Latest

ಡ್ರಗ್ಸ್ ಮಾಫಿಯಾ ಪ್ರಕರಣ; ಮಾಜಿ ಸಚಿವರ ಪುತ್ರ ಪ್ರಮುಖ ಆರೋಪಿ

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಡ್ರಗ್ಸ್ ಮಾಫಿಯಾ ಪ್ರಕರಣದಲ್ಲಿ ರಾಜಕೀಯ ಗಣ್ಯರ ಮಕ್ಕಳು ಭಾಗಿಯಾಗಿದ್ದಾರೆ ಎಂಬುದು ಬಹಿರಂಗವಾಗಿದೆ. ಡ್ರಗ್ಸ್ ಮಾಫಿಯಾ ಪ್ರಕರಣದ ಪ್ರಮುಖ ಆರೋಪಿಗಳಲ್ಲಿ ಆದಿತ್ಯ ಆಳ್ವಾ ಹೆಸರು ಪ್ರಬಲವಾಗಿ ಕೇಳಿಬಂದಿದೆ.

ಮಾಜಿ ಸಚಿವ ದಿ.ಜೀವರಾಜ್ ಆಳ್ವಾ ಪುತ್ರ ಆದಿತ್ಯ ಆಳ್ವಾ ಡ್ರಗ್ಸ್ ಮಾಫಿಯಾ ಪ್ರಕರಣದ 6ನೇ ಆರೋಪಿ ಎನ್ನಲಾಗಿದೆ. ಪ್ರಕರಣ ಸಂಬಂಧ ಸಿಸಿಬಿ ಪೊಲೀಸರು ನಟಿ ರಾಗಿಣಿ ಸೇರಿದಂತೆ 12 ಜನರ ವಿರುದ್ಧ ಎಫ್ ಐಆರ್ ದಾಖಲಿಸಿದ್ದಾರೆ.

ಶಿವಪ್ರಕಾಶ್ ಮೊದಲ ಆರೋಪಿ ಆಗಿದ್ದರೆ ರಾಗಿಣಿ ಎರಡನೇ ಆರೋಪಿಯಾಗಿದ್ದಾರೆ. ವಿರೇನ್ ಖನ್ನಾ ಎ3, ಪ್ರಶಾಂತ್ ರಂಕಾ ಎ4, ವೈಭವ್ ಜೈನ್ ಎ5, ಆದಿತ್ಯ ಆಳ್ವಾ ಎ6, ಲೂಮ್ ಪೆಪ್ಪರ್ ಎ7, ಪ್ರಶಾಂತ್ ರಿಜು ಎ8, ಅಶ್ವಿನ್ ಎ9, ಅಭಿ ಸ್ವಾಮಿ ಎ10, ರಾಹುಲ್ ಎ11, ವಿನಯ್ ಎ12 ಆರೋಪಿಗಳಾಗಿದ್ದಾರೆ.

ಆದರೆ ಈ 12 ಜನರ ಪಟ್ಟಿಯಲ್ಲಿ ಪ್ರಮುಖ ಆರೋಪಿ ರವಿಶಂಕರ್ ಹೆಸರು ಇಲ್ಲದಿರುವುದು ಅಚ್ಚರಿಗೆ ಕಾರಣವಾಗಿದೆ. ಆರ್ ಟಿಒ ಆಫೀಸರ್ ಆಗಿದ್ದ ಆರೋಪಿ ರವಿಶಂಕರ್ ಸಿಸಿಬಿ ವಿಚಾರಣೆ ವೇಳೆ ಡ್ರಗ್ಸ್ ಜಾಲದಲ್ಲಿ ನಟಿ ರಾಗಿಣಿ ಕೂಡ ಇದ್ದಾರೆ ಎಂದು ಹೇಳಿದ್ದ.

Home add -Advt

Related Articles

Back to top button