Kannada NewsKarnataka NewsNational

ಲಾಡ್ಜ್ ನಲ್ಲಿ ರೆಡ್‌ಹ್ಯಾಂಡ್ ಆಗಿ ಸಿಕ್ಕಿ ಬಿದ್ದ ಡಿಎಸ್ ಪಿಗೆ ಹಿಂಬಡ್ತಿ ಶಿಕ್ಷೆ ‌

ಪ್ರಗತಿವಾಹಿನಿ ಸುದ್ದಿ: ಮಹಿಳಾ ಪೊಲೀಸ್ ಪೇದೆ ಜೊತೆ ಲಾಡ್ಜ್ ನಲ್ಲಿ ರೆಡ್‌ಹ್ಯಾಂಡ್ ಆಗಿ ಸಿಕ್ಕಿ ಬಿದ್ದ ಡಿಎಸ್ ಪಿ ಯನ್ನುಹಿಂಬಡ್ತಿ ನೀಡಿ ಮತ್ತೆ ಕಾನ್ಸ್‌ಟೇಬಲ್‌  ಮಾಡಿರುವ ಘಟನೆ ಉತ್ತರ ಪ್ರದೇಶದ ಲಖ್ನೋನಲ್ಲಿ ನಡೆದಿದೆ. 

ಲಾಡ್ಜ್ ನಲ್ಲಿ ಒಂದೇ ಕೊಠಡಿಯಲ್ಲಿ ಮಹಿಳಾ ಪೇದೆ ಜತೆ ಇದ್ದ ಪೊಲೀಸ್‌ ಅಧಿಕಾರಿಯನ್ನು ಅದೇ ಠಾಣೆಯ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಬಿಘಾಪುರ ಠಾಣೆಯ ಡಿಎಸ್ ಪಿ ಕೃಪಾ ಶಂಕರ್ ಕನೌಜಿಯಾ ಹೀಗೆ ಕಾನ್ಸ್ ಟೆಬಲ್ ಆಗಿ ಹಿಂಬಡ್ತಿ ಪಡೆದವರು. ಇವರು ಇತ್ತೀಚೆಗಷ್ಟೆ ಡಿಎಸ್ ಪಿಯಾಗಿ ಬಡ್ತಿ ಪಡೆದಿದ್ದರು. ಈ ಮೊದಲು ಇವರ ವಿರುದ್ಧ ರಾಸಲೀಲೆಯ ಪ್ರಕರಣಗಳ ಬಗ್ಗೆ ದೂರುಗಳು ಕೇಳಿಬಂದಿದ್ದವು. ಬಡ್ತಿ ಪಡೆಯುತ್ತಿದ್ದಂತೆ ಮತ್ತೆ ಅದೇ ದಾರಿಯಲ್ಲಿದ್ದರು.

ಬಡ್ತಿ ಪಡೆದು ಕಾರ್ಯ ನಿರ್ವಹಿಸುತ್ತಿದ್ದ ಅದೇ ಠಾಣೆಯ ಮಹಿಳಾ ಪೇದೆ ಜತೆ ಸಲುಗೆಯಿಂದ ಇದ್ದರು. ಅದೇ ಮಹಿಳಾ ಪೇದೆ ಜೊತೆ ತನ್ನ ರಾಸಲೀಲೆ ಶುರುಮಾಡಿದ್ದಾರೆ. ಲಾಡ್ಜ್ ಮೇಲೆ ಪೊಲೀಸ್ ದಾಳಿ ಮಾಡಿದ ಸಂದರ್ಭದಲ್ಲಿ ಮಹಿಳಾ ಪೊಲೀಸ್ ಜತೆ ಅಸಭ್ಯ ಭಂಗಿಯಲ್ಲಿದ್ದರು. ಇದನ್ನು ಆಧರಿಸಿ ಹೆಚ್ಚುವರಿ ಪೊಲೀಸ್ ಆಯುಕ್ತರು ಡಿಎಸ್‌ಪಿಗೆ ಹಿಂಬಡ್ತಿ ಶಿಕ್ಷೆ ವಿಧಿಸಿದ್ದಾರೆ.‌

ಒಂದು ವಾರ ರಜೆ ಪಡೆದಿದ್ದ ಡಿಎಸ್ ಪಿ ಕನೂಜಿಯಾ ಮಹಿಳಾ ಪೊಲೀಸ್ ಪೇದೆ ಜೊತೆ ಲಾಡ್ಜ್ ಗೆ ಹೋಗಿದ್ದಾರೆ. ಈ ವೇಳೆ ಡಿಎಸ್ ಪಿ ಎರಡೂ ಮೊಬೈಲ್‌ಗಳನ್ನು ಸ್ವಿಚ್ ಆಫ್ ಮಾಡಿದ್ದಾರೆ. ಡಿಎಸ್ ಪಿ ಮನೆಗೆ ಬರದ ಕಾರಣ ಆತಂಕಗೊಂಡ ಪತ್ನಿ ಹಾಗೂ ಕುಟುಂಬಸ್ಥರು, ಉನ್ನಾವೋ ಪೊಲೀಸ್ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಿಸಿದ್ದಾರೆ. ಈ ದೂರು ಆಧರಿಸಿ ಹೊರಟ ಪೊಲೀಸರು ಮೋಬೈಲ್ ನೆಟ್‌ವರ್ಕ್‌ ಆಧಾರದ ಮೇಲೆ ಲಾಡ್ಜ್ ತಲುಪಿದ್ದಾರೆ. ಅಲ್ಲಿ ಹೋಗಿ ನೋಡಿದರೆ ಕಾನ್ಪುರ ಲಾಡ್ಜ್ ನಲ್ಲಿ ಅಸಹ್ಯವಾಗಿ ಸಿಕ್ಕಿ ಬಿದ್ದಿದ್ದಾರೆ.

Home add -Advt

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button