Latest

ಜಮೀರ್ ಯಾರ ಜೊತೆ ಹೋಗಿದ್ರು ಎಂಬುದು ಮುಖ್ಯವಲ್ಲ, ಆದ್ರೆ…

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಜಮೀರ್ ಕ್ಯಾಸಿನೋಗೆ ಯಾರ ಜೊತೆ ಹೋದ್ರು ಎಂಬುದು ಮುಖ್ಯವಲ್ಲ. ಅವರು ಡ್ರಗ್ಸ್ ದಂಧೆಯಲ್ಲಿ ಇದ್ರಾ? ಇದ್ದರೆ ಅದು ತಪ್ಪು. ಡ್ರಗ್ಸ್ ಪ್ರಕರಣದ ಬಗ್ಗೆ ನಿಸ್ಪಕ್ಷಪಾತ ತನಿಖೆ ನಡೆಸಬೇಕು ಎಂದು ಮಾಜಿ ಸಿಎಂ, ವಿಪಕ್ಷ ನಾಯಕ ಸಿದ್ದರಾಮಯ್ಯ ತಿಳಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಸಿದ್ದರಾಮಯ್ಯ, ಶಾಸಕ ಜಮೀರ್ ಕೊಲಂಬೋಗೆ, ಕ್ಯಾಸಿನೋಗೆ ಹೋಗಿದ್ದರೆ ಅಪರಾಧವಲ್ಲ. ಅವರು ಡ್ರಗ್ಸ್ ವ್ಯವಹಾರಗಳಲ್ಲಿ ಭಾಗಿಯಾಗಿದ್ದರೆ ಅದು ಅಪರಾಧ. ನಾನೂ ಕೂಡ ವಿದೇಶಕ್ಕೆ ಹೋದಾಗ ಕ್ಯಾಸಿನೋ ಜಾಗ ನೋಡಿದ್ದೆ. ಆದರೆ ನಾನು ಕ್ಯಾಸೊನೋ ಆಡಿಲ್ಲ ಅದೇ ರೀತಿ ಕ್ಯಾಸಿನೋಗೆ ಹೋದರೆ ಅದು ತಪ್ಪಲ್ಲ ಎಂದರು.

ಜಮೀರ್ ಕೊಲಂಬೋಗೆ ಹೋಗಿದ್ದೇ ತಪ್ಪು ಎಂಬ ಈ ರೀತಿ ವಿಷಯವನ್ನು ಅನಗತ್ಯವಾಗಿ ರಾಜಕೀಯಗೊಳಿಸಲಾಗುತ್ತಿದೆ. ಪ್ರಶಾಂತ್ ಸಂಬರಗಿ ಹಲವರ ಹೆಸರನ್ನು ಹೇಳಿದ್ದಾರೆ ಅವರ ಬಗ್ಗೆಯೂ ತನಿಖೆ ನಡೆಸಲಿ. ಯಾವುದೋ ಫೋಟೋದಲ್ಲಿ ಕಳ್ಳ ನನ್ನ ಜೊತೆಯಲ್ಲಿದ್ದಾನೆ ಎಂದು ನನ್ನನ್ನು ಕಳ್ಳ ಎಂದು ಹೇಳಲು ಆಗುತ್ತಾ? ಸಂಬರಗಿ ಬಿಜೆಪಿ ಜೊತೆ ಇದ್ದಾರೆ. ಹಾಗಂತ ನಾವು ಆ ಬಗ್ಗೆ ಮಾತನಾಡಿಲ್ಲ ಡ್ರಗ್ಸ್ ಮಾಫಿಯಾ ಪ್ರಕರಣದ ಬಗ್ಗೆ ಸರ್ಕಾರ ನಿಸ್ಪಕ್ಷಪಾತವಾಗಿ ತನಿಖೆ ನಡೆಸಲಿ. ಅದನ್ನು ಬಿಟ್ಟು ಸರ್ಕಾರದ ವೈಫಲ್ಯ ಮುಚ್ಚಿಕೊಳ್ಳಲು ಡ್ರಗ್ಸ್ ಪ್ರಕರಣ ಬಳಸಿಕೊಳ್ಳಬಾರದು ಎಂದು ಹೇಳಿದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button