ಗಿರೀಶ್ ಬಿ.
ಭಾರತದಲ್ಲಿ ಈಗ ಡ್ರಗ್ ದಂಧೆಯದ್ದೇ ಚರ್ಚೆ. ಮೊದಲು ಬೆಂಗಳೂರಿನ ಸಿನಿಮಾ ಉದ್ಯಮದಲ್ಲಿ ಬಿರುಗಾಳಿ ಎಬ್ಬಿಸಿದ ಡ್ರಗ್ಸ್ ದಂಧೆ ಈಗ ಮುಂಬೈ, ಆಂಧ್ರ ಸಿನಿಮಾ ಉದ್ಯಮಗಳಲ್ಲೂ ಕೇಳಿಬರುತ್ತಿದೆ. ಆದ್ದರಿಂದ ಭಾರತದಾದ್ಯಂತ ಈ ಡ್ರಗ್ಸ್ ದಂಧೆ ವ್ಯಾಪಿಸಿರಬಹುದು ಎಂದೇ ಹೇಳಬಹುದು. ಭಾರತದಲ್ಲಿ ಡ್ರಗ್ಸ್‌ಗಳ ಬಳಕೆ, ಮಾರಾಟ ಇವುಗಳಿಗೆ ಶಿಕ್ಷೆ ಪ್ರಮಾಣ ತೀವ್ರವಾಗಿಲ್ಲ. ಆದರೆ ಸಿಂಗಾಪೂರದಲ್ಲಿ ಡ್ರಗ್ಸ್ ಪ್ರಕರಣ ಸಾಬೀತಾದರೆ ಮರಣದಂಡನೆ ಶಿಕ್ಷೆ ಫಿಕ್ಸ್. ಭಾರತದಲ್ಲಿ ಡ್ರಗ್ಸ್ ವಿರುದ್ಧ ಅಂತಹ ಕಠಿಣ ಕಾನೂನೇ ಇಲ್ಲ. ಆದ್ದರಿಂದಲೇ ಈ ಡ್ರಗ್ಸ್ ದಂಧೆ ಮಾಡುವವರಿಗೆ ಕಡಿವಾಣವಿಲ್ಲದಂತಾಗಿದೆ. ಭಾರತದಲ್ಲಿ ಪರಿಸ್ಥಿತಿ ಹೇಗಿದೆ ಎಂದರೆ ಹಣ ಹೊಂದಿದವರು ಏನು ಬೇಕಾದರೂ ನಾಟಕವಾಡಿ, ಶಿಕ್ಷೆಯಿಂದ ಪಾರಾಗಬಹುದು. ಆದರೆ ಮಧ್ಯಮ ವರ್ಗದವರು ಮಾಡಿದ ಅಪರಾಧಕ್ಕಾದರೆ ಶಿಕ್ಷೆ ಗ್ಯಾರಂಟಿ ಎಂಬಂತಿದೆ ಭಾರತದಲ್ಲಿ. ಹಾಗಾದರೆ ಮಾನ-ಮರ್ಯಾದೆ ಇರುವುದು ಕೇವಲ ಬಡ-ಮಧ್ಯಮ ವರ್ಗದ ಜನರಿಗೆ ಮಾತ್ರವೆ?
ಇತ್ತೀಚೆಗೆ ನಮ್ಮ ರಾಜ್ಯ ಅಲ್ಲದೆ ದೇಶದಾದ್ಯಂತ ಬಿರುಗಾಳಿ ಎಬ್ಬಿಸಿರುವ ಸ್ಯಾಂಡಲ್‌ವುಡ್ ಡ್ರಗ್ಸ್‌ದಂಧೆ ತನಿಖೆ ನಡೆಸುತ್ತಿರುವ ಪೊಲೀಸರಿಗೆ ಬಹಳಷ್ಟು ಆಘಾತಕಾರಿ ಅಂಶಗಳು ಬೆಳಕಿಗೆ ಬಂದಿವೆ. ಕೇವಲ ಬೆಂಗಳೂರಿನಲ್ಲೊಂದರಲ್ಲೇ ಪ್ರತಿ ವೀಕೆಂಡ್‌ಗೆ (ವಾರದ ಕೊನೆ) ಸುಮಾರು ೧೨ ಕೋಟಿ ಮೌಲ್ಯಗಳಷ್ಟು ಡ್ರಗ್ಸ್ ಮಾರಾಟವಾಗುತ್ತಿತ್ತಂತೆ. ಒಂದು ಗ್ರಾಂ ಡ್ರಗ್ಸ್‌ಗೆ ೬ ಸಾವಿರ ರೂಪಾಯಿಗಳಾಗಿದ್ದ ಈ ಡ್ರಗ್ಸ್‌ಗಳು ಕೆಜಿಗೆ ೬ ಕೋಟಿ ಬೆಲೆ ಬಾಳುವವೆಂದು ಅಂದಾಜಿಸಲಾಗಿದೆ. ಅಲ್ಲದೆ ಡ್ರಗ್ಸ್ ಪೆಡ್ಲರ್‌ಗಳು ತಾವು ಕೇವಲ ೫೦೦ ರೂಪಾಯಿಗಳಿಗೆ ಖರೀದಿಸಿದ ಡ್ರಗ್ಸ್‌ಗಳನ್ನು ೫ ಸಾವಿರಕ್ಕೂ ಹೆಚ್ಚು ಮೌಲ್ಯಕ್ಕೆ ಮಾರಾಟ ಮಾಡುತ್ತಿದ್ದರು ಎಂಬೆಲ್ಲ ಅಂಶಗಳು ಪೊಲೀಸರು ನಡೆಸುತ್ತಿರುವ ತನಿಖೆಯಿಂದ ಬಯಲಾಗಿದೆ.
ಸಿಂಗಾಪುರದಲ್ಲಿ ಮಾದಕ ದ್ರವ್ಯ ವಶಪಡಿಸಿಕೊಳ್ಳುವುದು ಗಂಭೀರ ಅಪರಾಧ. ಮಾದಕ ಬಸ್ತುಗಳ ಬಳಕೆ, ಉತ್ಪಾದನೆ, ಆಮದು, ರಫ್ತು ಅಥವಾ ಕಳ್ಳಸಾಗಣೆ ಕಾನೂನುಬಾಹಿರ. ಡ್ರಗ್ಸ್ ಅಪರಾಧ ತೀವ್ರತರವಾಗಿ ಸಾಬೀತಾದಲ್ಲಿ ಮರಣದಂಡನೆಯನ್ನೂ ವಿಧಿಸಲಾಗುತ್ತದೆ. ಬ್ರಿಟನ್‌ನಲ್ಲಿ ಮಾದಕ ದ್ರವ್ಯ ಕಳ್ಳಸಾಗಾಣಿಕೆ ಅಪರಾಧ ಸಾಬೀತಾದಲ್ಲಿ ಏಳು ವ?ಗಳವರೆಗೆ ಜೈಲು ಶಿಕ್ಷೆ ಅಥವಾ ಅನಿಯಮಿತ ದಂಡ ವಿಧಿಸಲಾಗುತ್ತದೆ. ಅಲ್ಲದೆ ಐದು ವ?ಗಳ ಜೈಲು ಶಿಕ್ಷೆಯೂ ಗ್ಯಾರಂಟಿ. ಸ್ಪೇನ್‌ನಲ್ಲಿ ಸಾರ್ವಜನಿಕ ಸ್ಥಳದಲ್ಲಿ ಅಲ್ಪ ಪ್ರಮಾಣದ ಡ್ರಗ್ಸ್‌ಗಳನ್ನು ಹೊಂದಿದ್ದರೂ ಸಹ ಬಂಧಿಸಲಾಗುತ್ತದೆ. ಜರ್ಮನಿಯಲ್ಲಿ ಮಾದಕವಸ್ತು ಹೊಂದಿರುವ ಅಥವಾ ಮಾರಾಟ ಮಾಡುವ ಶಿಕ್ಷೆಯು ಸಂದರ್ಭಗಳನ್ನು ಅವಲಂಬಿಸಿ ಬದಲಾಗುತ್ತದೆ ಮತ್ತು ೨೧ ವ?ಕ್ಕಿಂತ ಮೇಲ್ಪಟ್ಟ ಅಪರಾಧಿಗಳಿಗೆ ಎರಡು ವ?ಗಳ ಜೈಲು ಶಿಕ್ಷೆ ಇದೆ.
ಡ್ರಗ್‌ಗ್ಸೆ ಸಂಬಂದಿಸಿದ ಮಸೂದೆ-೧೯೮೫ (The Narcotic Drugs and Psychotropic Substances Bill, 1985) ಅನ್ನು ೧೯೮೫ ರ ಆಗಸ್ಟ್ ೨೩ ರಂದು ಲೋಕಸಭೆಯಲ್ಲಿ ಪರಿಚಯಿಸಲಾಯಿತು. ಇದನ್ನು ಸಂಸತ್ತಿನ ಉಭಯ ಸದನಗಳು ಅಂಗೀಕರಿಸಿದವು. ಮಸೂದೆಯನ್ನು ಸೆಪ್ಟೆಂಬರ್ ೧೬, ೧೯೮೫ ರಂದು ರಾಷ್ಟ್ರಪತಿಗಳು ಅನುಮೋದಿಸಿದರು. ನಂತರ ಈ ಮಸೂದೆ ೧೯೮೫ ರ ನವೆಂಬರ್ ೧೪ ರಂದು ಜಾರಿಗೆ ಬಂದಿತು ನಾರ್ಕೋಟಿಕ್ ಡ್ರಗ್ಸ್ ಮತ್ತು ಸೈಕೋಟ್ರೋಪಿಕ್ ಸಬ್‌ಸ್ಟೇನ್ಸಸ್ ಆಕ್ಟ್ಟ್, ೧೯೮೫ (ಸಂಕ್ಷಿಪ್ತವಾಗಿ ಇದನ್ನು ಎನ್‌ಡಿಪಿಎಸ್ ಕಾಯ್ದೆ ಎಂದೂ ಕರೆಯಬಹುದು. ಎನ್‌ಡಿಪಿಎಸ್ ಕಾಯ್ದೆಯಡಿ, ಒಬ್ಬ ವ್ಯಕ್ತಿಯು ಯಾವುದೇ ಮಾದಕ ದ್ರವ್ಯ ಅಥವಾ ಸೈಕೋಟ್ರೋಪಿಕ್ ವಸ್ತುವನ್ನು ಉತ್ಪಾದಿಸುವುದು, ತಯಾರಿಸುವುದು, ಬೆಳೆಸುವುದು, ಹೊಂದಿರುವುದು, ಮಾರಾಟ ಮಾಡುವುದು, ಖರೀದಿಸುವುದು, ಸಾಗಿಸುವುದು, ಸಂಗ್ರಹಿಸುವುದು ಮತ್ತು ಸೇವಿಸುವುದು ಕಾನೂನುಬಾಹಿರ.
ಆದರೆ ಭಾರತದಲ್ಲಿ ಸೆಲಿಬ್ರಿಟಿಗಳು ಮಾತ್ರ ಯಾವುದೇ ಗಂಭೀರ ಅಪರಾಧ ಮಾಡಿದರೂ ಶಿಕ್ಷೆಯಿಂದ ಪಾರಾಗುವ ಘಟನೆಗಳೇ ಸಾಕಷ್ಟು ನಡೆದಿವೆ. ಉದಾಹರಣೆಗೆ ಕೆಲವು ವರ್ಷಗಳ ಹಿಂದಿನ ಬಾಲಿವುಡ್ ನಟ ಸಲ್ಮಾನ್ ಖಾನ್ ಪ್ರಕರಣ. ಈತ ತಡ ರಾತ್ರಿ ಮದ್ಯಪಾನ ಮಾಡಿ, ಕಾರುಚಲಾಯಿಸಿದ್ದಲ್ಲದೆ ರಸ್ತೆ ಬದಿ ಮಲಗಿದ್ದ ಬೇಕರಿ ಕೆಸಲಗಾರರ ಮೇಲೆ ಕಾರ್ ಹತ್ತಿಸಿ ಒಬ್ಬನ ಸಾವಿಗೆ ಕಾರಣವಾಗಿದ್ದ. ಈ ಪ್ರಕರಣದಲ್ಲಿ ಐದು ವರ್ಷ ಸಲ್ಮಾನ್‌ಗೆ ಜೈಲು ಶಿಕ್ಷೆಯಾಯಿತಾದರೂ ಅವನು ಜಾಮೀನಿನ ಮೇಲೆ ಹೊರಗೆ ಬಂದ. ಇದೇ ರೀತಿ ಇನ್ನೊಬ್ಬ ಖ್ಯಾತ ಬಾಲಿವುಡ್ ನಟ ಸಂಜಯ್ ದತ್ ಕೂಡ ಜಾಮೀನಿನ ಮೇಲೆ ಹೊರಗಿದ್ದವನೆ ಆಗಿದ್ದಾನೆ. ಹೀಗಾಗಿ ದೇಶದ ಜನರಲ್ಲಿ ನ್ಯಾಯಾಲಯಗಳು ವಿಧಿಸುವ ಶಿಕ್ಷೆಯ ಬಗ್ಗೆ ಅಲ್ಪ ಸ್ವಲ್ಪ ಸಂದೇಹವಿದೆ. ಏಕೆಂದರೆ ಸೆಲಿಬ್ರಿಟಿಗಳಿಗೆ ಒಂದು ಕಾನೂನು, ಸಾರ್ವಜನಿಕರಿಗೆ ಇನ್ನೊಂದು ತರಹದ ಕಾನೂನು ಎಂಬಂತಿದೆ ಭಾರತದ ಪರಿಸ್ಥಿತಿ.
ಈಗ ಸ್ಯಾಂಡಲ್‌ವುಡ್ ಡ್ರಗ್ ಮಾಫಿಯಾಗೆ ಸಂಬಂಧಪಟ್ಟಂತೆ ನಟಿಯಾರಾದ ರಾಗಿಣಿ ದ್ವಿವೇದಿ ಹಾಗೂ ಸಂಜನಾ ಗಲ್ರಾನಿ ಬಂಧನ ಆಗಿದೆ. ದಿಗಂತ್- ಐಂದ್ರಿತಾ ರೈ ದಂಪತಿಗಳನ್ನು ಸಿಸಿಬಿ (ಸೆಂಟ್ರಲ್ ಕ್ರೈಮ್ ಬ್ರ್ಯಾಂಚ್) ವಿಚಾರಣೆ ನಡಿಸಿದ್ದೂ ಆಗಿದೆ. ಈ ಪೈಕಿ ರಾಗಿಣಿ, ಸಂಜನಾ ಜೈಲು ಸೇರಿದ್ದಾರೆ. ರಾಜ್ಯಾದ್ಯಂತ ಈ ಪ್ರಕರಣ ಭಾರೀ ಸದ್ದು ಮಾಡುತ್ತಿದ್ದು ಇಬ್ಬರು ನಟಿಯರಿಗೆ ಕಾನೂನಿನ ಅಡಿ ಕಠಿಣ ಶಿಕ್ಷೆ ಆಗುತ್ತಾ ಎಂಬ ಕುತೂಹಲವೂ ಇದೆ. ಆದರೆ ಈ ಬಗ್ಗೆ ಅನುಮಾನಗಳೆ ಹೆಚ್ಚಾಗಿವೆ. ಡ್ರಗ್ಸ್ ಮಾಫಿಯಾ ಪ್ರಕರಣಕ್ಕೆ ಸಂಬಂಧಿಸಿದಂತೆ ನಟಿ ರಾಗಿಣಿ ನಿವಾಸದ ಮೇಲೆ ಸಿಸಿಬಿ ಅಧಿಕಾರಿಗಳು ದಾಳಿ ನಡೆಸಿದ ಸಂದರ್ಭದಲ್ಲಿ ಯಾವುದೇ ಮಾದಕ ವಸ್ತುವನ್ನು ವಶಕ್ಕೆ ಪಡೆದುಕೊಂಡಿರುವ ಬಗ್ಗೆ ದಾಖಗಳೇ ಇಲ್ಲ. ನಟಿ ಸಂಜನಾ ಬಳಿಯೂ ಮಾದಕ ವಸ್ತುಗಳು ದೊರಕಿಲ್ಲ. ಹೀಗಿದ್ದಾಗ ಅವರನ್ನು ಡ್ರಗ್ಸ್ ಪೆಡ್ಲರ್‌ಗಳೆಂದು ಸಾಬೀತು ಪಡಿಸಲು ಪೊಲೀಸರ ಬಳಿ ಯಾವ ಸಾಕ್ಷಾಧಾರಗಳೂ ಇಲ್ಲ ಎನ್ನುತ್ತವೆ ಮೂಲಗಳು. ಇತ್ತೀಚಿನ ವರದಿಗಳ ಪ್ರಕಾರ ರಾಗಿಣಿ ಮನೆ ಮಾರಾಟಕ್ಕಿಡಲಾಗಿದೆಯಂತೆ. ರಾಗಿಣಿಗೆ ಎದುರಾದ ಹಣದ ಕೊರತೆಯೇ ಇದಕ್ಕೆ ಕಾರಣವಿರಬಹುದು.
ಇಬ್ಬರು ನಟಿಯರ ಮೇಲೆ ಇರುವ ಆರೋಪವೆಂದರೆ ಲಾಕ್‌ಡೌನ್ ಅವಧಿಯಲ್ಲಿ ಆ ನಟಿಯರು ಮಾಡಿದ ಪಾರ್ಟಿಗಳು ಹಾಗೂ ಪಾರ್ಟಿಗಳಲ್ಲಿ ಡ್ರಗ್ಸ್ ಸೇವನೆ ಮಾಡಿದ್ದಾರೆ ಎನ್ನುವುದಾಗಿದೆ. ಇದನ್ನು ಸಾಬೀತು ಪಡಿಸಲು ಅವರ ರಕ್ತ ಹಾಗೂ ತಲೆಕೂದಲು ಸ್ಯಾಂಪಲ್‌ಗಳನ್ನು ಪರೀಕ್ಷೆಗೆ ಒಳಪಡಿಸಲಾಗಿದೆ. ಅವರು ಡ್ರಗ್ಸ್ ಸೇವಿಸಿದ ಪ್ರಮಾಣದ ಅಧಾರದ ಮೇಲೆ ಅವರ ಮೇಲೆ ಪ್ರಕರಣ ದಾಖಲಿಸಬಹುದು. ಒಂದು ವೇಳೆ ಇದು ಸಾಬೀತಾದರೆ ಮಾತ್ರ ನಟಿಯರ ವಿರುದ್ಧ ಡ್ರಗ್ಸ್ ಸೇವನೆ ಪ್ರಕರಣ ದಾಖಲಿಸಬಹುದು.
ಆದರೆ ಈ ಪ್ರಕರಣದಲ್ಲಿ ಬಹುತೇಕ ಅಂತೆ ಕಂತೆಗಳೇ ಸದ್ದು ಮಾಡುತ್ತಿವೆ. ಒಂದು ವೇಳೆ ಲಾಕ್‌ಡೌನ್ ಅವಧಿಯಲ್ಲಿ ಪಾರ್ಟಿಗಳು ನಡೆದರೆ ಆ ಸ್ಥಳಲ್ಲಿ ಸಂಬಂಧಪಟ್ಟ ಪೊಲೀಸ್ ಠಾಣೆಯ ಪೊಲೀಸ್ ಅಧಿಕಾರಿಯೂ ಅದಕ್ಕೆ ಹೊಣೆಗಾರ. ನ್ಯಾಯಾಲಯದಲ್ಲಿ ಸಾಕ್ಷ್ಯ ನುಡಿದರೆ, ಆ ಪೊಲೀಸ್ ಅಧಿಕಾರಿಯನ್ನು ಕರ್ತವ್ಯ ಲೋಪದ ಅಪರಾಧದ ಮೇಲೆ ನ್ಯಾಯಾಲಯವು ಅಮಾನತ್ತುಗೊಳಿಸುವ ಸಾಧ್ಯತೆಯೂ ಇದೆ. ಇಂತಹ ಸಂದರ್ಭದಲ್ಲಿ ಅಧಿಕಾರಿ ಸಾಕ್ಷಿ ಹೇಳಿ, ತನ್ನನ್ನು ತೊಂದರೆಗೆ ಸಿಲುಕಿಸಿಕೊಳ್ಳಲು ಇಚ್ಛಿಸುವುದಿಲ್ಲ. ಆದ್ದರಿಂದ ಪ್ರಕರಣ ಖುಲಾಸೆಗೊಳ್ಳುವ ಸಾಧ್ಯತೆಯೇ ಹೆಚ್ಚು. ಭಯೋತ್ಪಾದನೆಯನ್ನು ಹೇಗೆ ಈಗಿನ ಕೇಂದ್ರ ಸರ್ಕಾರ ಕಠಿಣ ನಿರ್ಧಾರಗಳ ಮೂಲಕ ಹತೋಟಿಯಲ್ಲಿಟ್ಟಿದೆಯೋ ಅದೇ ರೀತಿ ಡ್ರಗ್ಸ್ ದಂಧೆಯನ್ನೂ ಕಠಿಣ ಶಿಕ್ಷೆಗಳ ಮೂಲಕ ಮಾತ್ರ ತಡೆಗಟ್ಟಬಹುದು. ದೇಶದಾದ್ಯಂತ ಎಲ್ಲೆಡೆ ವ್ಯಾಪಿಸಿರುವ ಈ ಡ್ರಗ್ಸ್ ದಂಧೆಯನ್ನು ಬೇರು ಸಮೇತ ಕಿತ್ತೊಗೆದಾಗ ಮಾತ್ರ ಡ್ರಗ್ಸ್ ರಹಿತ ಸಮಾಜ ನಿರ್ಮಾಣ ಸಾಧ್ಯ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ