೆ ನಂಟಿದೆ ಎಂಬ ಆರೋಪ ಕೇಳಿಬಂದಿದೆ. ಈ ಹಿನ್ನಲೆಯಲ್ಲಿ ಸಿಸಿಬಿ ಪೊಲೀಸರು ನಟಿಗೆ ನೋಟಿಸ್ ನೀಡಿದ ಬೆನ್ನಲ್ಲೇ ನಟಿ ಎಸ್ಕೇಪ್ ಆಗಿದ್ದಾಳೆ.

ಸ್ಯಾಂಡಲ್ ವುಡ್ ನಲ್ಲಿ ಡ್ರಗ್ಸ್ ನಂಟು ಪ್ರಕರಣ ಸಂಬಂಧ ಸಿಸಿಬಿ ಪೊಲೀಸರು ರಾಗಿಣಿಯವರ ಆಪ್ತ ಜಯನಗರದ ಆರ್.ಟಿ.ಒ ಅಧಿಕಾರಿ ರವಿಶಂಕರ್ ನನ್ನು ಬಂಧಿಸಿ ವಿಚಾರಣೆ ನಡೆಸಿದ್ದಾರೆ. ಆತನ ಹೇಳಿಕೆ ಪ್ರಕಾರ ನಟಿ ರಾಗಿಣಿಗೂ ಡ್ರಗ್ಸ್ ಜಾಲದ ನಂಟಿದೆ ಎಂಬುದು. ಇದೇ ಕಾರಣಕ್ಕಾಗಿ ರಾಗಿಣಿಗೆ ಸಿಸಿಬಿ ನೋಟಿಸ್ ನೀಡಿದೆ.

Home add -Advt

ಇಂದು ಬೆಳಿಗ್ಗೆ 10 ಗಂಟೆಗೆ ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದ್ದಾರೆ. ಆದರೆ ನಟಿ ರಾಗಿಣಿ ನಿನ್ನೆ ರಾತ್ರಿಯೇ ಮನೆ ಬಿಟ್ಟು ಹೊರಗೆ ಹೋಗಿದ್ದಾರೆ. ಯಲಹಂಕದ ಅವರ ಮನೆಯಲ್ಲಿ ಯಾರೂ ಇಲ್ಲ ಎಂದು ಸೆಕ್ಯುರಿಟಿ ಗಾರ್ಡ್ ತಿಳಿಸಿದ್ದಾರೆ. ಹಾಗಾದರೆ ನಟಿ ರಾಗಿಣಿ ಎಸ್ಕೇಪ್ ಆಗಿದ್ದಾರಾ? ಇಲ್ಲವೇ ಸಿಸಿಬಿ ವಿಚಾರಣೆಗೆ ಹಾಜರಾಗುವುದನ್ನು ಸಧ್ಯಕ್ಕೆ ತಪ್ಪಿಸಿಕೊಳ್ಳಲು ಪ್ರಯತ್ನ ನಡೆಸಿದ್ದಾರಾ ಎಂಬ ಅನುಮಾನ ಮೂಡಿದೆ.

Related Articles

Back to top button