
ಪ್ರಗತಿವಾಹಿನಿ ಸುದ್ದಿ: ವಿತ್ತ ಸಚಿವೆ ನಿರ್ಮಲಾ ಸೀತಾರಾಅಮನ್, 2026-27ನೇ ಸಾಲಿನ ಆರ್ಥಿಕ ಸಮೀಕ್ಷಾ ವರದಿಯನ್ನು ಲೋಕಸಭೆಯಲ್ಲಿ ಮಂಡಿಸಿದ್ದಾರೆ.
ಈ ವರದಿ ಪ್ರಕಾರ ದೇಶದ ಜಿಡಿಪಿ 2026-27ರಲ್ಲಿ ಶೇ. 6.8-7.2ರಷ್ಟು ಬೆಳೆಯಬಹುದು ಎಂದು ನಿರೀಕ್ಷಿಸಲಾಗಿದೆ. ಮುಖ್ಯ ಆರ್ಥಿಕ ಸಲಹೆಗಾರ ವಿ ಅನಂತನಾಗೇಶ್ವರನ್ ನೇತೃತ್ವದ ತಂಡವು ಆರ್ಥಿಕ ಸಮೀಕ್ಷೆಯ ವರದಿ ತಯಾರಿಸಿದೆ.
ಸ್ಥೂಲ ಆರ್ಥಿಕ ಮೂಲಭೂತ ಅಂಶಗಳು ಪ್ರಬಲವಾಗಿರುವುದು ಹಾಗೂ ಸರ್ಕಾರದ ಸುಧಾರಣಾ ಕ್ರಮಗಳು ದೇಶದ ಆರ್ಥಿಕ ವೇಗಕ್ಕೆ ಪುಷ್ಟಿ ಕೊಡುವುದರಿಂದ ಜಿಡಿಪಿ ಬೆಳವಣಿಗೆ ಪಡೆಬಹುದು ಎಂದು ಸಮೀಕ್ಷೆಯಲ್ಲಿ ತಿಳಿಸಲಾಗಿದೆ.
ಬಜೆಟ್ ಮಂಡೆನೆಗೂ ಕೆಲ ದಿನಗಳ ಮೊದಲು ಆರ್ಥಿಕ ಸಮೀಕ್ಷಾ ವರದಿಯನ್ನು ರಚಿಸಿ ಬಿಡುಗಡೆ ಮಾಡಲಾಗುತ್ತದೆ. ಪ್ರಸಕ್ತ ವರ್ಷದಲ್ಲಿ ಆರ್ಥಿಕ ಪರಿಸ್ಥಿತಿ ಮತ್ತು ಬೆಳವಣಿಗೆ ಹೇಗಿತ್ತು, ಮುಂಬರುವ ವರ್ಷದಲ್ಲಿ ಹೇಗಿರಲಿದೆ ಎಂಬುದನ್ನು ಈ ವರದಿಯಲ್ಲಿ ಅವಲೋಕಿಸಲಾಗುತ್ತದೆ.




