![](https://pragativahini.com/wp-content/uploads/2025/02/govardhan-.jpg)
ಪ್ರಗತಿವಾಹಿನಿ ಸುದ್ದಿ: ಪ್ರೋಬೇಷನರಿ ಡಿವೈಎಸ್ ಪಿ ಗೋವರ್ಧನ್ ವಿರುದ್ಧ ಪತ್ನಿ ಗಂಭೀರ ಆರೋಪ ಮಾಡಿದ್ದು, ಪರಸ್ತ್ರೀ ಸಹವಾಸ ಮಾಡಿ ತನ್ನ ಕೊಲೆಗೆ ಸಂಚು ರೂಪಿಸಿದ್ದಾರೆ ಎಂದು ಬೆಂಗಳೂರಿನ ಹೈಗ್ರೌಂಡ್ಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ಪತ್ನಿ ಅಮೃತಾ ದೂರು ಹಿನ್ನೆಲೆಯಲ್ಲಿ ಡಿವೈ ಎಸ್ ಪಿ ಗೋವರ್ಧನ್, ಪೋಷಕರು ಹಾಗೂ ಅವರ ಗೆಳತಿ ಮಹಿಳಾ ಅಧಿಕಾರಿ ವಿರುದ್ಧ ಎಫ್ಐಆರ್ ದಾಖಲಾಗಿದೆ. ಪರಸ್ತ್ರೀಗೆ ಇಬ್ಬರು ಮಕ್ಕಳಿದ್ದರೂ ಆಕೆಯ ಸಹವಾಸ ಮಾಡಿರುವ ಪತಿ ಪ್ರೊಬೇಷನರಿ ಡಿವೈ ಎಸ್ ಪಿ ಗೋವರ್ಧನ್, ತನ್ನ ಮೇಲೆ ಹಲ್ಲೆ ನಡೆಸಿದ್ದಾರೆ. ಅಲ್ಲದೇ ಕೊಲೆಗೆ ಸಂಚು ರೂಪಿಸಿದ್ದಾರೆ ಎಂದು ಆರೋಪಿಸಿದ್ದಾರೆ.
ಗೋವರ್ಧನ್ ಎಲ್ಲೇ ಕೆಲಸಕ್ಕೆ ಸೇರಿದರೂ ಆಕೆಯೂ ಅಲ್ಲಿಗೆ ಬರುತ್ತಾಳೆ. ಇಬ್ಬರೂ ಅತಿಯಾದ ಸಲುಗೆಯಿಂದ ಓಡಾಡುತ್ತಿದ್ದಾರೆ. ಈ ಬಗ್ಗೆ ಪ್ರಶ್ನೆ ಮಾಡಿದ್ದಕ್ಕೆ ನನ್ನ ಮೇಲೆ ಹಲ್ಲೆ ನಡೆಸಲಾಗಿದೆ. ಆಕೆಗೆ ತನ್ನ ಪತಿ ಸಹವಾಸ ಮಡದಂತೆ ಹೇಳಿದ್ದಕ್ಕೆ ನನ್ನ ಮೇಲೆ ಸುಳ್ಳು ಕೇಸ್ ಹಾಕುವುದಾಗಿ ಬೆದರಿಕೆ ಹಾಕಿದ್ದಾಳೆ. ಅಲ್ಲದೇ ಪತಿ ತನಗೆ ಡಿವೋರ್ಸ್ ಕೊಡುವುದಾಗಿ ಬೆದರಿಕೆ ಹಾಕಿ, ಹೊಟ್ಟೆಗೆ ಒದ್ದು ಹಲ್ಲೆ ನಡೆಸಿದ್ದಾರೆ ಎಂದು ಅಮೃತಾ ದೂರಿದ್ದಾರೆ. ಅತ್ತ-ಮಾವನ ಬಳಿ ಹೇಳಿದಾಗ ಅವರೂ ನನ್ನ ಬೆಂಬಲಕ್ಕೆ ನಿಂತಿಲ್ಲ. ಅತ್ತೆ ನನ್ನ ಮೇಲೆಸೀಮೆ ಎಣ್ಣೆ ಸುರಿದು ಹತ್ಯೆಗೆ ಯತ್ನಿಸಿದರು. ಈ ಎಲ್ಲಾ ಘಟನೆಯಿಂದ ನೊಂದು ಡಿಜಿಗೆ ದೂರು ನೀಡಿದ್ದೆ. ಇಲಕಹೆ ಇಬ್ಬರೀಗು ನೋಟಿಸ್ ನೀಡಿ ವಿಚಾರಣೆ ನಡೆಸಿತು.
ಕೆಲ ದಿನಗಳ ಬಳಿಕ ಮತ್ತೆ ಗೋವರ್ಧನ್ ಹಾಗೂ ಅವರ ಗೆಳತಿ ಒಟ್ಟಿಗೆ ಓಡಾಡುತ್ತಿದ್ದಾರೆ. ಪ್ರಶ್ನೆ ಮಡಿದ್ದಾಕ್ಕೆ ನನನಗೆ ಕೊಲೆ ಬೆದರಿಕೆ ಹಾಕಿದ್ದಲ್ಲದೇ, ಕೊಲೆಗೆ ಸಂಚು ರೂಪಿಸಿದ್ದಾರೆ ಎಂದು ಅಮೃತಾ ಹೈಗ್ರೌಂಡ್ಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ದೂರಿನ ಹಿನ್ನೆಲೆಯಲ್ಲಿ ಡಿವೈ ಎಸ್ ಪಿ ಗೋವರ್ಧನ್, ಅವರ ಪೋಷಕರು ಹಾಗೂ ಗೆಳತಿ ವಿರುದ್ಧ ಎಫ್ಐಆರ್ ದಾಖಲಾಗಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ